Advertisment

ಅತಿಯಾಗಿ ಫ್ರೂಟ್ಸ್​ ಜ್ಯೂಸ್ ಕುಡಿಯೋರೆ ಎಚ್ಚರ! ನೀವು ಓದಲೇಬೇಕಾದ ಪ್ರಮುಖ ಸ್ಟೋರಿ ಇದು!

author-image
Veena Gangani
Updated On
ಅತಿಯಾಗಿ ಫ್ರೂಟ್ಸ್​ ಜ್ಯೂಸ್ ಕುಡಿಯೋರೆ ಎಚ್ಚರ! ನೀವು ಓದಲೇಬೇಕಾದ ಪ್ರಮುಖ ಸ್ಟೋರಿ ಇದು!
Advertisment
  • ಜನರು ಹಣ್ಣಿಗಿಂತ ಅತಿಯಾಗಿ ಆ ಹಣ್ಣಿನ ಜ್ಯೂಸ್​ ಮಾಡಿ ಕುಡಿಯುವುದು ಏಕೆ ಗೊತ್ತಾ?
  • ಅತಿಯಾಗಿ ಹಣ್ಣಿನ ರಸವನ್ನು ಕುಡಿಯುವುದರಿಂದ ಆಗುವ ಅಡ್ಡ ಪರಿಣಾಮಗಳೇನು?
  • ಜ್ಯೂಸ್‌ ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಏರಿಕೆ

ಫ್ರೆಶ್ ಫ್ರೂಟ್ ಜ್ಯೂಸ್ ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಮನೆಯಿಂದ ಹೊರ ಬರೋದಕ್ಕೂ ಜನರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಉರಿ ಬಿಸಿಲಿನಲ್ಲಿ ಜನರು ಅತಿ ಹೆಚ್ಚಾಗಿ ತಂಪು ಪಾನೀಯತ್ತ ಮುಖ ಮಾಡುತ್ತಿದ್ದಾರೆ.

Advertisment

ಇದನ್ನೂ ಓದಿ:ಎಚ್ಚರ.. ಪ್ರತಿದಿನ ಸ್ನಾನ ಮಾಡದೇ ನಿರ್ಲಕ್ಷ್ಯ ತೋರಿದ್ರೆ ಕಾಡುತ್ತೆ ಈ ಭಯಾನಕ ಕಾಯಿಲೆ; ಏನದು?

ಅದರಲ್ಲೂ ತಾಜಾ ಹಣ್ಣಿನ ಜ್ಯೂಸ್‌ ಕುಡಿಯುವುದು ಆರೋಗ್ಯಕ್ಕೂ ಉತ್ತಮ ಅಂತಾ ಸಾಕಷ್ಟೂ ಜನ ಅಂದುಕೊಂಡಿರುತ್ತಾರೆ. ಆದರೆ ಪ್ರತಿನಿತ್ಯ ತಂಪು ಪಾನೀಯ, ಫ್ರೆಶ್ ಫ್ರೂಟ್ ಜ್ಯೂಸ್ ಕೂಡಿದರೇ ಅಪಾಯ ಕಟ್ಟಿಟ್ಟ ಬುತ್ತಿಯಂತೆ. ಹೌದು, ನಾವೆಲ್ಲ ಮನೆಯಲ್ಲಿ ಜ್ಯೂಸ್​ ಮಾಡಿಕೊಂಡು ದೊಡ್ಡ ದೊಡ್ಡ ಗ್ಲಾಸ್​ನಲ್ಲಿ ಕೂಡಿಯುತ್ತೇವೆ. ಕಾರಣ ಇಂತಹ ಉರಿ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು. ಆದರೆ ಅದೇ ನಾವೂ ಹೋಟೆಲ್‌ಗಳಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಚಿಕ್ಕ ಗ್ಲಾಸ್‌ನಲ್ಲಿ ಜ್ಯೂಸ್‌ ಕೊಡುತ್ತಾರೆ. ಅದಕ್ಕೆ ಮುಖ್ಯವಾದ ಕಾರಣ ಕೂಡ ಇದೆ. ಹಣ್ಣಿನ ಜ್ಯೂಸ್‌ ನಾವು ಅಂದುಕೊಳ್ಳುವಷ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಣ್ಣಿನ ಜ್ಯೂಸ್​ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಮಾತ್ರ ದೇಹಕ್ಕೆ ಅವಶ್ಯ ಪೋಷಕಾಂಶ ಸಿಗುತ್ತದೆ.

publive-image

ಜನರು ಹಣ್ಣಿಗಿಂತ ಅತಿಯಾಗಿ ಜ್ಯೂಸ್​ ಕುಡಿಯುವುದು ಏಕೆ ಎಂಬುವುದರ ಬಗ್ಗೆ ಎನ್ನುತ್ತಾರೆ ಗುರುಗ್ರಾಮದ ಆರ್ಟೆಮಿಸ್‌ ಆಸ್ಪತ್ರೆಯ ಕ್ಲಿನಿಕಲ್‌ ಡಯಟಿಷಿನ್‌ ಡಾ. ಸಂಗೀತಾ ತಿವಾರಿ ತಿಳಿಸಿದ್ದಾರೆ. ಕೆಲವರು ಹಣ್ಣು ತಿನ್ನುವುದಕ್ಕಿಂತ ಜಾಸ್ತಿ ಜ್ಯೂಸ್‌ ಕುಡಿಯುವುದನ್ನು ಇಷ್ಟಪಡುತ್ತಾರೆ. ಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಆದರೆ ಇದನ್ನು ಜ್ಯೂಸ್‌ ಮಾಡಿ ಕೂಡಿದಾಗ ನಾರಿನಾಂಶ ಹೊರ ಹೋಗುತ್ತದೆ. ಆ ಕಾರಣಕ್ಕೆ ಹಣ್ಣನ್ನು ನೇರವಾಗಿ ತಿನ್ನುವುದು ಉತ್ತಮ ಎನ್ನುತ್ತಾರೆ ವೈದ್ಯರು. ಇನ್ನು ನಾರಿನಾಂಶ ಇಲ್ಲದ ಹಣ್ಣಿನ ರಸವು ದೇಹದಲ್ಲಿ ಸಕ್ಕರೆಯ ಮಟ್ಟ ವೇಗವಾಗಿ ಏರಿಕೆಯಾಗಲು ಕಾರಣವಾಗುತ್ತದೆ. ಹಣ್ಣಿನ ರಸದಲ್ಲಿ ಹೆಚ್ಚು ಕ್ಯಾಲೊರಿ ಅಂಶವಿರುತ್ತದೆ. ಏಕೆಂದರೆ ಹಣ್ಣಿನ ರಸವನ್ನು ತಯಾರಿಸಲು ಒಂದಕ್ಕಿಂತ ಹೆಚ್ಚು ಹಣ್ಣು ಸೇರಿಸುತ್ತೇವೆ. ಇದರಿಂದ ಕ್ಯಾಲೊರಿ ಅಂಶ ಹೆಚ್ಚಬಹುದು.

Advertisment

publive-image

ಅತಿಯಾಗಿ ಹಣ್ಣಿನ ರಸವನ್ನು ಕುಡಿಯುವುದರಿಂದ ಆಗುವ ಅಡ್ಡ ಪರಿಣಾಮಗಳೇನು?

ತಾಜಾ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಅದರಲ್ಲೂ ಸಕ್ಕರೆ ಸೇರಿದ ಹಣ್ಣಿನ ಜ್ಯೂಸ್‌ನಿಂದ ಅಪಾಯ ಹೆಚ್ಚು. ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ತಯಾರಿಸಿದ ಜ್ಯೂಸ್‌ ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಏರಿಕೆಯಾಗುತ್ತದೆ. ಮಧುಮೇಹಿಗಳಿಗೆ ಇದು ಸಮಸ್ಯೆ ಉಂಟು ಮಾಡಬಹುದು. ಹಣ್ಣಿನ ರಸದಲ್ಲಿ ಕ್ಯಾಲೊರಿ ಅಂಶ ದಟ್ಟವಾಗಿರುತ್ತದೆ. ಕ್ಯಾಲೊರಿ ಅಂಶ ಪರಿಗಣಿಸದೇ ಹೆಚ್ಚಿನ ಪ್ರಮಾಣದಲ್ಲಿ ಹಣ್ಣಿನ ರಸವನ್ನು ಕುಡಿಯುವುದು ತೂಕ ಹೆಚ್ಚಾಗಲು ಕಾರಣವಾಗುವುದು ಮಾತ್ರವಲ್ಲ ತೂಕ ನಿರ್ವಹಣೆಗೂ ಕಷ್ಟವಾಗಬಹುದು.ಸಕ್ಕರೆ ಸೇರಿಸಿದ ಹಣ್ಣಿನ ರಸವನ್ನು ಆಗಾಗ್ಗೆ ಕುಡಿಯುವುದರಿಂದ ಹಲ್ಲು ಹುಳುಕುಗಾವುದು, ದಂತಕ್ಷಯ ಮತ್ತು ದಂತಕವಚದ ಸವೆತದ ಅಪಾಯನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment