newsfirstkannada.com

ಅತಿಯಾದ್ರೆ ಅಮೃತವೂ ಅಪಾಯ.. ನೀವು ದಿನ ಅತಿಯಾಗಿ ಹಾಲು ಕುಡಿತಾ ಇದ್ದೀರಾ; ಹಾಗಿದ್ರೆ ಈ ಸ್ಟೋರಿ ಓದಲೇಬೇಕು!

Share :

Published June 2, 2024 at 2:48pm

Update June 2, 2024 at 2:54pm

  ಹೆಚ್ಚೆಚ್ಚು ಹಾಲು ಕುಡಿಯುವುದರಿಂದ ದೇಹಕ್ಕೆ ಏನಾಗುತ್ತೆ ಗೊತ್ತಾ?

  ದಿನದಲ್ಲಿ ಲೆಕ್ಕವಿಲ್ಲದಷ್ಟು ಬರೀ ಹಾಲು ಕುಡಿಯುವವರೇ ಎಚ್ಚರ

  ಹಾಲು ಕುಡಿಯುವುದರಿಂದ ಉಂಟಾಗುವ ದುಷ್ಪರಿಣಾಮಗಳೇನು?

ಹಾಲು ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಹಾಲು ಕುಡಿದು ಮಲಗುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ದಿನದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಹಾಲು ಆಧಾರಿತ ಚಹಾ ಮತ್ತು ಕಾಫಿ ಪಾನೀಯಗಳನ್ನು ಕುಡಿಯುತ್ತಾರೆ. ಆದರೆ ಹೀಗೆ ಹೆಚ್ಚೆಚ್ಚು ಹಾಲನ್ನು ಕುಡಿಯುವುದರಿಂದ ದೇಹದಲ್ಲಿ ಉಂಟಾಗುವ ದುಷ್ಪರಿಣಾಮಗಳೇನು ಅಂತ ನಿಮಗೆ ಗೊತ್ತೆ? ಹಾಗಾದರೆ ನೀವು ಈ ಸ್ಟೋರಿಯನ್ನು ಓದಲೇಬೇಕು.

ಹೌದು, ಪ್ರತಿನಿತ್ಯ ಜನರು ಅವರಿಗೆ ಗೊತ್ತಿಲ್ಲದೇ ಸಾಕಷ್ಟು ಪ್ರಮಾಣದಲ್ಲಿ ಹಾಲನ್ನು ಕುಡಿಯುತ್ತಾ ಇರುತ್ತಾರೆ. ಹಾಲನ್ನು ಕೂಡಿದರೇ ಜೀವಸತ್ವಗಳು ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಜೊತೆಗೆ ಹಾಲು ಅತ್ಯುತ್ತಮ ಸಸ್ಯ ಆಧಾರಿತ ಪ್ರೋಟೀನ್​ಗಳಲ್ಲಿ ಒಂದಾಗಿದೆ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಅವು ನಮ್ಮ ಮೂಳೆಗಳನ್ನು ಬಲಪಡಿಸುತ್ತವೆ. ಹಾಗೆಯೇ ನಮ್ಮ ಕೀಲುಗಳು ಕೂಡ ಬಲಗೊಳ್ಳುತ್ತವೆ. ಹಾಗಂತ ಅತಿಯಾಗಿ ಹಾಲನ್ನು ಸೇವಿಸಿದರೇ ಏನಾಗುತ್ತದೆ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಇದನ್ನೂ ಓದಿ: ಹೊಟ್ಟೆ ತುಂಬಾ ಬಿರಿಯಾನಿ ತಿಂದ ಮಹಿಳೆ ದಿಢೀರ್‌ ಸಾವು; ಬರೋಬ್ಬರಿ 178 ಮಂದಿ ಆಸ್ಪತ್ರೆಗೆ ದಾಖಲು

ಹೆಚ್ಚು ಹಾಲು ಕುಡಿಯುವುದರಿಂದ ಉಂಟಾಗುವ ದುಷ್ಪರಿಣಾಮಗಳೇನು?

ಹೆಚ್ಚು ಹಾಲು ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳೆಂದರೆ, ಹೊಟ್ಟೆ ಉಬ್ಬುವುದು, ಗ್ಯಾಸ್, ಅತಿಸಾರ, ಹೊಟ್ಟೆ ಸೆಳೆತ ಸೇರಿ ಇನ್ನಿತರ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತದೆ. ಹಾಲಿನ ಮಿತಿಮೀರಿದ ಬಳಕೆ, ವಿಶೇಷವಾಗಿ ಪೂರ್ಣ-ಕೊಬ್ಬಿನ ಹಾಲು, ಹೆಚ್ಚುವರಿ ಕ್ಯಾಲೋರಿ ಸೇವನೆಗೆ ಕಾರಣವಾಗುತ್ತದೆ. ಇದು ಸಂಭಾವ್ಯ ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು. ಸಂಪೂರ್ಣ ಹಾಲು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಅತಿಯಾದ ಹಾಲು ಸೇವನೆಯು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ನಿಮ್ಮ ದೇಹವು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗ ಸ್ಥಿತಿಯಲ್ಲಿ ಇರುತ್ತದೆ.

ವಿಶೇಷ ವರದಿ: ವೀಣಾ ಗಂಗಾಣಿ ಡಿಜಿಟಲ್​ ಡೆಸ್ಕ್​ ನ್ಯೂಸ್​ಫಸ್ಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತಿಯಾದ್ರೆ ಅಮೃತವೂ ಅಪಾಯ.. ನೀವು ದಿನ ಅತಿಯಾಗಿ ಹಾಲು ಕುಡಿತಾ ಇದ್ದೀರಾ; ಹಾಗಿದ್ರೆ ಈ ಸ್ಟೋರಿ ಓದಲೇಬೇಕು!

https://newsfirstlive.com/wp-content/uploads/2024/06/milk1.jpg

Load More