/newsfirstlive-kannada/media/post_attachments/wp-content/uploads/2024/11/BEER-INTAKE-4.jpg)
ಬೀಯರ್​, ಮಾನವ ಬದುಕಿನೊಂದಿಗೆ ಒಂದು ನಂಟನ್ನು ಬಹಳಷ್ಟು ವರ್ಷಗಳಿಂದ ತಳಕು ಹಾಕಿಕೊಂಡು ಬಂದಿದೆ. ಎಂದೂ ಕುಡಿಯದ ಫ್ರೆಂಡ್​ಗೆ, ಬೀಯರ್​ಗೆ ಏನು ಆಗಲ್ಲ ಮಗ ತಗೋ ಅಂತ ಹೇಳಿ ಅವನನ್ನು ಸುರಲೋಕದ ತಂಡಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆಗಳು ನಡೆಯುತ್ತವೆ. ಇನ್ನು ಆರೋಗ್ಯದ ವಿಷಯಕ್ಕೆ ಬಂದಾಗ ಬೀಯರ್ ಹಲವು ಬಾರಿ ಚರ್ಚೆಯ ಮುನ್ನೆಲೆಗೆ ಬರುತ್ತೆ. ಇಷ್ಟು ಬೀಯರ್ ಕುಡದ್ರೆ ಯಾವ ಅಪಾಯವೂ ಇಲ್ಲ. ಬೀಯರ್ ಕುಡಿಯುವುದರಿಂದ ಇದಾಗುತ್ತದೆ, ಅದಾಗುತ್ತದೆ ಎಂಬ ಮಾತುಗಳನ್ನು ಕೇಳುತ್ತೇವೆ. ಆದ್ರೆ ಅವರಿವರು ಹೇಳುವ ಮಾತುಗಳಿಗಿಂತ ತಜ್ಞರು ಹೇಳುವ ಮಾತುಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಅದರ ಬಗ್ಗೆ ನಡೆದ ಅಧ್ಯಯನಗಳು ಅಸಲಿ ಸತ್ಯಾಂಶವನ್ನು ಹೊರ ಹಾಕುತ್ತವೆ.
/newsfirstlive-kannada/media/post_attachments/wp-content/uploads/2024/11/BEER-INTAKE-3.jpg)
ಜರ್ನಲ್ ಆಫ್ ನ್ಯೂಟ್ರಿಷನಲ್ ಬಯೋಕೆಮೆಸ್ಟ್ರಿ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಬೀಯರ್​ನಲ್ಲಿ ಹೆಚ್ಚು ಪಾಲಿಫಿನಾಲ್​ಗಳ ಅಂಶ ಸಾಕಷ್ಟು ಇರುವುದರಿಂದ ಇದು ಹೃದಯ ರಕ್ತನಾಳಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಈ ಅಧ್ಯಯನದಲ್ಲಿ ಹೇಳುವ ಪ್ರಕಾರ ಒಂದು ಮಿತಿಯಲ್ಲಿ ಬೀಯರ್ ಪಾನ ಮಾಡಿದರೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ದಿನಕ್ಕೆ ಮಹಿಳೆಯರು ಒಂದು ಬೀಯರ್ ಹಾಗೂ ಪುರುಷರು ಎರಡು ಬೀಯರ್ ಕುಡಿದರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯದಿಂದ ದೂರ ಇರಬಹುದು ಎಂದು ಅಧ್ಯಯನದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಅರಿಶಿನಕ್ಕೂ ಬಂತು ಕೇಡುಗಾಲ ! ಹಳದಿ ಪದಾರ್ಥದಲ್ಲಿದೆ ಹೃದಯಕ್ಕೆ ಮಾರಕವಾಗುವ ಅಂಶ!
ಈ ಒಂದು ಮಾದಕ ಪಾನೀಯದಲ್ಲಿ ಆ್ಯಂಟಿಆಕ್ಸಿಡಂಟ್​ ಹಾಗೂ ಮೈಕ್ರೊನ್ಯೂಟ್ರಿಯಂಟ್ಸ್​ ಇರುವುರಿಂದ ಹಲವು ಪ್ರಯೋಜನಗಳು ಇವೆ. ಆದ್ರೆ ನೆನಪಿರಲಿ ಅತಿಯಾದರೆ ಅಮೃತವೂ ವಿಷ ಎಂಬ ಒಂದು ಮಾತಿದೆ. ಅತಿಯಾದ್ರೆ ಬೀಯರ್​ನಿಂದಲೂ ಕೂಡ ಆರೋಗ್ಯ ಸಮಸ್ಯೆಗಳು ಬರುತ್ತವೆ. ಹೀಗಾಗಿ ಮಿತವಾದ ಪಾನ ಯಾವುದೇ ಹಾನಿಯನ್ನು ಮಾಡುವುದಿಲ್ಲ.
/newsfirstlive-kannada/media/post_attachments/wp-content/uploads/2024/11/BEER-INTAKE-2.jpg)
ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಿಗೆ ಈ 10 ಆಹಾರಗಳನ್ನು ಕೊಟ್ರೆ ಅಪಾಯ ಕಟ್ಟಿಟ್ಟ ಬುತ್ತಿ; ಪೋಷಕರು ಓದಲೇಬೇಕಾದ ಸ್ಟೋರಿ!
ಬೀಯರ್​ ಪ್ರಮುಖವಾಗಿ ಮದ್ಯ ಬೆರೆತಿರುವ ಒಂದು ಪಾನೀಯ, ಪ್ರಮುಖವಾಗಿ ಧಾನ್ಯವಾಗಿರುವ ಬಾರ್ಲಿ, ನೀರು, ಹಾಪ್ಸ್ ಮತ್ತು ಯಿಸ್ಟ್​ ಪೌಡರ್​ನಿಂದ ತಯಾರಾಗುತ್ತದೆ. ಆಲ್ಕೋಹಾಲ್​ನ ಅಂಶ ಸುಮಾರು ಶೇಕಡಾ 4 ರಿಂದ 6 ರಷ್ಟಿರುತ್ತದೆ. ಹೀಗಾಗಿ ಬೀಯರ್ ಒಂದು ಮಿತಿಯಲ್ಲಿ ಕುಡಿಯುವುದರಿಂದ ಹಲವು ರೋಗಗಳಿಂದ ನಾವು ದೂರ ಇರಬಹುದು ಎಂದು ಹೇಳಲಾಗುತ್ತದೆ. ಬೀಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್​​ಗಳಿಂದ ದೂರ ಇರಬಹುದು. ದೇಹದಲ್ಲಿ ಆರೋಗ್ಯಕರ ಕೊಬ್ಬು ಸೃಷ್ಟಿಯಾಗುತ್ತದೆ. ಇದರಲ್ಲಿ ಬಿ3,ಬಿ6 ಮತ್ತು ಬಿ12 ಜೀವಸತ್ವಗಳು ಕೂಡ ಇರುವುದರಿಂದ ಗ್ಯಾಸ್ಟ್ರಿಕ್, ಆ್ಯಸಿಡ್ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯಕವಾಗುತ್ತವೆ.
ಇನ್ನೂ ಇದು ಅತಿಯಾದರು ಕೂಡ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಡಿಹೈಡ್ರೇಷನ್​ನಿಂದ ಹಿಡಿದು ಕ್ಯಾನ್ಸರ್​​ವರೆಗೂ ಕೂಡ ಬೀಯರ್​ ನಿಮಗೆ ಹಾನಿಕಾರಕವಾಗಬಲ್ಲದು. ಒಂದು ವೇಳೆ ನೀವು ಅದನ್ನು ಅತಿಯಾಗಿ ಸೇವಿಸಿದ್ದೇ ಆದರೆ ತಲೆನೋವು, ಆಯಾಸ, ಡ್ರೈ ಮೌತ್, ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ತಂದೊಡ್ಡುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಮಿತವಾದ ಬೀಯರ್ ಬಳಕೆ ಎಷ್ಟು ಆರೋಗ್ಯಕ್ಕೆ ಒಳ್ಳೆಯದೋ ಅಷ್ಟೇ ಅತಿಯಾದರ ಆಪತ್ತು ಕೂಡ ಹೌದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us