/newsfirstlive-kannada/media/post_attachments/wp-content/uploads/2024/11/MILK-1.jpg)
ದೇಹದ ಆರೋಗ್ಯಕ್ಕೆ ನಿತ್ಯ ಹಾಲು ಮತ್ತು ಮೊಟ್ಟೆ ಅತ್ಯಗತ್ಯ. ಇವು ದೇಹಕ್ಕೆ ಅಗತ್ಯವಿರುವ ಅನೇಕ ಸಮೃದ್ಧವಾದ ಪೋಷಕಾಂಶಗಳನ್ನು ನೀಡುತ್ತವೆ. ಹಾಲು ಮತ್ತು ಮೊಟ್ಟೆಗಳು ಕ್ಯಾಲ್ಸಿಯಂ ಒದಗಿಸುವುದರಿಂದ ಮೂಳೆಗಳನ್ನು ಬಲಪಡಿಸುತ್ತವೆ, ಶಕ್ತಿಯನ್ನು ನೀಡುತ್ತವೆ. ಇದೇ ಕಾರಣಕ್ಕೆ ಅದೆಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಮೊಟ್ಟೆ ನೀಡದಿದ್ದರೂ ಹಾಲನ್ನು ಕಟ್ಟೇ ಕೊಡ್ತಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತದೆ.
ಇದನ್ನೂ ಓದಿ:ಜೋಳದಿಂದ ನವಣೆವರೆಗೆ; ಚಳಿಗಾಲದಲ್ಲಿ ಯಾವ ಧಾನ್ಯದ ಹಿಟ್ಟು ಉಪಯೋಗಿಸುವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿ
ಹಾಲನ್ನು ಕಾಯಿಸಿ ಕುಡಿಯಬೇಕು. ಕೆಲವರು ಹಾಲನ್ನು ಹಸಿಯಾಗಿಯೇ ಕುಡಿಯುತ್ತಾರೆ. ಅವರ ಪ್ರಕಾರ ಹಸಿ ಹಾಲು ಆರೋಗ್ಯಕರ ಎಂದು ನಂಬಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ಹಾಲನ್ನು ಕಾಯಿಸಿ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಉತ್ತಮ. ಹಸಿ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಸುಗಳು, ಎಮ್ಮೆಗಳು ಅಥವಾ ಮೇಕೆಗಳಿಂದ ಬರುವ ಹಸಿ ಹಾಲಿನಲ್ಲಿರುವ ಹಾನಿಕಾರಕ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು ಗಂಭೀರ ಕಾಯಿಲೆಗಳನ್ನು ತರುತ್ತವೆ.
ಹಸಿ ಹಾಲಿನ ದುಷ್ಪರಿಣಾಮಗಳು
- ಹಸಿ ಹಾಲಿನಲ್ಲಿ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು ಇರುತ್ತವೆ
- ಲಿಸ್ಟೇರಿಯಾ ಮೊನೊಸೈಟೊಜೆನ್ಸ್ ಬ್ಯಾಕ್ಟೀರಿಯಾ ಹೊಂದಿರುತ್ತದೆ
- ಇವು ಲಿಸ್ಟರಿಯೊಸಿಸ್ (Listeriosis) ಸೋಕು ಉಂಟುಮಾಡುತ್ತವೆ
- ಹಸಿ ಹಾಲು ಕುಡಿಯುವುದರಿಂದ ಗರ್ಭಧಾರಣೆಗೆ ಒಳ್ಳೆಯದು ಅಲ್ಲ
- ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಇದು ಅಪಾಯಕಾರಿ
- ಗರ್ಭಪಾತ, ಅಕಾಲಿಕ ಜನನ, ಮಗು ಮತ್ತು ತಾಯಿಗೂ ಹಾನಿ
- ಸಂಧಿವಾತ, ಅತಿಸಾರ ಅಥವಾ ನಿರ್ಜಲೀಕರಣದಂತಹ ಸಮಸ್ಯೆ
- ಹಸಿ ಹಾಲಿನಿಂದ ಹಕ್ಕಿ ಜ್ವರ ಬರುವ ಸಾಧ್ಯತೆ ಹೆಚ್ಚಿರುತ್ತದೆ
- ಹಸಿ ಹಾಲು ಸೇವನೆಯಿಂದ ದೇಹದಲ್ಲಿ ಆಮ್ಲ ಉತ್ಪಾದನೆ ಹೆಚ್ಚಾಗುತ್ತದೆ
- ಹೊಟ್ಟೆಯ ಕಾಯಿಲೆಗಳು, ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು
- ಹೊಟ್ಟೆ ನೋವು ಅಥವಾ ಆಸಿಡಿಟಿ ಸಮಸ್ಯೆ ಉಂಟಾಗುತ್ತದೆ
ಇದನ್ನೂ ಓದಿ:ಜೋಳದಿಂದ ನವಣೆವರೆಗೆ; ಚಳಿಗಾಲದಲ್ಲಿ ಯಾವ ಧಾನ್ಯದ ಹಿಟ್ಟು ಉಪಯೋಗಿಸುವುದು ಉತ್ತಮ? ಇಲ್ಲಿದೆ ಸಂಪೂರ್ಣ ಮಾಹಿತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್