/newsfirstlive-kannada/media/post_attachments/wp-content/uploads/2025/05/Ginger-lemon-tea2.jpg)
ಇತ್ತೀಚಿನ ಜೀವನ ಶೈಲಿಯಲ್ಲಿ ಆರೋಗ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರು ಸಾಲದು. ಇಂಥಾ ಉರಿ ಬಿಸಿಲಲ್ಲಿ ಕೆಲಸಕ್ಕೆ ಹೋಗಿ ಬರೋದರ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದಂತು ಕಷ್ಟ ಸಾಧ್ಯ.
ಇದನ್ನೂ ಓದಿ:ಬಿಗ್ಬಾಸ್ ಖ್ಯಾತಿಯ ರಂಜಿತ್ ಕುಮಾರ್ ಅದ್ಧೂರಿ ಮದುವೆ; ಫೋಟೋಸ್ ಇಲ್ಲಿವೆ!
ಈಗಿನ ಜನರಲ್ಲಿ ಸಾಮಾನ್ಯವವಾಗಿ ಕಾಡ್ತಿರೋದಂದ್ರೆ ಬೊಜ್ಜಿನ ಸಮಸ್ಯೆ. ಕೆಲಸದ ಮಧ್ಯೆ ಮನೆಯಲ್ಲೇ ಹೇಗೆ ಬೊಜ್ಜು ಕರಗಿಸೋದು ಅನ್ನೋ ಚಿಂತೆ ಮಾಡುತ್ತಲೇ ಅವರು ತಮ್ಮ ದಿನವನ್ನ ಕಳೆಯುವಂತಾಗಿದೆ. ಇದೀಗ ಸುಲಭವಾಗಿ ಮನೆಯಲ್ಲೇ ಹೇಗೆ ಬೊಜ್ಜು ಕರಗಿಸೋದು ಅಂತ ಚಿಂತೆ ಮಾಡ್ತಿರೋರಿಗೆ ನಾವು ಸ್ಪೆಷಲ್ ಚಹಾವನ್ನ ಪರಿಚಯಿಸುತ್ತಿದ್ದೇವೆ.
ಬೊಜ್ಜು ಇರುವವರು ಈ ಚಹಾ ಕುಡಿದರಂತೂ ನಿಮ್ಮ ಬೊಜ್ಜು ಬೇಗನೇ ಕರಗೋದಂತೂ ಪಕ್ಕಾ ಗ್ಯಾರಂಟಿ. ವೈದ್ಯರ ಪ್ರಕಾರ ಬೊಜ್ಜು ಕರಗಿಸಲು ವ್ಯಾಯಾಮ ಎಷ್ಟು ಮುಖ್ಯವೋ, ಅದರ ಜೊತೆಗೆ ಆಹಾರ ಪದ್ಧತಿ ಕೂಡ ಅಷ್ಟೇ ಮುಖ್ಯ. ಇದೀಗ ನಾವು ಸೇವಿಸುವ ಆಹಾರ ಪದ್ಧತಿಯಲ್ಲೇ ಕೊಂಚ ಬದಲಾವಣೆ ಮಾಡಿಕೊಂಡರೆ ಬೊಜ್ಜು ಇಳಿಸಿಕೊಳ್ಳೋದು ಕರಗಿಸೋದು ತುಂಬಾ ಸುಲಭವಾಗಿದೆ.
ಬೊಜ್ಜು ಕರಗಿಸೋದಕ್ಕೆ ಸ್ಪೆಷಲ್ ಚಹಾ!
ಈ ತರಹದ ಚಹಾ ಮಾಡಿ ಕೊಡಿದರೆ ನಿಮ್ಮ ಬೊಜ್ಜು ಆಗದಷ್ಟು ಬೇಗ ಕಡಿಮೆಯಾಗೋದಂತೂ ಗ್ಯಾರಂಟಿ. ಇದು ನೋಡೋದಕ್ಕೆ ತುಂಬಾ ಸಿಂಪಲ್ ಆಗಿದ್ರೂ ಕೂಡ ಬೊಜ್ಜು ಕರಗಿಸೋದ್ರಲ್ಲಿ ಹೆಚ್ಚಿನ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಈ ಸ್ಪೆಷಲ್ ಟೀ ಮಾಡೋದು ಹೇಗೆ ಅಂತ ನೋಡೋದಾದರೇ, ಎರಡು ಕಪ್ ನೀರಿಗೆ ಶುಂಠಿ ತುಂಡುಗಳನ್ನ ಹಾಕಿ ಕುದಿಸಬೇಕು. ಬಳಿಕ ನೀರು ಅರ್ಧ ಕಾಲಿಯಾದಾಗ ಅರ್ಧ ನಿಂಬೆ ರಸ ಹಿಂಡಿ ಕುಡಿಯಬೇಕು. ಈ ರೀತಿ ನೀವು ದಿನಕ್ಕೆ 2-3 ಬಾರಿ ಮಾಡೋದ್ರಿಂದ ನಿಮ್ಮ ಬೊಜ್ಜು ಕರಗಿ ನೀವು ಒಳ್ಳೆ ರಿಸಲ್ಟ್ ಪಡೆಯಬಹುದಾಗಿದೆ.
ಆರೋಗ್ಯ ತಜ್ಞರ ಪ್ರಕಾರ ಹಾಲು ಮತ್ತು ಸಕ್ಕರೆ ನಿಲ್ಲದ ಚಹಾ ಕುಡಿಯೋದ್ರಿಂದ ತೂಕ ಇಳಿಕೆಗೆ ಸಹಕಾರಿಯಾಗುತ್ತೆ. ಜೊತೆಗೆ ನಿಂಬೆಯಲ್ಲೂ ತೂಕ ಕಡಿಮೆ ಮಾಡುವ ಪ್ರಮಾಣ ಹೇರಳವಾಗಿರೋದ್ರಿಂದ, ಈ ಸ್ಪೆಷಲ್ ಚಹಾ ನಿಮ್ಮ ಬೊಜ್ಜು ಬೇಗನೆ ಕರಗಲು ಸಹಕಾರಿಯಾಗೋದಂತೂ ಗ್ಯಾರಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ