/newsfirstlive-kannada/media/post_attachments/wp-content/uploads/2025/07/TEA_CUP.jpg)
ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಅಮ್ಮ ಅಥವಾ ಹೆಂಡತಿ ಬಳಿ ಮೊದಲು ಕೇಳುವುದು ಟೀ. ಎಲ್ಲರೂ ತುಂಬಾ ಇಷ್ಟದಿಂದಲೇ ಚಹಾ ಕುಡಿಯುತ್ತಾರೆ. ಅದರಲ್ಲಿ ಆಫೀಸ್ನಲ್ಲಿ ಕೆಲಸ ಮಾಡುವವರಂತೂ ದಿನಕ್ಕೆ ನಾಲ್ಕೈದು ಚಹಾ ಕುಡಿಯುವುದು ಸಾಮಾನ್ಯ. ಆದರೆ ಈ ಟೀ ಇಂದಲೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಹಾಗಾದ್ರೆ ದಿನಕ್ಕೆ ಎಷ್ಟು ಬಾರಿ ಚಹಾ ಕುಡಿದರೆ ಒಳ್ಳೆಯದು, ಇದರಿಂದ ಯಾವ್ಯಾವ ಸಮಸ್ಯೆಗಳು ಬರುತ್ತವೆ?.
ಟೀ ಕುಡಿದಿಲ್ಲ ಎಂದರೆ ಕೆಲವರಿಗೆ ದಿನನೇ ಮುಂದಕ್ಕೆ ಹೋಗಲ್ಲ. ಕಪ್ ಟೀ ಅಥವಾ ಕಾಫಿ ಕುಡಿದರೆ ತಲೆ ನೋವು ಇರಲ್ಲ, ಕೆಲಸನೂ ಅರಾಮ ಎನ್ನುತ್ತಿರುತ್ತಾರೆ. ಜನರು ಟೀ ಕುಡಿಯುವುದನ್ನ ಸರ್ವೇ ಸಾಮಾನ್ಯ ಮಾಡಿಕೊಂಡಿದ್ದಾರೆ. ಹೆಚ್ಚಾಗಿ ಟೀ ಸೇವನೆ ಮಾಡುವುದನ್ನ ಅಭ್ಯಾಸ ಮಾಡಿಕೊಂಡರೇ ಅನೇಕ ರೋಗಗಳು ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈಗ ಮಳೆಗಾಲ ಆಗಿದ್ದರಿಂದ ಸ್ವಲ್ಪ ಚಳಿ ಇರುವುದರಿಂದ ಚಹಾ ಸೇವನೆಗೆ ವಾತಾವರಣ ಕೂಡ ಸಪೋರ್ಟ್ ಮಾಡುತ್ತದೆ. ಚಳಿ ಸ್ವಲ್ಪ ಜಾಸ್ತಿ ಆದರೆ ಸಾಕು ಜನ ಟೀ ಅಂಗಡಿ ಕಡೆ ಮುಖ ಮಾಡುತ್ತಾರೆ. ಅದರಂತೆ ದಿನಕ್ಕೆ ಎರಡು ಅಥವಾ ಮೂರು ಕಪ್ ಟೀ ಕುಡಿಯುವುದರಿಂದ ನಮ್ಮ ದೇಹಕ್ಕೆ ಯಾವುದೇ ಹಾನಿಯಾಗಲ್ಲ. ಇದಕ್ಕಿಂತ ಹೆಚ್ಚಿನ ಬಾರಿ ಚಹಾ ಸೇವಿಸಿದರೆ ದೇಹದಲ್ಲಿ ಕಬ್ಬಿಣದ ಕೊರತೆ, ನಿದ್ರಾಹೀನತೆ, ತಲೆನೋವಿನಂತಹ ಸಮಸ್ಯೆಗಳು ಉಂಟಾಗುತ್ತವೆ.
ಅದೇ ರೀತಿ ಹೆಚ್ಚು ಹೆಚ್ಚು ಚಹಾ ಕುಡಿದರೆ ಕೆಲವರಿಗೆ ತಲೆ ತಿರುಗುವುದು, ರಕ್ತದೊತ್ತಡ ಹೆಚ್ಚಾಗುವುದಂತ ಸಮಸ್ಯೆಗಳು ಬರುತ್ತವೆ. ಬ್ಲ್ಯಾಕ್ ಟೀ ಅಥವಾ ಟೀ ತೆಗೆದುಕೊಳ್ಳುವುದರಿಂದ ಹೃದಯದ ಮೇಲೆ ತೀವ್ರ ಪ್ರಭಾವ ಬೀರುತ್ತದೆ. ಅಧಿಕ ಚಹಾ ಸೇವನೆಯಿಂದ ಜೀರ್ಣಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ಕೈಗಳು ನಡುಗುತ್ತವೆ. ಇದರ ಜೊತೆಗೆ ಅಧಿಕ ಚಹಾ ಸೇವನೆಯಿಂದ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಆಗುತ್ತದೆ.
ಇದನ್ನೂ ಓದಿ:ಬೆಣ್ಣೆಯಂತೆ ಕೊಬ್ಬು ಕರಗಿಸೋ ಬಟರ್ ಫ್ರೂಟ್.. ಇದರ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!
ಕ್ಯಾಲ್ಸಿಯಂ ಕಡಿಮೆ ಆದರೆ ದೇಹದಲ್ಲಿನ ಮೂಳೆಗಳು ಬಲಹೀನವಾಗುತ್ತವೆ, ಏನದರೂ ಕೆಲಸದ ಸಮಯದಲ್ಲಿ ಮೂಳೆಗಳು ಸುಲಭವಾಗಿ ಮುರಿಯುವ ಸಾಧ್ಯತೆಯೂ ಇರುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಈ ಎಲ್ಲ ಕಾರಣಗಳಿಂದ ಆದಷ್ಟು ದಿನಕ್ಕೆ ಕಡಿಮೆ ಚಹಾ ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಮಿತಿ ಮೀರಿ ಟೀ ಕುಡಿಯುತ್ತ ಹೋದರೆ ದಿನ ಕಳೆದಂತೆ ನೀವು ಆರೋಗ್ಯದ ಸಮಸ್ಯೆಗಳನ್ನು ಎದುರಿಸಲು ಸಿದ್ಧರಿರಬೇಕು ಅಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ