Advertisment

Drinking Water: ನೀರನ್ನು ಕುಡಿಯಲು ಸರಿಯಾದ ಟೈಮ್​ ಯಾವ್ದು? ನಿಮ್ಮ ಆರೋಗ್ಯ ಮತ್ತಷ್ಟು ಸೂಪರ್..!

author-image
Ganesh
Updated On
Drinking Water: ನೀರನ್ನು ಕುಡಿಯಲು ಸರಿಯಾದ ಟೈಮ್​ ಯಾವ್ದು? ನಿಮ್ಮ ಆರೋಗ್ಯ ಮತ್ತಷ್ಟು ಸೂಪರ್..!
Advertisment
  • ಮನಸ್ಸಿಗೆ ಬಂದಾಗಲೆಲ್ಲ ನೀರು ಕುಡಿಯೋದು ಒಳ್ಳೇದಲ್ಲ
  • ಸ್ನಾನಕ್ಕೂ ಮೊದಲು ಯಾಕೆ ನೀರು ಕುಡಿಯಬೇಕು?
  • ದೇಹಕ್ಕೆ ಕನಿಷ್ಟ 8 ಗ್ಲಾಸ್​ ನೀರಾದರೂ ಬೇಕೇಬೇಕು

ವೈದ್ಯರು ಹೇಳಿದ್ದಾರೆ ಅಂತಾ ಮನಸ್ಸು ಬಂದಾಗಲೆಲ್ಲ ನೀರು ಕೂಡಿಯೋದನ್ನು ಜನ ಅಭ್ಯಾಸ ರೂಢಿ ಮಾಡ್ಕೊಂಡು ಬಿಡ್ತಾರೆ. ಆದರೆ ಪದೇ ಪದೆ ನೀರು ಕುಡಿಯೋದು ಕೂಡ ಒಳ್ಳೆಯದಲ್ಲ. ಅದು ಕೂಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Advertisment

ನಿತ್ಯ ಓರ್ವ ವ್ಯಕ್ತಿಯ ದೇಹದ ಪ್ರತಿ ಅಂಗಾಂಗಗಳು ಸರಿಯಾಗಿ ದೈನದಿಂದನ ಚಟುವಟಿಕೆಯಿಂದ ಇರಲು ಕನಿಷ್ಠ 8 ಗ್ಲಾಸ್​ ನೀರಾದರೂ ಕುಡಿಯಲೇಬೇಕು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಾಗ್ಯೂ ನೀರನ್ನು ಕುಡಿಯಲು ಸೂಕ್ತ ಸಮಯ ಯಾವುದು ಎಂದು ನಿಮಗೆ ಗೊತ್ತೇ..?

ಇದನ್ನೂ ಓದಿ: ಪ್ರೇಮ ಚುಂಬನ ನಿಮ್ಮ ಬಾಯಿಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಲಿದೆಯಾ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

publive-image

ಬೆಳಗ್ಗೆ ಎದ್ದ ಕೂಡಲೇ: ನಿತ್ಯ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಒಂದು ಗ್ಲಾಸ್ ನೀರನ್ನು ಕುಡಿಯಬೇಕು. ಇದರಿಂದ ದೇಹದ ಅಂಗಾಂಗಗಳ ಚಟುವಟಿಕೆಗಳಿಗೆ ಸಹಾಯ ಆಗುತ್ತದೆ. ಅಲ್ಲದೇ ಹೊಟ್ಟೆಯಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕುತ್ತದೆ. ಆಹಾರ ಸೇವನೆಗೂ ಮೊದಲೇ ನೀರು ಕುಡಿಯೋದ್ರಿಂದ ಹೊಟ್ಟೆ ಕೂಡ ಕ್ಲೀನ್ ಆಗುತ್ತದೆ.

Advertisment

ಊಟಕ್ಕೂ ಮೊದಲು: ಊಟ ಮಾಡುವುದಕ್ಕಿಂತ 30 ನಿಮಿಷ ಮೊದಲು ಒಂದು ಗ್ಲಾಸ್ ನೀರನ್ನು ಕುಡಿಯಬೇಕು. ಇದರಿಂದ ಜೀರ್ಣ ಕ್ರೀಯೆಗೆ ಸಹಾಯ ಆಗುತ್ತದೆ. ಹೊಟ್ಟೆಯೊಳಗೆ ನೀರು ಜೀರ್ಣಕಾರಿ ರಸವನ್ನು ದುರ್ಬಲಗೊಳಿಸೋದ್ರಿಂದ ಊಟಕ್ಕೆ ಅರ್ಧ ಗಂಟೆ ಮೊದಲೇ ನೀರನ್ನು ಕುಡಿಯಬೇಕು. ದೇಹವರು ಪೋಷಕಾಂಶಗಳನ್ನು ಹೀರಿಕೊಳ್ಳಲು ಊಟ ಆದ ಅರ್ಧ ಗಂಟೆ ಮೇಲೆ ನೀರು ಕುಡಿಯಬೇಕು.

ಸ್ನಾನಕ್ಕೂ ಮೊದಲು: ಸ್ನಾನ ಮಾಡುವ ಮುನ್ನ ಒಂದು ಗ್ಲಾಸ್ ನೀರು ಕುಡಿಯಬೇಕು. ಇದರಿಂದ ನಿಮ್ಮ ಬ್ಲಡ್​ ಪ್ರಷರ್​​ ಕಂಟ್ರೋಲ್​ನಲ್ಲಿ ಇರುತ್ತದೆ. ಅಂದರೆ ಸ್ನಾನ ಮಾಡುವ ವೇಳೆ ರಕ್ತದೊತ್ತಡದಲ್ಲಿ ಏರಿಳಿತ ಸಂಭವಿಸೋದು ಕಾಮನ್. ನಿತ್ಯ ನಿಮಗೆ 8 ಗ್ಲಾಸ್ ನೀರು ಕುಡಿಯೋದು ಕಷ್ಟವೇ..? ಹಾಗಿದ್ದರೆ ನೀವು ಈ ಕೆಳಗಿನ ಸಮಯವನ್ನು ಫಾಲೋ ಮಾಡಿದರೆ ಸುಲಭವಾಗಿ 8 ಗ್ಲಾಸ್ ನೀರನ್ನು ಮುಗಿಸಬಹುದು.

ಇದನ್ನೂ ಓದಿ: 50 ಅಲ್ಲ 100 ವರ್ಷ ನೀವು ಆರೋಗ್ಯವಾಗಿ ಇರಬೇಕಾ? ಹಾಗಿದ್ರೆ ಈ 9 ಅಭ್ಯಾಸಗಳನ್ನು ತಪ್ಪದೇ ಪಾಲಿಸಿ!

Advertisment

ಈ ರೀತಿಯ ನಿಯಮ ರೂಢಿಸಿಕೊಳ್ಳಿ

  • ಬೆಳಗ್ಗೆ 7 ಗಂಟೆಗೆ ಮೊದಲ ಗ್ಲಾಸ್: ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ನೀರು ಕುಡಿಯಿರಿ. ರಾತ್ರಿ ಇಡೀ ನೀವು ರೆಸ್ಟ್​ನಲ್ಲಿ ಇರೋದ್ರಿಂದ ನಿಮ್ಮ ದೇಹಕ್ಕೆ ನಿರಿನ ಅಗತ್ಯ ಇರುತ್ತದೆ.
  • ಬೆಳಗ್ಗೆ 9 ಗಂಟೆಗೆ 2ನೇ ಗ್ಲಾಸ್​: ಉಪಹಾರ ಸೇವಿಸಿದ ಒಂದು ಗಂಟೆ ನಂತರ ನೀರು ಸೇವಿಸಿ. ಒಂದು ಲೋಟ ನೀರು ಕುಡಿದು, ನಿತ್ಯದ ಕೆಲಸವನ್ನು ಪ್ರಾರಂಭಿಸಿ.
  • 11.30ಕ್ಕೆ 3ನೇ ಗ್ಲಾಸ್: ಊಟಕ್ಕೆ 30 ನಿಮಿಷಗಳ ಮೊದಲು ಒಂದು ಲೋಟ ನೀರು ಕುಡಿಯಿರಿ
  • 1.30ಕ್ಕೆ ನಾಲ್ಕನೇ ಗ್ಲಾಸ್: ಮಧ್ಯಾಹ್ನ ಊಟವಾಗಿ ಒಂದು ಗಂಟೆ ನಂತರ ನೀರು ಕುಡಿಯೋದ್ರಿಂದ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಆಗುತ್ತದೆ.
  • 3 ಗಂಟೆಗೆ 5ನೇ ಗ್ಲಾಸ್​: ಚಹಾ ವಿರಾಮದ ಸಮಯದಲ್ಲಿ.. ನಿಮ್ಮ ಮನಸ್ಸನ್ನು ತಾಜಾಗೊಳಿಸಲು ಸಿಹಿಗೊಳಿಸದ ಪಾನೀಯವನ್ನು ಸೇವಿಸಿ.
  • 5 ಗಂಟೆಗೆ 6ನೇ ಗ್ಲಾಸ್: ಈಗ ಕುಡಿಯುವ ನೀರು ನಿಮ್ಮ ತೃಪ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ರಾತ್ರಿ ಊಟದ ಸಮಯದಲ್ಲಿ ಅತಿಯಾಗಿ ಊಟ ಮಾಡುವುದನ್ನು ತಪ್ಪಿಸುತ್ತದೆ.
  • 8 ಗಂಟೆಗೆ 7ನೇ ಗ್ಲಾಸ್: ಊಟದ ಒಂದು ಗಂಟೆ ಮೊದಲು ಸ್ನಾನ ಮಾಡುವ ಮೊದಲು ಒಂದು ಗ್ಲಾಸ್ ನೀರು ತೆಗೆದುಕೊಳ್ಳಿ
  • 10 ಗಂಟೆಗೆ 8ನೇ ಗ್ಲಾಸ್​: ಮಲಗುವ ಒಂದು ಗಂಟೆ ಮೊದಲು ನೀರನ್ನು ಕುಡಿಯಬೇಕು. ಇದರಿಂದ ನಿದ್ರೆಯ ಅವಧಿಯಲ್ಲಿ ಕೋಶಗಳ ನವೀಕರಣ ಪ್ರಕ್ರಿಯೆಗೆ ಸಹಾಯ ಆಗುತ್ತದೆ.

ಇದನ್ನೂ ಓದಿ: ವಾಶ್​ರೂಮ್​ಗೆ ಹೋಗುವಾಗಲೂ ಮೊಬೈಲ್ ತೆಗೆದುಕೊಂಡು ಹೋಗುತ್ತೀರಾ? ಹಾಗಿದ್ರೆ ನಿಮಗೆ ಕಾಡುತ್ತವೆ ಆರೋಗ್ಯ ಸಮಸ್ಯೆಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment