/newsfirstlive-kannada/media/post_attachments/wp-content/uploads/2025/03/arpitha-mohithe.jpg)
ದೃಷ್ಟಿಬೊಟ್ಟು ದತ್ತ-ದೃಷ್ಟಿ ಲವ್ ಹೇಟ್ ಸ್ಟೋರಿ ಧಾರಾವಾಹಿ ಪ್ರಿಯರನ್ನು ಹಿಡಿದುಟ್ಟುಕೊಂಡಿದೆ. ದೃಷ್ಟಿ ಅಂದ್ರೇ ಸಾಕು ವೀಕ್ಷಕರ ಕಣ್ಮುಂದೆ ಬರೋದು ಕಪ್ಪು ಸುಂದರಿ. ದೃಷ್ಟಿಬೊಟ್ಟು ನಾಯಕಿ ಕಣ್ಮುಂದೆ ಬರುತ್ತಾಳೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಬರ್ತ್ಡೇ ಸ್ಪೆಷಲ್.. ಮಸಾಲಪೂರಿ, ಪಾನಿಪೂರಿ ಫ್ರೀ.. ಫ್ರೀ.. ಎಲ್ಲಿ?
ನೋಡೋಕೆ ಅಪೂರ್ವ ಸುಂದರಿ ಆದ್ರು. ಆ ಸೌಂದರ್ಯವೇ ದೃಷ್ಟಿಗೆ ಶಾಪವಾಗಿ ಕಾಡ್ತಿದೆ. ಮತ್ತೊಂದು ಕಡೆ ದತ್ತನನ್ನ ಮದುವೆ ಆಗೋಕೆ ಕಪ್ಪು ಬಣ್ಣ ಸಹಾಯ ಮಾಡಿದೆ. ಕಪ್ಪು ಬಿಳುಪಿನ ಸಂಘರ್ಷದ ನಡುವೆ ದೃಷ್ಟಿ ಬದುಕು ಸಾಕಷ್ಟು ಏಳು ಬೀಳುಗಳ ಜೊತೆ ಸಾಗ್ತಿದೆ ಅಂದ್ಹಾಗೆ, ಈ ಪಾತ್ರ ಮಾಡ್ತಿರೋ ನಟಿ ಅರ್ಪಿತಾ ಮೋಹಿತೆ.
ಹಾಲು ಬಿಳುಪಿನ ನಟಿ ಅರ್ಪಿತಾ ದೃಷ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ದಂತದ ಗೊಂಬೆಯಂತಿರೋ ಅರ್ಪಿತಾ ದೃಷ್ಟಿ ಆಗೋಕೆ ಮೈ-ಕೈಯೆಲ್ಲಾ ಕಪ್ಪಾಗಿ ಕಾಣಿಸಲು ಗಂಟೆಗಟ್ಟಲೇ ಮೇಕಪ್ ಮಾಡ್ಕೋತಾರೆ. ಯಾವಾಗ ದೃಷ್ಟಿ ನಿಜ ರೂಪ ಯಾವಾಗ ರಿವೀಲ್ ಆಗೋತ್ತೋ ಅಂತ ಫ್ಯಾನ್ಸ್ ಕಾಯ್ತಾ ಇದ್ದಾರೆ. ಅಷ್ಟು ಇಂಪ್ಯಾಕ್ಟ್ ಮಾಡಿದೆ ಪಾತ್ರ.
ಇನ್ನೂ ಮೊನ್ನೆಯಷ್ಟೇ ಅರ್ಪಿತಾ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರು. ಶೂಟಿಂಗ್ ಸೆಟ್ನಲ್ಲಿ ನಟಿ ಅರ್ಪಿತಾ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಜಯ್ ಸೂರ್ಯ, ಅಕ್ಕನ ಪಾತ್ರ ಮಾಡ್ತಿರೋ ತನ್ಮಯಾ ಸೇರಿದಂತೆ ದೃಷ್ಟಿಬೊಟ್ಟು ತಂಡದ ಕಲಾವಿದರು ಸಂಭ್ರಮಿಸಿದ್ದಾರೆ. ಸದ್ಯ ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಅರ್ಪಿತಾ ಅವರಿಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಅರ್ಪಿತಾ ಅವರ ಮುಂದಿನ ಜೀವನಕ್ಕೆ ಅಲ್ ದಿ ಬೆಸ್ಟ್ ಅಂತ ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ