/newsfirstlive-kannada/media/post_attachments/wp-content/uploads/2025/03/Gowthami-Jayaram.jpg)
ದೃಷ್ಟಿಬೊಟ್ಟು ಸೀರಿಯಲ್ ನಟಿ ಗೌತಮಿ ಜಯರಾಮ್ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ. ನಾಗಿಣಿ ಪಾರ್ಟ್ 1 ಧಾರಾವಾಹಿಯಲ್ಲೂ ಅಭಿನಯಿಸಿದ್ರು. ಲಾಂಗ್ ಗ್ಯಾಪ್ ನಂತರ ದೃಷ್ಟಿಬೊಟ್ಟು ಧಾರಾವಾಹಿಗೆ ಕಾಲಿಟ್ಟಿದ್ದರು ನಟಿ.
ಇದನ್ನೂ ಓದಿ:ಬೇವಿನ ಮರಕ್ಕೆ ಕಾರು ಭೀಕರ ಡಿಕ್ಕಿ; ವಿಜಯಪುರದಲ್ಲಿ ಮೂವರು ಸಾವು, ಓರ್ವ ಗಂಭೀರ
ದೃಷ್ಟಿಬೊಟ್ಟು ಸೀರಿಯಲ್ನಲ್ಲಿ ದತ್ತನ ಜೋಡಿಯಾಗಿ ಕಾಣಿಸಿಕೊಂಡಿದ್ದರು ನಟಿ. ಇಂಪನಾ ಪಾತ್ರದ ಮೂಲಕ ಒಂದಿಷ್ಟು ದಿನ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಅಭಿನಯಿಸಿದ್ರು ಗೌತಮಿ ಜಯರಾಮ್.
ನಟನೆ ಜೊತೆಗೆ ಎಂತ್ರೆಪ್ರೇನ್ಯೂರ್ (ವಾಣಿಜ್ಯೋದ್ಯಮಿ) ಆಗಿದ್ದಾರೆ. ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇನ್ನೂ, ನಟಿ ಗೌತಮಿ ಜಯರಾಮ್ ಅವರು ಉದಯ್ ಎಂಬುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಟಿ ಗೌತಮಿ ಅವರ ಹುಡುಗ ಏನು ಕೆಲಸ ಮಾಡುತ್ತಿದ್ದಾರೆ? ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ನಟಿಯ ಅದ್ಧೂರಿ ನಿಶ್ಚಿತಾರ್ಥದ ಸಮಾರಂಭದಲ್ಲಿ ದೃಷ್ಟಿಬೊಟ್ಟು ಕಲಾವಿದರು ಸೇರಿದಂತೆ ಆತ್ಮೀಯರು ಭಾಗಿಯಾಗಿ ಜೋಡಿಗೆ ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ