Advertisment

ದತ್ತನ ಹುಡುಗಿ ದೃಷ್ಟಿ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್​; ನಟಿ ಅರ್ಪಿತಾ ಮೋಹಿತೆ ಬ್ಯೂಟಿ ಸೀಕ್ರೆಟ್ ಏನು?

author-image
Veena Gangani
Updated On
ದತ್ತನ ಹುಡುಗಿ ದೃಷ್ಟಿ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್​; ನಟಿ ಅರ್ಪಿತಾ ಮೋಹಿತೆ ಬ್ಯೂಟಿ ಸೀಕ್ರೆಟ್ ಏನು?
Advertisment
  • ಮುದ್ದಾದ ಮುಖ ಮರೆಮಾಚಬೇಡಿ ಎನ್ನುತ್ತಿರೋ ದೃಷ್ಟಿಯ ಅಭಿಮಾನಿಗಳು
  • ದೃಷ್ಟಿಯ ಅಂದಕ್ಕೆ ನೀವೇ ಮೇಡಂ ಅಪೂರ್ವ ಸುಂದರಿ ಎನ್ನುತ್ತಿರೋ ಫ್ಯಾನ್ಸ್
  • ಸೀರೆಯಲ್ಲಿ ಪಳ ಪಳ ಹೊಳೆಯುವ ನಕ್ಷತ್ರದಂತೆ ಕಂಗೊಳಿಸುತ್ತಿದ್ದಾರೆ ಅರ್ಪಿತಾ

ನೀವೆಲ್ಲಾ ದೃಷ್ಟಿಬೊಟ್ಟು ಸೀರಿಯಲ್​ ನಾಯಕಿಯನ್ನ ಕಪ್ಪು ಬಣ್ಣ ಬಳ್ಕೊಂಡು, ಕುದಲು ಕೆದರಿಕೊಂಡು ಅಂದವನ್ನ ಮರೆಮಾಚುವ ರೀತಿಯಲ್ಲೇ ನೋಡಿದ್ದೀರಾ. ಸದ್ಯ ಸೀರಿಯಲ್​ನಲ್ಲಿ ಮಸಿ ಬಳಿಯೋದು ಕಮ್ಮಿ ಆಗಿದ್ದು, ಆಗೋಮ್ಮೆ ಈಗೋಮ್ಮೆ ದೃಷ್ಟಿಯ ನಿಜ ರೂಪವನ್ನ ತೋರಿಸುತ್ತಿದ್ದಾರೆ.

Advertisment

ಇದನ್ನೂ ಓದಿ: ಬೆಚ್ಚಿಬಿದ್ದ ಕಾರವಾರ! ಗೂಢಚಾರಿಕೆ ಅನುಮಾನ.. ಕಾಲಿನಲ್ಲಿ ಡಿವೈಸ್ ಹೊಂದಿದ್ದ ರಣಹದ್ದಿನ ಜಾತಕ ಬಯಲು..!

ಇಂತಹ ಮುದ್ದಾದ ಮುಖ ಮರೆಮಾಚಬೇಡಿ ಅಂತ ಅಭಿಮಾನಿಗಳು ದೃಷ್ಟಿ ಅಂದವನ್ನ ಹೋಗಳ್ತಿರ್ತಾರೆ. ದೃಷ್ಟಿ ಪಾತ್ರಧಾರಿದಲ್ಲಿ ಅಭಿನಯಿಸುತ್ತಿರೋ ನಟಿ ಅರ್ಪಿತಾ ಮೋಹಿತೆ ನಿಜಕ್ಕೂ ಅಪೂರ್ವ ಸುಂದರಿ. ಇತ್ತಿಚೀಗಷ್ಟೇ ಅವರು ಮುದ್ದಾದ ಫೋಟೋಶೂಟ್​ ಮಾಡಿಸಿದ್ದು, ಸೀರೆಯಲ್ಲಿ ಹೊಳೆಯುವ ನಕ್ಷತ್ರದಂತೆ ಕಂಗೊಳಿಸುತ್ತಿದ್ದಾರೆ. ಸೀರಿಯಲ್​ ಸೇಟ್​ನಲ್ಲೂ ದೃಷ್ಟಿ ಫ್ಯಾಮಿಲಿ ಜೊತೆ ಸಖತ್​ ಕ್ಲೋಸ್​ ಆಗಿ ಇರುತ್ತಾರೆ​.

ಇನ್ನೂ ದೃಷ್ಟಿಬೊಟ್ಟು ಸ್ಟೋರಿಗೆ ಬರೋದಾದ್ರೇ, ದತ್ತನ ಗುಣ, ಸರಳತೆ ದೃಷ್ಟಿ ಮನಸ್ಸು ಕದಡಿಸಿದೆ. ದೃಷ್ಟಿ ಹೃದಯದ ತುಂಬಾ ದತ್ತನ ಕನವರಿಕೆ ಶುರುವಾಗಿದೆ. ಮತ್ತೊಂದು ಕಡೆ ದೃಷ್ಟಿಯಲ್ಲಿ ಆಗ್ತಿರೋ ಬದಲಾವಣೆ ಕಂಡು ತಾಯಿ ಚನ್ನಮ್ಮ ಆತಂಕದಲ್ಲಿ ಇದ್ದಾಳೆ. ದೃಷ್ಟಿಗೆ ಉಳಿತು ಕೆಡುಕು ಬಗ್ಗೆ ಪಾಠ ಮಾಡ್ತಿದ್ದಾಳೆ. ಈ ನಡುವೆ ಸ್ಟೋರಿಲಿ ಹೊಸ ಟ್ವಿಸ್ಟ್​ ಬರಲಿದೆ.

Advertisment

publive-image

ಕಳೆದು ಹೋಗಿರೋ ದೃಷ್ಟಿ ಅಕ್ಕನ ಸುಳಿವು ಸಿಕ್ಕಿದ್ದು, ದತ್ತನ ಬದುಕಿಗೂ ದೃಷ್ಟಿ ಅಕ್ಕನಿಗೂ ಪ್ಲ್ಯಾಶ್​ ಬ್ಯಾಕ್​ ಸ್ಟೋರಿ ಇದ್ಯಾ? ಇಷ್ಟು ದಿನ ಇಲ್ಲಿದ್ದಳೂ ದೃಷ್ಟಿ ಅಕ್ಕ ಹೀಗೇ ಕುತೂಹಲದ ಅಂಶಗಳು ಒಂದೊಂದಾಗಿ ತೆರೆದುಕೊಳ್ಳಲಿವೆ. ಒಟ್ಟಿನಲ್ಲಿ ದೃಷ್ಟಿಗೆ ಜೀವ ತುಂಬಿರೋ ಅರ್ಪಿತಾ ಚಂದಕ್ಕೆ ಫಿದಾ ಆಗಿರೋ ಫ್ಯಾನ್ಸ್, ಮೇಡಮ್​ ಮೊದಲು ನೀವೂ ದೃಷ್ಟಿ ಬೊಟ್ಟು ಇಟ್ಟುಕೊಳ್ಳಿ ಅಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment