ಬೆಂಗಳೂರು: ಶ್ವಾನದ ಮರಿಗಳ ಮೇಲೆ ಕಾರು ಚಲಾಯಿಸಿ ಅಟ್ಟಹಾಸ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

author-image
AS Harshith
Updated On
ಬೆಂಗಳೂರು: ಶ್ವಾನದ ಮರಿಗಳ ಮೇಲೆ ಕಾರು ಚಲಾಯಿಸಿ ಅಟ್ಟಹಾಸ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
Advertisment
  • ಬೀದಿ ನಾಯಿ ಮರಿಗಳ ಮೇಲೆ ಕಾರು ಚಲಾಯಿಸಿ ವಿಕೃತಿ
  • ಸಿಸಿಟಿವಿಯಲ್ಲಿ ಸೆರೆಯಾಯ್ತು ಕಾರು ಚಾಲಕನ ವರ್ತನೆ
  • ಪೊಲೀಸರ ಬಳಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಮನವಿ

ಬೆಂಗಳೂರು: ಕಿಡಿಗೇಡಿಯೊಬ್ಬ ಶ್ವಾನ ಮತ್ತು ಶ್ವಾನದ ಮರಿಗಳ ಮೇಲೆ‌ ಕಾರು ಚಲಾಯಿಸಿ ಅಟ್ಟಹಾಸ ಮೆರೆದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಬೆಳ್ಳಂದೂರಿನ ಸನ್ ಸಿಟಿ ಅಪಾರ್ಟ್ಮೆಂಟ್ ಹಿಂಭಾಗ ಈ ಘಟನೆ ನಡೆದಿದೆ.

ಕಾರು ಚಾಲಕ ನಾಯಿಗಳು ಕಂಡರೂ ಕಾಣದಂತೆ ಕಾರು ಚಲಾಯಿಸಿದ್ದಾನೆ. ಆ ಮೂಲಕ ಶ್ವಾನಗಳ ಮೇಲೆ ಡ್ರೈವರ್ ವಿಕೃತಿ ಮೆರೆದಿದ್ದಾನೆ. ಡ್ರೈವರ್​​ ಶ್ವಾನಗಳ ಮೇಲೆ ಕಾರು ಚಲಾಯಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Elephant: ದಸರಾ ಹಬ್ಬದಂದು ಆನೆಯ ರಂಪಾಟ.. ಮದವೇರಿಸಿಕೊಂಡು ರಕ್ಕಸ ರೂಪ ತಾಳಿದ ಗಜರಾಜ

ರಸ್ತೆ ಮೇಲೆ ಶ್ವಾನ ಮತ್ತು ತನ್ನ ಮರಿಗಳಿರುತ್ತವೆ. ಈ ವೇಳೆ ಕಾರು ಚಾಲಕ ಕಾರನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾನೆ. ಬಳಿಕ ಎಡಗಡೆಯ ರಸ್ತೆಯಲ್ಲಿ ಸಂಚರಿಸುವ ವೇಳೆ ಶ್ವಾನದ ಮರಿಗಳ ಮೇಲೆ ಕಾರು ಹರಿಸುತ್ತಾನೆ.


">October 13, 2024

ಇದನ್ನೂ ಓದಿ: ವಿಮಾನ ಹಾರಾಟದ ವೇಳೆ ಪೈಲಟ್​ಗೆ ಹೃದಯಾಘಾತ.. ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಭೂಸ್ಪರ್ಶ​ ಮಾಡಿದ ಪತ್ನಿ

ಈ ಘಟನೆ ಸಂಬಂಧ ಸಾರ್ವಜನಿಕರು ಘಟನೆಯ ವಿಡಿಯೋವನ್ನ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಡ್ರೈವರ್​ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ಒಡಿಸ್ಸಾ ಮೂಲದ ಕಾರು ಚಾಲಕನಿಂದ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment