/newsfirstlive-kannada/media/post_attachments/wp-content/uploads/2023/10/NAMMA-METRO-1.jpg)
ದರ ಏರಿಕೆ ಒಂದು ಕಡೆಯಾದರೆ, ನಮ್ಮ ಮೆಟ್ರೋದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸಲಿರುವ ನಮ್ಮ ಮೆಟ್ರೋ ಹಳದಿ ಮಾರ್ಗ ತೆರೆಯುವ ನಿಟ್ಟಿನಲ್ಲಿ ಮಹತ್ವದ ಕೆಲಸಗಳು ಆಗುತ್ತಿವೆ.
ನಿನ್ನೆಯ ದಿನ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವು ಈ ಮಾರ್ಗಕ್ಕಾಗಿ ಚೀನಾದ ಸಿಆರ್ಆರ್ಸಿ ಕಂಪನಿ ಪೂರೈಸಿರುವ ಚಾಲಕ ರಹಿತ ರೈಲಿನ ಶಾಸನಬದ್ಧ ತಪಾಸಣೆ ನಡೆಸಿದೆ. ಆರ್ವಿ ರಸ್ತೆ-ಬೊಮ್ಮಸಂದ್ರ (19.15 ಕಿಮೀ) ಸಂಪರ್ಕಿಸುವ ಹಳದಿ ಮಾರ್ಗಕ್ಕಾಗಿ ಕಳೆದ ವರ್ಷ ಈ ರೈಲು ಬಂದಿದೆ. ಈವರೆಗೆ ಸುಮಾರು 37 ಪರೀಕ್ಷೆಗಳನ್ನು ಮಾಡಲಾಗಿದೆ. ರೈಲಿನ ವೇಗ, ನಿಲ್ಲುವ ಬಗೆ, ಸಿಗ್ನಲಿಂಗ್ ಹಾಗೂ ಎಲೆಕ್ಟ್ರಿಫಿಕೇಶನ್, ಪ್ರಯಾಣಿಕರ ಸುರಕ್ಷತೆ ಸೇರಿ ಹಲವು ತಪಾಸಣೆ ಮಾಡಲಾಗಿದೆ.
ಇದನ್ನೂ ಓದಿ: ಬೆಳಗಾವಿ ಮಂದಿಗೆ ಮತ್ತೊಂದು ಗುಡ್ನ್ಯೂಸ್; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ
ನಿನ್ನೆಯ ದಿನ ಸಿಎಂಆರ್ಎಸ್ ತಂಡವು ರೋಲಿಂಗ್ ಸ್ಟಾಕ್ ತಪಾಸಣೆ ನಡೆಸಿದೆ. ಇದರ ವರದಿಯನ್ನು ಸದ್ಯದಲ್ಲೇ ಕೇಂದ್ರ ರೈಲ್ವೇ ಸಚಿವಾಲಯಕ್ಕೆ ನೀಡಲಾಗುತ್ತದೆ. ರೈಲ್ವೇ ಸಚಿವಾಲಯದ ಒಪ್ಪಿಗೆ ಬಳಿಕ ಸಿಎಂಆರ್ಎಸ್ ತಂಡವನ್ನು ಮತ್ತೆ ಕರೆಸಿ, ಹಳಿ ಮೆಟ್ರೋ ಮಾರ್ಗ ಹಾಗೂ ನಿಲ್ದಾಣಗಳನ್ನು ತಪಾಸಣೆ ನಡೆಸಲು ಕೋರಲಾಗುತ್ತದೆ. ನಂತರ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತಗೊಳಿಸಲಾಗುತ್ತದೆ.
ಇದೇ ಮಾರ್ಗಕ್ಕಾಗಿ ಫೆಬ್ರವರಿ 14 ರಂದು 6 ಬೋಗಿಗಳ ಎರಡನೇ ರೈಲು ಕೋಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸಿದೆ. ಈ ರೈಲಿನ ತಪಾಸಣೆ, ಪ್ರಾಯೋಗಿಕ ಪರಿಶೀಲನೆ ಕೂಡ ನಡೆಯಲಿದೆ. ಚಾಲಕ ರಹಿತ ರೈಲುಗಳ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ತಂತ್ರಜ್ಞಾನ ಆಧಾರಿತವಾಗಿದೆ. ಇದು ಚಾಲಕ ರಹಿತ ತಂತ್ರಜ್ಞಾವುಳ್ಳ ರೈಲು ಆಗಿದೆ. ಸದ್ಯ ಲೋಕೋ ಪೈಲೆಟ್ಗಳನ್ನು ಇಟ್ಟುಕೊಂಡೇ ಓಡಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೇವಲ 9 ರನ್ ಗಳಿಸದ RCB.. ತವರಲ್ಲಿ ಕ್ಯಾಪ್ಟನ್ ಸ್ಮೃತಿ ಮಂದಾನಗೆ ಭಾರೀ ಮುಖಭಂಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ