ಅಂತಿಂಥ ಹೆಣ್ಣು ಇವಳಲ್ಲ..! ರೈಲು ಹಳಿ ಮೇಲೆ ಕಾರು ಓಡಿಸಿ ದಿಗಿಲು ಹುಟ್ಟಿಸಿದ ಲೇಡಿ -VIDEO

author-image
Ganesh
Updated On
ಅಂತಿಂಥ ಹೆಣ್ಣು ಇವಳಲ್ಲ..! ರೈಲು ಹಳಿ ಮೇಲೆ ಕಾರು ಓಡಿಸಿ ದಿಗಿಲು ಹುಟ್ಟಿಸಿದ ಲೇಡಿ -VIDEO
Advertisment
  • ರೈಲ್ವೇ ಹಳಿಯ ಮೇಲೆ ಕಾರ್ ಡ್ರೈವ್ ಮಾಡಿದ ಮಹಿಳೆ
  • ಹೈದರಾಬಾದ್-ಬೆಂಗಳೂರು ರೈಲು ಸಂಚಾರವೇ ಸ್ಥಗಿತ
  • ಕಾರು ಓಡಿಸಿದ ವಿಡಿಯೋ ಭಾರೀ ವೈರಲ್ ಆಗ್ತಿದೆ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು ಅಂತ ನಾವೆಲ್ಲಾ ಹಾಡು ಕೇಳಿದ್ದೇವೆ, ಹಾಡು ಹಾಡಿದ್ದೇವೆ. ಅದೇ ರೀತಿ ರಸ್ತೆ ಬಿಟ್ಟು ರೈಲ್ವೇ ಹಳಿ ಮೇಲೆ ಕಾರ್ ಕೂಡ ಸಾಗದು. ಆದರೆ ಇದನ್ನು ಸುಳ್ಳು ಆಗಿಸುವಂತೆ ಹೈದರಾಬಾದ್​ನಲ್ಲಿ ಮಹಿಳೆಯೊಬ್ಬಳು, ರೈಲ್ವೇ ಹಳಿ ಮೇಲೆ ಕಾರು ಓಡಿಸಿದ್ದಾಳೆ!

ಎಣ್ಣೆ ಹೊಡೆದು ಕಾರನ್ನು ರೈಲ್ವೆ ಟ್ರ್ಯಾಕ್ ಮೇಲೆ ಲೇಡಿ ಡ್ರೈವ್ ಮಾಡಿಕೊಂಡು ಸ್ಪೀಡಾಗಿ ಹೋಗಿದ್ದಾಳೆ. ಹೈದರಾಬಾದ್​ನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಕಾರ್ ಡ್ರೈವ್ ಮಾಡುವುದನ್ನು ಕಂಡು ಜನ ಶಾಕ್ ಆಗಿದ್ದಾರೆ. ಹೈದರಾಬಾದ್‌ನ ಶಂಕರಪಲ್ಲಿಯಲ್ಲಿ ಟ್ರ್ಯಾಕ್ ಮೇಲೆ ಕಿಯಾ ಕಾರ್ ಡ್ರೈವ್ ಮಾಡಿಕೊಂಡು ಹೊರಟ ಮಹಿಳೆಯ ಹುಚ್ಚಾಟಕ್ಕೆ ಜನ ದಂಗಾಗಿದ್ದಾರೆ.

ಇದನ್ನೂ ಓದಿ: ತಪ್ಪು ಒಪ್ಪಿಕೊಳ್ಳದ ಗಂಭೀರ್​.. ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತಿದ್ದಾರೆ ಕೋಚ್..!

ಹೀಗೆ ರೈಲ್ವೆ ಟ್ರ್ಯಾಕ್ ಮೇಲೆ ಕಾರ್ ಡ್ರೈವ್ ಮಾಡಿಕೊಂಡು ಹೊರಟ ಮಹಿಳೆಯನ್ನು ಲಕ್ನೋದ ವೋಮಿಕಾ ಸೋನಿ ಎಂದು ಗುರುತಿಸಲಾಗಿದೆ. ರೈಲ್ವೆ ಟ್ರ್ಯಾಕ್ ಮೇಲೆ ಕಾರ್ ಚಲಾಯಿಸಿದ್ದರಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೊಂಡಗಲ್ ಗೇಟ್ ಬಳಿ ಕಾರನ್ನು ತಡೆಯಲು ರೈಲ್ವೇ ಸಿಬ್ಬಂದಿ ಯತ್ನಿಸಿದ್ದಾರೆ. ಕಾರು ನಿಲ್ಲಿಸದೆ ವೋಮಿಕಾ ಸೋನಿ ಕಾರ್ ಡ್ರೈವ್ ಮಾಡಿಕೊಂಡು ಎಸ್ಕೇಪ್ ಆಗುವ ಯತ್ನ ಮಾಡಿದ್ದಾಳೆ. ಬಳಿಕ ಸ್ಥಳೀಯರು, ರೈಲ್ವೆ ಸಿಬ್ಬಂದಿ ಸೇರಿಕೊಂಡು ಕಾರ್ ನಿಲ್ಲಿಸಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಹಿಳೆಯು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಟ್ರ್ಯಾಕ್ ಮೇಲೆ ಚಲಾಯಿಸಿಕೊಂಡು ಹೋಗುತ್ತಿದ್ದ ಈ ಕಾರ್ ಅನ್ನು ತಡೆಯಲು 20 ರಿಂದ 30 ಮಂದಿ ಯತ್ನಿಸಿದ್ದಾರೆ. ಮಹಿಳೆಯನ್ನು ಕಾರ್ ನಿಂದ ಹೊರಗೆ ಕರೆ ತರಲು 20 ಮಂದಿ ಶ್ರಮಪಟ್ಟಿದ್ದಾರೆ. ಕಾರು ನಿಲ್ಲಿಸದ ಮೇಲೂ ಇಲಿಯದೇ ತನಿಖೆಗೆ ಸಹಕಾರ ನೀಡಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಸಿದ್ಧ ದೇಗುಲದ ಹುಂಡಿಗೆ 4 ಕೋಟಿ ಮೌಲ್ಯದ ಆಸ್ತಿ ಪತ್ರ ಹಾಕಿದ ನಿವೃತ್ತ ಸೇನಾಧಿಕಾರಿ.. ಕಾರಣ ಇಬ್ಬರು ಹೆಣ್ಮಕ್ಕಳು!

ಕಾರನ್ನು ರೈಲ್ವೇ ಪೊಲೀಸರು ರೈಲ್ವೆ ಟ್ರ್ಯಾಕ್​ನಿಂದ ರಿಮೂವ್ ಮಾಡಿದ್ದಾರೆ. ಟ್ರ್ಯಾಕ್ ಮೇಲೆ ಕಾರ್ ಚಲಾಯಿಸಿದ್ದರಿಂದ ಬೆಂಗಳೂರು- ಹೈದರಾಬಾದ್ ರೈಲು ಸಂಚಾರ ವ್ಯತ್ಯಯವಾಗಿದೆ. ಸುಮಾರು 15 ರಿಂದ 20 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕೆಲ ರೈಲುಗಳನ್ನು ಬೇರೆಡೆ ಡೈವರ್ಟ್ ಕೂಡ ಮಾಡಲಾಗಿತ್ತು. ಇಲಾಖೆಯ ಸಿಬ್ಬಂದಿಯು ಮುಂಜಾಗ್ರತಾ ಕ್ರಮವಾಗಿ ರೈಲು ಸಂಚಾರ ಸ್ಥಗಿತಗೊಳಿಸಿದ್ದರು. ಇದೊಂದು ಗಂಭೀರ ರೆಲ್ವೇ ಭದ್ರತಾ ಲೋಪ ಎಂದು ರೈಲ್ವೇ ಅಧಿಕಾರಿಗಳೇ ಹೇಳಿದ್ದಾರೆ. ಮಹಿಳೆ ಹೇಗೆ ಕಾರು ಚಲಾಯಿಸಿಕೊಂಡು ರೈಲ್ವೇ ಟ್ರ್ಯಾಕ್ ಮೇಲೆ ಬಂದರು ಎಂಬ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಈ ಮಾರ್ಗದ ಸಿಸಿಟಿವಿಗಳನ್ನು ರೈಲ್ವೇ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ವೋಮಿಕಾ ಸೋನಿ ಎಂಬ ಮಹಿಳೆಯು ಮಾನಸಿಕ ಅಸ್ವಸ್ಥಳ ಎಂಬ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಹಳಿಯ ಮೇಲೆ ಕಾರ್ ಚಲಾಯಿಸಿಕೊಂಡು ಏಕೆ ಬಂದರು. ಇದರ ಹಿಂದಿನ ಉದ್ದೇಶ, ದುರುದ್ದೇಶ ಏನು ಎಂಬ ಬಗ್ಗೆ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಳಿ ಮೇಲೆ ಕಾರು ಚಲಾಯಿಸಿಕೊಂಡು ಹೋಗಿ ಅಪಘಾತದಲ್ಲಿ ಸಾವನ್ನಪ್ಪಿ, ತಮ್ಮ ಸಾವು ಅನ್ನು ಕೊಲೆ ಎಂದು ಬಿಂಬಿಸುವ ಉದ್ದೇಶ ಏನಾದರೂ ಇತ್ತಾ ಎಂಬ ಪ್ರಶ್ನೆಗಳು ಉದ್ಭವವಾಗಿವೆ. ವೋಮಿಕಾ ಸೋನಿಯು ಹೈದರಾಬಾದ್ ನಲ್ಲಿ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರೈಲ್ವೇ ಪೊಲೀಸರು ಹೇಳಿದ್ದಾರೆ. ಮಹಿಳೆಯ ಬಳಿಯಿಂದ ಪ್ಯಾನ್ ಕಾರ್ಡ್, ಕಾರ್ ಡ್ರೈವಿಂಗ್ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವೋಮಿಕಾ ಸೋನಿಯನ್ನು ಈಗ ರೈಲ್ವೇ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ: ಜೈಲಿಗೆ ಕಳಿಸ್ತೀನಿ ಅಂತ ಪತ್ನಿ ಬೆದರಿಸ್ತಿದ್ದಾಳಾ? ಭಯ ಬೇಡ, ಸುಪ್ರೀಂ ಕೋರ್ಟ್​ನ ಈ ಮಹತ್ವದ ನಿರ್ದೇಶನ ಬಗ್ಗೆ ತಿಳಿಯಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment