ಸ್ಯಾಂಡಲ್​ವುಡ್​ಗೆ ಹೊಸ ಎಂಟ್ರಿ.. ಸದ್ದಿಲ್ಲದೆ ಸಿನಿಮಾ ಮಾಡ್ತಿದಾರಾ ಡ್ರೋನ್​ ಪ್ರತಾಪ್​?

author-image
Ganesh Nachikethu
Updated On
ಸ್ಯಾಂಡಲ್​ವುಡ್​ಗೆ ಹೊಸ ಎಂಟ್ರಿ.. ಸದ್ದಿಲ್ಲದೆ ಸಿನಿಮಾ ಮಾಡ್ತಿದಾರಾ ಡ್ರೋನ್​ ಪ್ರತಾಪ್​?
Advertisment
  • ಬಿಗ್​ಬಾಸ್ ಕನ್ನಡ 10ನೇ ಸೀಸನ್​​ ರನ್ನರ್ ಅಪ್ ಡ್ರೋನ್ ಪ್ರತಾಪ್
  • ಈ ಹಿಂದೆ ಹಲವು ವಿಚಾರಗಳಿಂದ ಭಾರೀ ಸುದ್ದಿಯಾಗಿದ್ದ ಡ್ರೋನ್​!
  • ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೀರೋ ಆಗಿ ಡ್ರೋನ್​​ ಪ್ರತಾಪ್​ ಎಂಟ್ರಿ?

ಬಿಗ್​ಬಾಸ್ ಕನ್ನಡ 10ನೇ ಸೀಸನ್​​ ರನ್ನರ್ ಅಪ್ ಡ್ರೋನ್ ಪ್ರತಾಪ್. ಇವರು ಈಗ ನಿಜವಾದ ಸೆಲೆಬ್ರಿಟಿ. ಈ ಹಿಂದೆ ಹಲವು ವಿಚಾರಗಳಿಂದ ಸುದ್ದಿಯಾಗಿದ್ದ ಡ್ರೋನ್​ ಪ್ರತಾಪ್​​ ಈಗ ಮತ್ತೊಂದು ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಅದು ಡ್ರೋನ್​ ಪ್ರತಾಪ್​ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುವುದು.

ಯೆಸ್​​, ಮೊದಲಿನಿಂದಲೂ ಸೆಲೆಬ್ರಿಟಿ ಆಗಿದ್ರೂ ಡ್ರೋನ್​ ಪ್ರತಾಪ್​ ಭಾರೀ ಟ್ರೋಲ್ ಆಗಿದ್ದವರು. ತಾನು ಡ್ರೋನ್​ ಕಂಡು ಹಿಡಿದಿದ್ದಾಗಿ ಹೇಳಿಕೊಂಡು ಭಾರೀ ಟ್ರೋಲ್​​ ಆಗಿದ್ದ ಡ್ರೋನ್​​ ಪ್ರತಾಪ್​ಗೆ ಹೋದ ಗೌರವವನ್ನು ವಾಪಸ್​ ತಂದುಕೊಟ್ಟಿದ್ದು ಬಿಗ್​​ಬಾಸ್​​.

publive-image

ಬಿಗ್​ಬಾಸ್​ ಮನೆಗೆ ಹೋಗಿ ಬಂದ ಮೇಲೆ ಡ್ರೋನ್​ ಪ್ರತಾಪ್​ ನಸೀಬು ಬದಲಾಗಿವೆ. ಡ್ರೋನ್ ಪ್ರತಾಪ್ ಅವರಿಗೂ ಸಿನಿಮಾ ಆಫರ್​ಗಳು ಬಂದಿವೆಯಂತೆ. ಸದ್ಯದಲ್ಲೇ ಡ್ರೋನ್​ ಪ್ರತಾಪ್​ ಹೀರೋ ಆಗಿ ಕನ್ನಡ ಫಿಲ್ಮ್​ ಇಂಡಸ್ಟ್ರಿಗೆ ಎಂಟ್ರಿ ನೀಡುತ್ತಿವೆ ಮೂಲಗಳು.

ಇನ್ನು, ಈ ಬಗ್ಗೆ ಡ್ರೋನ್​ ಪ್ರತಾಪ್​ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ನಟ ಅಂಬರೀಶ್​​ ಅವರ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳೊಂದಿಗೆ ಡ್ರೋನ್​ ಪ್ರತಾಪ್​​​ ಭಾಗಿಯಾಗಿದ್ರು. ಈ ಸಂದರ್ಭದಲ್ಲಿ ಮಾತಾಡಿದ ಡ್ರೋನ್​​, ನನಗೆ ಅಂಬರೀಶಣ್ಣ ಸ್ಫೂರ್ತಿ. ಅವರ ಸಿನಿಮಾಗಳನ್ನು ಮಾದರಿಯಾಗಿ ತೆಗೆದುಕೊಂಡು ಮುಂದೆ ಸಾಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:ಇದು ‘ಅಮೃತವರ್ಷಿಣಿ’ ಘಳಿಗೆ..! ಬಹಳ ದಿನಗಳ ನಂತರ ಒಂದಾದ ಅತ್ತೆ ಸೊಸೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment