/newsfirstlive-kannada/media/post_attachments/wp-content/uploads/2024/12/Drone-Pratap-Arrest-Case.jpg)
ತುಮಕೂರು: ಕನ್ನಡದ ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರು ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬ್ಲಾಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದರು. ಡ್ರೋನ್ ಪ್ರತಾಪ್ ವಿರುದ್ಧ ಕೇಸ್ ದಾಖಲಿಸಿದ್ದ ಮಿಡಿಗೇಶಿ ಪೊಲೀಸರು ಮಧುಗಿರಿ ಜೈಲಿಗೆ ಕಳುಹಿಸಿದ್ದರು.
ಡ್ರೋನ್ ಪ್ರತಾಪ್ ಅವರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜನಕಲೋಟಿಯ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟ ಮಾಡಿದ್ದರು. ಸೋಡಿಯಂ ಮೆಟಲ್ ಬ್ಲಾಸ್ಟ್ ಆದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಈ ಬಗ್ಗೆ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಡ್ರೋನ್ ಪ್ರತಾಪ್ ಅವರನ್ನ ಬಂಧಿಸಿದ್ದರು. ಮಧುಗಿರಿ ಜೆಎಮ್‌ಎಫ್‌ಸಿ ಕೋರ್ಟ್ ಆರೋಪಿ ಡ್ರೋನ್ ಪ್ರತಾಪ್ ಅವರಿಗೆ ಇದೇ ಡಿಸೆಂಬರ್ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಇದನ್ನೂ ಓದಿ: BBK11: ಬಿಗ್ಬಾಸ್ ಮನೆಯಲ್ಲಿ ಇದೆಲ್ಲಾ ಬೇಕಿತ್ತಾ.. ಕಿಚ್ಚನ ಖಡಕ್ ಮಾತಿಗೆ ಭವ್ಯಾ ಗೌಡ ಫುಲ್ ಸೈಲೆಂಟ್!
ಮಧುಗಿರಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಡ್ರೋನ್ ಪ್ರತಾಪ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದೆ. ಡ್ರೋನ್ ಪ್ರತಾಪ್ ಅವರ ಮನವಿ ಪುರಸ್ಕರಿಸಿದ್ದು, ಜಾಮೀನು ಮಂಜೂರು ಮಾಡಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸೋಡಿಯಂ ಮೆಟೆಲ್ ಬ್ಲಾಸ್ಟ್ ಪ್ರಕರಣದಲ್ಲಿ ಡ್ರೋಣ್ ಪ್ರತಾಪ್ ಅವರಿಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ನಾಳೆ ಮಧುಗಿರಿ ಉಪ ಕಾರಾಗೃಹದಿಂದ ಡ್ರೋನ್ ಪ್ರತಾಪ್ ಅವರು ಬಿಡುಗಡೆ ಆಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ