/newsfirstlive-kannada/media/post_attachments/wp-content/uploads/2025/04/drone-prathap.jpg)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದ್ದಾರೆ. ಹೌದು, ಬಿಗ್ಬಾಸ್ ಸೀಸನ್ 10ರ ರನ್ನರ್ ಅಪ್ ಆಗಿದ್ದ ಡ್ರೋನ್ ಪ್ರತಾಪ್ ಸದ್ಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ಎಂಟ್ರಿ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್ಗೆ ಜೋಡಿಯಾಗಿ ಮಹಾನಟಿ ಖ್ಯಾತಿಯ ಗಗನಾ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಪಾದರಕ್ಷೆ ಕೊಳ್ಳಲು ದುಡ್ಡಿಲ್ಲ.. ಇಡೀ ಗ್ರಾಮಕ್ಕೆ ಪವನ್ ಕಲ್ಯಾಣ್ ಭರ್ಜರಿ ಗಿಫ್ಟ್; ಮನ ಮಿಡಿಯುವ ಸ್ಟೋರಿ!
ಕಳೆದ ವಾರ ಬ್ಯಾಚುಲರ್ಸ್ಗಳಿಗೆ ಲವ್ ಕೆಮಿಸ್ಟ್ರಿ ರೌಂಡ್ ಇತ್ತು. ಆದ್ರೆ, ಈ ವಾರ ಏಂಜಲ್ಸ್ಗಳಿಗೆ ಹೊಸ ಚಾಲೆಂಜ್ ಎದುರಾಗಿದೆ. ಏಂಜಲ್‌ಗಳು ಕೊಟ್ಟ ಭಾವನಾತ್ಮಕ ಸರ್ಪ್ರೈಸ್ಗೆ ಬ್ಯಾಚುಲರ್ಸ್ ಭರ್ಜರಿಯಾಗಿ ಮನಸೋತ್ತಿದ್ದಾರೆ. ಹೌದು, ರಿಲೀಸ್ ಆಗಿರೋ ಪ್ರೋಮೋದಲ್ಲಿ ಗಗನಾ ಕೊಟ್ಟ ಸರ್ಪ್ರೈಸ್ಗೆ ಡ್ರೋನ್ ಪ್ರತಾಪ್ ಕಣ್ಣೀರು ಸುರಿಸಿದ್ದಾರೆ.
ಡ್ರೋನ್ ಪ್ರತಾಪ್ಗೆ ಸರ್ಪ್ರೈಸ್ ನೀಡುವ ಸಲುವಾಗಿ ಗಗನಾ ರೋಬೋ ಆಗಿ ವೇದಿಕೆಗೆ ಎಂಟ್ರಿ ಕೊಟ್ಟು ಶಾಕ್ ನೀಡಿದ್ದರು. ಪ್ರತಾಪ್ ಅವರನ್ನು ಇಂಪ್ರೆಸ್ ಮಾಡಲು ಫಿಸಿಕ್ಸ್, ಕೆಮೆಸ್ಟ್ರಿನೇ ಬೇಕು ಎಂದು ಹೀಗೆ ಬಂದೆ, ಇಂಪ್ರೆಸ್ ಆದ್ರಾ ಅಂತ ಕೇಳಿದ್ದಾರೆ. ಅದಕ್ಕೆ ಪ್ರತಾಪ್ ತುಂಬಾ ಇಂಪ್ರೆಸ್ ಆದೆ. ಮುಂದೆ ಗಗನಾ ಥರ ರೋಬೋ ಮಾಡಲು ಪ್ರಯತ್ನ ಮಾಡ್ತೇನೆ ಎಂದಾಗ ಎಲ್ಲರು ನಕ್ಕಿದ್ದಾರೆ.
ಇದಾದ ಬಳಿಕ ವಿಜ್ಞಾನಿಗಳ ಸಾಲಿನಲ್ಲಿ ಡ್ರೋನ್ ಪ್ರತಾಪ್ ಫೋಟೋ ಫಿಕ್ಸ್ ಮಾಡಲಾಗಿದೆ. ಇವರು ಖ್ಯಾತ ವಿಜ್ಞಾನಿ ಎಂದು ತಮಾಷೆ ಮಾಡಲಾಗಿದೆ. ಡ್ರೋನ್ ಅವರನ್ನು ಇಷ್ಟ ಪಡುವ ಅಭಿಮಾನಿಗಳನ್ನು ವೇದಿಕೆ ಮೇಲೆ ಕರೆತರಲಾಗಿತ್ತು. ಅಭಿಮಾನಿಗಳು ಡ್ರೋನ್ಗೆ ಹಾರ ಹಾಕಿ, ಸಿಹಿ ತಿನ್ನಿಸಿ ಜೈಕಾರ ಹಾಕಿದ್ದಾರೆ. ಇದೇ ಖುಷಿಯಲ್ಲಿ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ