/newsfirstlive-kannada/media/post_attachments/wp-content/uploads/2025/03/gagana12.jpg)
ಕನ್ನಡದ ಬಿಗ್ಬಾಸ್ ಸೀಸನ್ 10 ರನ್ನರ್ ಅಪ್ ಆಗಿದ್ದ ಡ್ರೋನ್ ಪ್ರತಾಪ್ ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ಬಾಸ್ ಬೆನ್ನಲ್ಲೇ ಡ್ರೋನ್ ಪ್ರತಾಪ್ ಅವರು ಭರ್ಜರಿ ಬ್ಯಾಚುಲರ್ಸ್ ಶೋಗೆ ಎಂಟ್ರಿ ಕೊಟ್ಟು ಕಮಾಲ್ ಮಾಡುತ್ತಿದ್ದಾರೆ. ಹೌದು, ಡ್ರೋನ್ ಪ್ರತಾಪ್ಗೆ ಜೋಡಿಯಾಗಿ ಆಯ್ಕೆಯಾಗಿದ್ದಾರೆ ಮಹಾನಟಿ ಗಗನಾ.
ಇದನ್ನೂ ಓದಿ: 10 ತಿಂಗಳ ಬಳಿಕ ಶೂಟಿಂಗ್‌ನಲ್ಲಿ ಭಾಗಿಯಾದ ನಟ ದರ್ಶನ್; ಟಾಪ್ 10 ಫೋಟೋ ಇಲ್ಲಿವೆ!
ಕಳೆದ ವಾರ ಬ್ಯಾಚುಲರ್ಸ್ ತಮ್ಮ ತಮ್ಮ ಪಾಟ್ನರ್ಗೆ ಸರ್ಪ್ರೈಸ್ ಕೊಡಬೇಕು ಅಂತ ಜಡ್ಜಸ್ ಹೇಳಿದ್ದರು. ಹೀಗಾಗಿ ಬ್ಯಾಚುಲರ್ಸ್ ಎಲ್ಲ ತಮ್ಮ ಪಾಟ್ನರ್ನಳಿಗೆ ಸರ್ಪ್ರೈಸ್ ಕೊಟ್ಟಿದ್ದರು. ಆದ್ರೆ ಈ ವಾರ 10 ಬ್ಯಾಚ್ಯುಲರ್ಸ್ ಮತ್ತು ಏಂಜಲ್ಸ್ 10 ಸೂಪರ್ ಹಿಟ್ ಸಿನಿಮಾಗಳನ್ನು ಮರುಸೃಷ್ಟಿ ಮಾಡಿದ್ದಾರೆ.
ಆದ್ರೆ ಈ ವಾರ ಗಗನಾ ಹಾಗೂ ಡ್ರೋನ್ ಪ್ರತಾಪ್ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಮಾಲಾಶ್ರೀ ಅವರ ಅಭಿನಯದ ರಾಮಾಚಾರಿ ಸೀನ್ ಅನ್ನು ರೀಕ್ರಿಯೇಟ್ ಮಾಡಿದ್ದಾರೆ. ಇದೇ ವೇಳೆ ಡ್ರೋನ್ ಪ್ರತಾಪ್ ಸೇಮ್ ಟು ಸೇಮ್ ಕ್ರೇಜಿಸ್ಟಾರ್ನಂತೆ ರೆಡಿಯಾಗಿ ನಟನೆ ಮಾಡಿದ್ದಾರೆ. ಅಲ್ಲದೇ ರಾಮಾಚಾರಿ ಸಿನಿಮಾದಲ್ಲಿ ರವಿಚಂದ್ರನ್ ಅವರು ಮಾಲಾಶ್ರೀಗೆ ತಾಳಿ ಕಟ್ಟಿದ ಹಾಗೇ ಇಲ್ಲೂ ಕೂಡ ಡ್ರೋನ್ ಪ್ರತಾಪ್ ಗಗನಾಗೆ ತಾಳಿ ಕೊಟ್ಟಿದ್ದಾರೆ. ಇದನ್ನೇ ನೋಡಿದ ಡಿಂಪಲ್ ಕ್ವೀನ್ ಸೇರಿದಂತೆ ಎಲ್ಲರೂ ಕೂಡ ಶಾಕ್ ಆಗಿದ್ದಾರೆ. ಅಲ್ಲದೇ ಡ್ರೋನ್ ಪ್ರತಾಪ್ ನಟನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಫುಲ್ ಮಾಕ್ಸ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ