ಡ್ರೋನ್ ಪ್ರತಾಪ್ ಅರೆಸ್ಟ್; ಇರಲಾರದೇ ಇರುವೆ ಬಿಟ್ಕೊಂಡ ಪರಿಸ್ಥಿತಿ..!

author-image
Ganesh
Updated On
ಸೋಡಿಯಂ ಬಳಸಿ ಸ್ಫೋಟ ಪ್ರಕರಣ; ಡ್ರೋನ್​​ ಪ್ರತಾಪ್​ಗೆ ಕೋರ್ಟ್​​ನಿಂದ ಬಿಗ್​ ಶಾಕ್​​
Advertisment
  • ಕೆಮಿಕಲ್ ಬ್ಲಾಸ್ಟ್ ಮಾಡಿದ್ದ ಕೇಸ್​ನಲ್ಲಿ ಲಾಕ್​​!
  • ಮಿಡಿಗೇಶಿ ಪೊಲೀಸರಿಂದ ಪ್ರತಾಪ್​​​ ವಿಚಾರಣೆ
  • ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರತಾಪ್

ಮೊನ್ನೆ ಮೊನ್ನೆಯಷ್ಟೇ ಬಿಗ್​ಬಾಸ್​ ಸೀಸನ್​ 11ರಲ್ಲಿ ಗೆಸ್ಟ್​​ ಆಗಿ ಬಂದಿದ್ದ ಡ್ರೋನ್​ ಪ್ರತಾಪ್​​ ಮತ್ತೆ ಸುದ್ದಿಯಲ್ಲಿದ್ದಾರೆ. ವಿಷ್ಯ ಏನಪ್ಪ ಅಂದ್ರೆ? ಮಾಡಿರೋ ಒಂದು ಎಕ್ಸ್​ಪೆರಿಮೆಂಟ್​ ಡ್ರೋನ್​ ಪ್ರತಾಪ್​ರನ್ನ ವಿವಾದ ಸುಳಿಗೆ ಸಿಲುಕಿಸಿದೆ.. ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿ ಆಗ್ತಿದ್ದಂತೆ ಡ್ರೋನ್​​​ ಪ್ರತಾಪ್​​​ನನ್ನ ಅರೆಸ್ಟ್​​ ಮಾಡ್ಲಾಗಿದೆ.

ಕೃಷಿ ಹೊಂಡದಂತಿರೋ ಆಳವಾದ ದೊಡ್ಡ ಗುಂಡಿಯಲ್ಲಿರೋ ನೀರಿಗೆ ಸೋಡಿಯಂ ಮೆಟಲ್ ಹಾಕಿ ಬ್ಲಾಸ್ಟ್ ಮಾಡಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡ್ತಿರೋ ಈ ವಿಡಿಯೋ ನೋಡಿದ ಪರಿಸರ ಪ್ರೇಮಿಗಳು ಡ್ರೋನ್​ ಪ್ರತಾಪ್​ ವಿರುದ್ಧ ಸಿಡಿದೆದ್ದಿದ್ದಾರೆ. ಎಕ್ಸ್​​ಪೆರಿಮೆಂಟ್​​ ಮೂಲಕ ಡ್ರೋನ್​ ಪ್ರತಾಪ್​ ಸಮಾಜಕ್ಕೆ ತಪ್ಪು ಸಂದೇಶ ಕೊಡ್ತಿದ್ದಾರೆ ಅಂತ ಸಾರ್ವಜನಿಕರು, ಸಂಶೋಧಕರು ಗರಂ ಆಗಿದ್ದಾರೆ.

ಇದನ್ನೂ ಓದಿ:ತುಮಕೂರು ಪೊಲೀಸರಿಂದ ಡ್ರೋನ್​ ಪ್ರತಾಪ್ ದಿಢೀರ್​​​ ಬಂಧನ; ಕಾರಣವೇನು ಗೊತ್ತಾ?

ನೀರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಲಾಸ್ಟ್ ಮಾಡೋದ್ರಿಂದ ತುಂಬಾನೇ ಅನಾನುಕೂಲ ಇದೆ. ಆ ನೀರು ಕುಡಿಯಲು ಯೋಗ್ಯವಾಗಿರಲ್ಲ. ನೀರಿನಲ್ಲಿರುವ ಜಲಚರಗಳಿಗೂ ಹಾನಿ ಮಾಡುತ್ತದೆ. ಸಣ್ಣದಾದ ಕೆರೆ, ಬಾವಿಗಳಲ್ಲಿ ಸೋಡಿಯಂ ಯೂಸ್ ಮಾಡಿ ಸ್ಫೋಟಗೊಳಿಸೋದ್ರಿಂದ ನೀರಿನಲ್ಲಿರುವ ಪಿಹೆಚ್​​ ಲೇವಲ್ ತುಂಬಾ ಹೆಚ್ಚಾಗುತ್ತದೆ. ಇದರಿಂದ ಜೀವಿಗಳಿಗೆ ವಾಸಕ್ಕೆ ಪೆಟ್ಟು ಕೊಡುತ್ತದೆ- ಗಿರೀಶ್​ ಲಿಂಗಣ್ಣ, ಸಂಶೋಧಕ

ತೀವ್ರ ಟೀಕೆಗಳ ಬೆನ್ನಲ್ಲೆ ಡ್ರೋನ್​ ಪ್ರತಾಪ್​ನನ್ನು ಅರೆಸ್ಟ್​ ಮಾಡಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ರು ಪ್ರತಾಪ್​ನನ್ನ ಬಂಂಧಿಸಿದ್ದಾರೆ. ವಿಡಿಯೋ ಆಧರಿಸಿ ಎಫ್​ಐಆರ್​ ದಾಖಲಾಗಿದೆ. BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಠಾಣೆಯಲ್ಲಿ ಡ್ರೋನ್ ಪ್ರತಾಪ್​ನ ವಿಚಾರಣೆ ನಡೆಸಿದ್ದಾರೆ. ಇರಲಾಗದೇ ಇರುವೆ ಬಿಟ್ಕೊಂಡ್ರಂತೆ ಅನ್ನೋ ಪರಿಸ್ಥಿತಿ ಡ್ರೋಣ್ ಪ್ರತಾಪ್​​ಗೆ ಆಗಿದೆ.

ಇದನ್ನೂ ಓದಿ:ಕೇಸ್​​ವೊಂದರಲ್ಲಿ ಡ್ರೋನ್​ ಪ್ರತಾಪ್​ ಅರೆಸ್ಟ್​; ಪೊಲೀಸರಿಂದ ತೀವ್ರ ವಿಚಾರಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment