ಡ್ರೋನ್​ ಪ್ರತಾಪ್​ ಅದೊಂದು ಮಾತಿಗೆ ನಾಚಿ ನೀರಾದ ಗಗನಾ.. ರಚಿತಾ ರಾಮ್ ಸೇರಿ ಎಲ್ಲರೂ ಶಾಕ್​​..?​

author-image
Veena Gangani
Updated On
ಡ್ರೋನ್​ ಪ್ರತಾಪ್​ ಅದೊಂದು ಮಾತಿಗೆ ನಾಚಿ ನೀರಾದ ಗಗನಾ.. ರಚಿತಾ ರಾಮ್ ಸೇರಿ ಎಲ್ಲರೂ ಶಾಕ್​​..?​
Advertisment
  • ಕೊನೆಗೂ ಗಗನಾಳ ಹೃದಯ ಗೆದ್ದ ಡ್ರೋನ್​ ಪ್ರತಾಪ್​
  • ಮಹಾನಟಿ ಗಗನಾಗೆ ಸರ್​ಪ್ರೈಸ್ ಕೊಟ್ಟೇಬಿಟ್ಟ ಪ್ರತಾಪ್​
  • ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಡ್ರೋನ್ ಪ್ರತಾಪ್​​ ಕಮಾಲ್

ಕನ್ನಡದ ಬಿಗ್​ಬಾಸ್​ ಸೀಸನ್ 10 ರನ್ನರ್ ಅಪ್​ ಆಗಿದ್ದ ಡ್ರೋನ್​ ಪ್ರತಾಪ್​ ಸಖತ್ ಗಗನಾಗೆ ಪ್ರಪೋಸ್​ ಮಾಡಿದ ಖುಷಿಯಲ್ಲಿದ್ದಾರೆ. ​ಬಿಗ್​ಬಾಸ್​ ಬೆನ್ನಲ್ಲೇ ಡ್ರೋನ್ ಪ್ರತಾಪ್ ಅವರು ಭರ್ಜರಿ ಬ್ಯಾಚುಲರ್ಸ್ ಶೋಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ:ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!

publive-image

ಹೌದು, ಡ್ರೋನ್​ ಪ್ರತಾಪ್​ಗೆ ಜೋಡಿಯಾಗಿ ಮಹಾನಟಿ ಖ್ಯಾತಿಯ ಗಗನಾ ಬಂದಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ದಿನದಿಂದ ದಿನಕ್ಕೆ ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಮೇಲೆ ಕಂಗೊಳಿಸುತ್ತಿದ್ದಾರೆ ಡ್ರೋನ್​ ಪ್ರತಾಪ್​.

publive-image

ಎಲ್ಲ ಟಾಪ್​ 10 ಮಂದಿ ಬ್ಯಾಚುಲರ್ಸ್ ತಮ್ಮ ಮೆಂಟರ್ಸ್​ಗಳಿಗೆ ಸರ್​ಪ್ರೈಸ್​ಗಳನ್ನು ಕೊಟ್ಟಿದ್ದಾರೆ. ಹೌದು, ಈ ವಾರ ಬ್ಯಾಚುಲರ್ಸ್​ಗಳಿಗೆ ಜಡ್ಜಸ್ ಟಾಸ್ಕ್​ವೊಂದನ್ನು ಕೊಟ್ಟಿದ್ದರು. ಅದುವೇ ಪ್ರಪೋಸಲ್ ರೌಂಡ್​. ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಮೇಲೆ ಒಬ್ಬೊಬ್ಬರಾಗಿ ಬಂದು ತಮ್ಮ ಮೆಂಟರ್ಸ್​ಗಳಿಗೆ ಬ್ಯಾಚುಲರ್ಸ್​ ಪ್ರಪೋಸ್​ ಮಾಡಿದ್ದಾರೆ. ಭಿನ್ನ ವಿಭಿನ್ನ ಥೀಮ್​ನಲ್ಲಿ ವೇದಿಕೆ ರೆಡಿ ಮಾಡಿ ಸರ್​ಪ್ರೈಸ್​ ಕೊಟ್ಟಿದ್ದಾರೆ.

publive-image

ಅದೇ ರೀತಿ ಡ್ರೋನ್​ ಪ್ರತಾಪ್​ ಕೂಡ ಮೆಂಟರ್​ ಗಗನಾಗೆ ಕ್ಯೂಟ್​ ಆಗಿ ಪ್ರಪೋಸ್​ ಮಾಡಿದ್ದಾರೆ. ಮೊದಲು ಡ್ರೋನ್​ ಪ್ರತಾಪ್ ಗಗನಾಳ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವೇದಿಕೆಗೆ ಕರೆದುಕೊಂಡು ಬಂದಿದ್ದಾರೆ. ಇದಾದ ಬಳಿಕ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿದ ತಕ್ಷಣ ಡ್ರೋನ್​ ಪ್ರತಾಪ್​ ಕೊಟ್ಟ ಸರ್​ಪ್ರೈಸ್​ ನೋಡಿ ಖುಷಿ ಪಟ್ಟಿದ್ದಾರೆ. ಇದಾದ ಬಳಿಕ ಪುಟ್ಟ ಮರದ ತುಂಬಾ  ಗಗನಾ ಅವರ ಇಡೀ ಕುಟುಂಬಸ್ಥರ ಫೋಟೋವನ್ನೇ ಹಾಕಿದ್ದರು. ಇದನ್ನೂ ನೋಡಿದ ಡ್ರೋನ್​ ಪ್ರತಾಪ್​, ಇದರಲ್ಲಿ ಯಾರೋ ಒಬ್ಬರು ಮಿಸ್​ ಆಗಿದ್ದಾರೆ ಗೆಸ್​ ಮಾಡಿ ಅಂತ ಕೇಳಿದ್ದಾರೆ. ಅದಕ್ಕೆ ಗಗನಾ ನನ್ನ ಲೈಫ್​ ಪಾರ್ಟನರ್ ಅಂತ ಹೇಳುತ್ತಾರೆ. ಆಗ ಗಗನ ಕೈಗೆ ಡ್ರೋನ್​ ಪ್ರತಾಪ್​ ಅವರ ಫೋಟೋ ಕೊಟ್ಟು ನನಗೂ ನಿಮ್ಮ ಇಡೀ ಕುಟುಂಬ ಜೊತೆಗೆ ಪುಟ್ಟ ಜಾಗ ಕೊಡ್ತೀರಾ ಅಂತ ಕೇಳುತ್ತಾರೆ. ಆಗ ಡ್ರೋನ್​ ಪ್ರತಾಪ್​ ಮಾತು ಕೇಳಿ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment