/newsfirstlive-kannada/media/post_attachments/wp-content/uploads/2025/04/drone-prathap8.jpg)
ವಾರದಿಂದ ವಾರಕ್ಕೆ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಕಳೆದ ವಾರ ಗಗನಾ ಕೊಟ್ಟ ಸರ್ಪ್ರೈಸ್ಗೆ ವೇದಿಕೆ ಮೇಲೆ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದ್ದರು. ಆದ್ರೆ ಇದೀಗ ಡ್ರೋನ್ ಅವರ ಅಜ್ಜಿ ಮಾತಿಗೆ ಎಲ್ಲರೂ ಶಾಕ್ ಆಗಿದ್ದಾರೆ.
ಇದನ್ನೂ ಓದಿ:ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ನಿಶ್ಚಿತಾರ್ಥ.. ಸ್ನೇಹಾಗೆ ಸಾಹೇಬ್ರ ಮೇಲಿರೋ ಪ್ರೀತಿಗೆ ಟ್ವಿಸ್ಟ್
ಹೌದು, ಈ ವಾರ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಬ್ಯಾಚುಲರ್ಸ್ಗಳ ಕುಟುಂಬಸ್ಥರನ್ನು ವೇದಿಕೆ ಮೇಲೆ ಕರೆಸಲಾಗಿದೆ. ಇದೇ ವೇದಿಕೆ ಮನಮಿಡಿಯುವ ಸಂಬಂಧಗಳ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಇದೇ ವೇದಿಕೆಗೆ ಡ್ರೋನ್ ಪ್ರತಾಪ್ ತಂದೆ ತಾಯಿ ಆಗಮಿಸಿದ್ದರು.
ดูโพสต์นี้บน Instagram
ಇದೇ ವೇಳೆ ವೇದಿಕೆ ಮೇಲೆ ಅಜ್ಜಿಗೆ ಗಗನಾ ಪ್ರಶ್ನೆಯೊಂದನ್ನು ಕೇಳಿದ್ದಾಳೆ. ಡ್ರೋನ್ ಪ್ರತಾಪ್ ಲವ್ ಮ್ಯಾರೇಜ್ ಆಗ್ಬೇಕಾ? ಅರೇಂಜ್ಡ್ ಆಗ್ಬೇಕಾ ಅಂತ ಗಗನಾ ಕೇಳಿದ್ದಾಳೆ. ಅದಕ್ಕೆ ಆ ಅಜ್ಜಿ ನಿಮ್ಮನ್ನೇ ಆಗಬೇಕು ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಶಾಕ್ ಆಗಿದ್ದಾರೆ. ಅದಕ್ಕೆ ಡ್ರೋನ್ ಪ್ರತಾಪ್ ಬಿದ್ದಿ ಬಿದ್ದು ನಕ್ಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ