ಡ್ರೋನ್​ ಪ್ರತಾಪ್​ ಸಾಲು ಸಾಲು ಸರ್​ಪ್ರೈಸ್​ಗೆ ಗಗನಾ ಮಾತ್ರವಲ್ಲ ಜಡ್ಜಸ್ ಫಿದಾ; ಕೊಟ್ಟಿದ್ದೇನು ಗೊತ್ತಾ?

author-image
Veena Gangani
Updated On
ಡ್ರೋನ್​ ಪ್ರತಾಪ್​ ಸಾಲು ಸಾಲು ಸರ್​ಪ್ರೈಸ್​ಗೆ ಗಗನಾ ಮಾತ್ರವಲ್ಲ ಜಡ್ಜಸ್ ಫಿದಾ; ಕೊಟ್ಟಿದ್ದೇನು ಗೊತ್ತಾ?
Advertisment
  • ಕ್ರೇಜಿ ಸ್ಟಾರ್ ರವಿಚಂದ್ರನ್ ಹೃದಯ ಗೆದ್ದ ಡ್ರೋನ್​ ಪ್ರತಾಪ್​
  • ಪ್ರತಾಪ್​ ಕೊಟ್ಟ ಸರ್​ಪ್ರೈಸ್​ ನೋಡಿ ರಚಿತಾ ರಾಮ್ ಖುಷ್​
  • ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಡ್ರೋನ್ ಪ್ರತಾಪ್​​ ಕಮಾಲ್

ಕನ್ನಡದ ಬಿಗ್​ಬಾಸ್​ ಸೀಸನ್ 10 ರನ್ನರ್ ಅಪ್​ ಆಗಿದ್ದ ಡ್ರೋನ್​ ಪ್ರತಾಪ್​ ಸಖತ್​ ಸುದ್ದಿಯಲ್ಲಿದ್ದಾರೆ. ಬಿಗ್​ಬಾಸ್​ ಬೆನ್ನಲ್ಲೇ ಡ್ರೋನ್ ಪ್ರತಾಪ್ ಅವರು ಭರ್ಜರಿ ಬ್ಯಾಚುಲರ್ಸ್ ಶೋಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡುತ್ತಿದ್ದಾರೆ. ಹೌದು, ಡ್ರೋನ್​ ಪ್ರತಾಪ್​ಗೆ ಜೋಡಿಯಾಗಿ ಆಯ್ಕೆಯಾಗಿದ್ದಾರೆ ಮಹಾನಟಿ ಗಗನಾ.

ಇದನ್ನೂ ಓದಿ:ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್‌​​ ನೀಡದ ಏರ್​ ಇಂಡಿಯಾ ಯಡವಟ್ಟು.. ಕುಸಿದು ಬಿದ್ದ 82ರ ವೃದ್ಧೆ! ಆಮೇಲಾಗಿದ್ದೇನು?

publive-image

ಈ ವಾರ ಬ್ಯಾಚುಲರ್ಸ್ ತಮ್ಮ ತಮ್ಮ ಪಾಟ್ನರ್​ಗೆ ಸರ್​ಪ್ರೈಸ್​ ಕೊಡಬೇಕು ಅಂತ ಜಡ್ಜಸ್​ ಹೇಳಿದ್ದರು. ಹೀಗಾಗಿ ಬ್ಯಾಚುಲರ್ಸ್ ಎಲ್ಲ ತಮ್ಮ ಪಾಟ್ನರ್​ನಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಆದ್ರೆ ಡ್ರೋನ್​ ಪ್ರತಾಪ್​ ಅವರು ಈ ರೀತಿಯ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್​ಗಳನ್ನು ಕೊಡುತ್ತಾರೆ ಅಂತ ಯಾರು ಸಹ ಊಹೆ ಮಾಡಿಕೊಂಡಿರಲಿಲ್ಲ. ಮೊದಲು ಪಾಟ್ನರ್ ಗಗನಾಳನ್ನ ಹೆಲಿಕಾಪ್ಟರ್​ನಲ್ಲಿ 1000 ಅಡಿ ಎತ್ತರಕ್ಕೆ ಕರೆದುಕೊಂಡು ಹೋಗಿದ್ದಾರೆ. ಸಾವಿರ ಅಡಿ ಎತ್ತರಕ್ಕೆ ಹೋಗಿದ್ದಲ್ಲದೇ ಅಲ್ಲಿಯೇ ಗಗನಾಗೆ ಅರಿಶಿನ-ಕುಂಕುಮ ಕೊಟ್ಟಿದ್ದಾರೆ.

publive-image

ಇದಾದ ಬಳಿಕ ವೇದಿಕೆ ಬಂದ ಡ್ರೋನ್​ ಪ್ರತಾಪ್ ​ಗಗನಾ ಕಾಲಿಗೆ ಮೆಹಂದಿ ಹಾಕಿ ಅದರ ಜೊತೆಗೆ ಗೆಜ್ಜೆಯನ್ನು ಕೂಡ ಗಿಫ್ಟ್​​ ಆಗಿ ಕೊಟ್ಟಿದ್ದಾರೆ. ಡ್ರೋನ್​ ಪ್ರತಾಪ್​ ಅವರು ಕೊಟ್ಟ ಸಾಲು ಸಾಲು ಸರ್​ಪ್ರೈಸ್​ ಕಂಡ ಗಗನಾ ಮಾತ್ರವಲ್ಲದೇ ಜಡ್ಜಸ್​ ಕೂಡ ಫಿದಾ ಆಗಿದ್ದಾರೆ. ಇದಕ್ಕ ಸಾಕ್ಷಿ ಎಂಬಂತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಆಕೆಯ ಹೆಸರಿಗೆ ತಕ್ಕ ಹಾಗೇ ಗಗನಕ್ಕೆ ಕರೆದುಕೊಂಡು ಹೋಗಿ ಅರಿಶಿನ-ಕುಂಕುಮ ಕೊಟ್ಟು ಕಾಲಿಗೆ ಗೆಜ್ಜೆ ಹಾಕಿ ಬೆಸ್ಟ್​ ಗಿಫ್ಟ್​ ಕೊಟ್ಟ ಅಂತ ಹಾಡಿ ಹೊಗಳಿದ್ದಾರೆ. ಇದಾದ ಬಳಿಕ ಬುಲ್ ಬುಲ್ ರಚಿತಾ ರಾಮ್ ಅವರು ಪ್ರತಾಪ್​ ಅವರನ್ನು ಕರೆದು ಹಗ್​ ಮಾಡಿ ತುಂಬಾ ತುಂಬಾ ಖುಷಿ ಆಯ್ತು ಎಂದು ಹಾಡಿ ಹೊಗಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment