newsfirstkannada.com

ಕಾರ್ತಿಕ್ ಮಹೇಶ್​​ಗೆ ಬಿಗ್​ ಫೈಟ್​ ಕೊಟ್ಟ ಡ್ರೋನ್​​ ಪ್ರತಾಪ್​​.. ಮನೆಯಿಂದ ಆಚೆ ಬಂದಿದ್ಯಾರು..?

Share :

Published January 28, 2024 at 11:44pm

  ಬಿಗ್​ ಮನೆಗೆ ಅಸಮರ್ಥರಾಗಿ ಎಂಟ್ರಿ ಕೊಟ್ಟಿದ್ದ ಡ್ರೋನ್​​ ಪ್ರತಾಪ್​

  ತುಂಬಾ ಸೈಲೆಂಟ್ ಆಗಿದ್ದ ಡ್ರೋನ್​ ಪ್ರತಾಪ್​ಗೆ ರನ್ನರ್​ ಪಟ್ಟ

  ಉಳಿದ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಡ್ರೋನ್​​

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10 ತನ್ನ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇದೇ ಹೊತ್ತಲ್ಲಿ ಡ್ರೋನ್​ ಪ್ರತಾಪ್​ ರನ್ನರ್​ ಅಪ್​ ಆಗಿದ್ದಾರೆ. ಡ್ರೋನ್​​ ಪ್ರತಾಪ್​ ಅವರು ಅಸಮರ್ಥರಾಗಿ ಬಿಗ್​ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್​ ಮನೆಗೆ ಎಂಟ್ರಿ ಕೊಟ್ಟ ಡ್ರೋನ್​ ಮೊದಲ ವಾರದಿಂದ ಕೆಲವು ದಿನಗಳವರೆಗೆ ತುಂಬಾ ಸೈಲೆಂಟ್ ಆಗಿದ್ದರು.

ಯಾವುದೇ ಟಾಸ್ಕ್​ಗಳನ್ನು ಆಡುತ್ತಾ ಇರಲಿಲ್ಲ. ಆದರೂ ಕೂಡ ಅಭಿಮಾನಿಗಳು ಡ್ರೋನ್​ ಪ್ರತಾಪ್​ ಅವರನ್ನು ಉಳಿಸಿಕೊಂಡಿದ್ದರು. ದಿನ ಕಳೆದಂತೆ ಸೈಲೆಂಟ್ ಆಗಿದ್ದ ಡ್ರೋನ್​ ಪ್ರತಾಪ್​ ವೈಲೆಂಟ್​ ಆಗಿ ಟಾಸ್ಕ್​ಗಳಲ್ಲಿ ಭಾಗಿಯಾಗುತ್ತಿದ್ದರು. ಹೀಗಾಗಿ ಉಳಿದ ಸ್ಪರ್ಧಿಗಳ ಮನಸ್ಸಲ್ಲಿ ಸ್ಟಾಂಗ್​ ಕಂಟೆಂಡರ್ ಆಗಿ ಉಳಿದುಕೊಂಡರು. ಆದರೆ ಆಗಾಗ ಕೆಲವೊಂದು ವಿಚಾರಕ್ಕೆ ಬಿಗ್​​ಬಾಸ್​​ನಲ್ಲಿ ಉಳಿದ ಸ್ಪರ್ಧಿಗಳ ಜೊತೆ ಗಲಾಟೆ ಮಾಡಿಕೊಂಡಿದ್ದರು.

ಇದೀಗ ಬಿಗ್​​ಬಾಸ್​ ಸೀಸನ್​​ 10ರ ರನ್ನರ್​ ಪಟ್ಟವನ್ನು ಡ್ರೋನ್​ ಪ್ರತಾಪ್​ ಪಡೆದುಕೊಂಡಿದ್ದಾರೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಖುಷ್​ ಆಗಿದ್ದಾರೆ. ಬಿಗ್​ಬಾಸ್​ ವೀಕ್ಷಕರ ಚಿತ್ತ ಯಾವ ಸ್ಪರ್ಧಿ ಟ್ರೋಫಿ ಗೆದ್ದುಕೊಂಡು ಹೋಗಲಿದ್ದಾರೆ ಎಂಬ ಕೂತುಹಲ ಹೆಚ್ಚಾಗಿತ್ತು. ಸದ್ಯ ಬಿಗ್​ಬಾಸ್​ ಸೀಸನ್​ 10 ಟ್ರೋಫಿಯನ್ನು ಕಾರ್ತಿಕ್​ ಮಹೇಶ್​ ಗೆದ್ದಿದ್ದಾರೆ. ಡ್ರೋನ್​ ಪ್ರತಾಪ್​ ಅವರು ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರ್ತಿಕ್ ಮಹೇಶ್​​ಗೆ ಬಿಗ್​ ಫೈಟ್​ ಕೊಟ್ಟ ಡ್ರೋನ್​​ ಪ್ರತಾಪ್​​.. ಮನೆಯಿಂದ ಆಚೆ ಬಂದಿದ್ಯಾರು..?

https://newsfirstlive.com/wp-content/uploads/2024/01/bigg-boss-2024-01-28T221229.781.jpg

Load More