/newsfirstlive-kannada/media/post_attachments/wp-content/uploads/2024/02/drone-pratapa.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಕೊನೆಗೂ ಮುಕ್ತಾಯಗೊಂಡಿದೆ. ಸದ್ಯ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಸ್ಪರ್ಧಿಗಳು ಸಂದರ್ಶನ ಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಿಗ್​ ಮನೆಯಿಂದ ಆಚೆ ಬಂದ ವಿನಯ್​ ಗೌಡ ನ್ಯೂಸ್​​ಫಸ್ಟ್​ನೊಂದಿಗೆ ಮಾತಾಡಿದ್ದಾರೆ.
ಬಿಗ್​ಬಾಸ್​ ಮನೆಯಲ್ಲಿದ್ದಾಗ ಡ್ರೋನ್​ ಪ್ರತಾಪ್​ ಜೊತೆ ವಿನಯ್​ ಗೌಡ ಗಲಾಟೆ ಮಾಡಿಕೊಳ್ಳುತ್ತಾ ಇದ್ದರು. ಇದೇ ವಿಚಾರದ ಬಗ್ಗೆ ಮಾತಾಡಿದ ವಿನಯ್​ ಗೌಡ, ಡ್ರೋನ್​ ಪ್ರತಾಪ್​ ಅವರು, ಡ್ಯಾನ್ಸ್​, ಮಿಮಿಕ್ರಿ ಮಾಡ್ತಾರೆ. ಌಕ್ಟಿಂಗ್ ಅಂತೂ ನಂಬರ್​ 1. ಈಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂತಹ ಕಲಾವಿದ ಅವರು ಅಂತಾ. ಇಂತಾ ಒಬ್ಬ ಕಲಾವಿದ ಹೀರೋ ಆಗಿ ಕಾಣಿಸಿಕೊಳ್ಳಬೇಕು ಅಂತಾ ನನಗೆ ತುಂಬಾ ಆಸೆ ಇದೆ ಅಂತಾ ಡ್ರೋನ್​ ಪ್ರತಾಪ್​ ಬಗ್ಗೆ ವಿನಯ್​ ಗೌಡ ಮಾತಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/01/bigg-boss-2024-01-27T175052.228.jpg)
ಸದ್ಯ ಬಿಗ್​ಬಾಸ್​ ಮನೆಯಲ್ಲಿದ್ದ ಸ್ಪರ್ಧಿಗಳು ಫುಲ್​ ಬ್ಯುಸಿಯಾಗಿದ್ದಾರೆ. ಆ ಬ್ಯುಸಿ ನಡುವೆಯೂ ತಮ್ಮ ತಮ್ಮ ಬಿಗ್​ಬಾಸ್​ ಸ್ನೇಹಿತರನ್ನು ಮೀಟ್​ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ವರ್ತೂರು ಸಂತೋಷ್​ ಅವರು ತನಿಷಾ ಅವರ ರೆಸ್ಟೋರೆಂಟ್​ಗೆ ಸರ್ಪ್ರೈಸ್ ವಿಸಿಟ್​ ಕೊಟ್ಟಿದ್ದರು. ಆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us