newsfirstkannada.com

‘ನಾನು ಮದುವೆ ಆಗೋ ಹುಡುಗಿ ಹೀಗಿರಬೇಕು’.. ಬಾಳ ಸಂಗಾತಿ ಬಗ್ಗೆ ಹೇಳಿಕೊಂಡ ಡ್ರೋನ್​ ಪ್ರತಾಪ್​

Share :

Published February 24, 2024 at 7:24pm

Update February 24, 2024 at 7:26pm

    ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್​ ಮಾತಿಗೆ ಎಲ್ಲರೂ ಫುಲ್​ ಶಾಕ್​

    ನಿರಂಜನ್ ದೇಶಪಾಂಡೆ ಪ್ರಶ್ನೆಗೆ ಖಡಕ್​ ಆಗಿ ಉತ್ತರ ಕೊಟ್ಟ ಪ್ರತಾಪ್​

    ನನ್ನ ತಂದೆ ತೋರಿಸೋ ಹುಡುಗಿಯನ್ನೇ ನಾನು ಮದುವೆ ಆಗೋದು!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದರಲ್ಲೂ ಬಿಗ್​ಬಾಸ್​ ರನ್ನರ್​ ಪಟ್ಟ ಗಿಟ್ಟಿಸಿಕೊಂಡ ಡ್ರೋನ್​ ಪ್ರತಾಪ್​ ಅವರು ಸಾಕಷ್ಟು ಬ್ಯುಸಿಯಾಗಿದ್ದಾರೆ. ಎಷ್ಟರ ಮಟ್ಟಕ್ಕೆ ಅಂದ್ರೆ ಪ್ರತಾಪ್ ತಮ್ಮ ಊರಿಗೆ ಹೋಗದಷ್ಟು ಬ್ಯುಸಿ ಆಗಿಬಿಟ್ಟಿದ್ದಾರೆ. ಈ ನಡುವೆ ಹೊಸಪೇಟೆಯಲ್ಲಿ ನಡೆಯುತ್ತಿರೋ ಕಲರ್ಸ್​ ವಾಹಿನಿಯ ಕೆಂಡಸಂಪಿಗೆ ಧಾರಾವಾಹಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಇದನ್ನು ಓದಿ: ಗಿಚ್ಚಿ ಗಿಲಿಗಿಲಿಯಿಂದ ಆಚೆ ಬಂದ್ರಾ ಬಿಗ್​ಬಾಸ್​ ಸ್ಪರ್ಧಿಗಳು? ಇಶಾನಿ, ಡ್ರೋನ್​ ಪ್ರತಾಪ್​ಗೆ ಆಗಿದ್ದೇನು?

ಇನ್ನೂ, ಇದೇ ಜಾತ್ರಾ ಮಹೋತ್ಸವದಲ್ಲಿ ತನಗೆ ಮದುವೆಯಾಗೋ ಹುಡುಗಿ ಹೇಗೆ ಇರಬೇಕು ಅಂತಾ ಬಾಯ್ಬಿಟ್ಟಿದ್ದಾರೆ. ಹೌದು, ವೇದಿಕೆ ಮೇಲೆ ನಿರೂಪಕ ನಿರಂಜನ್ ದೇಶಪಾಂಡೆ ಅವರು ಕೇಳಿದ ಪ್ರಶ್ನೆಗೆ ಖಡಕ್​ ಆಗಿ ಉತ್ತರ ನೀಡಿದ್ದಾರೆ. ನನ್ನ ತಂದೆ ತೋರಿಸೋ ಹುಡುಗಿಯನ್ನು ಬಿಟ್ಟರೆ ಎಲ್ಲ ಹೆಣ್ಣು ಮಕ್ಕಳನ್ನ ದೀದಿ ಅಂತಲೇ ಕರೆಯುತ್ತೇನೆ ಅಂತಾ ಡ್ರೋನ್​ ಪ್ರತಾಪ್​​ ಹೇಳಿದ್ದಾರೆ.

ಆಗ ನಿರಂಜನ್ ದೇಶಪಾಂಡೆ ಅವರು ನೀವು ಮದುವೆಯಾಗೋ ಹುಡುಗಿ ಹೇಗೆ ಇರಬೇಕು ಅಂತಾ ಕೇಳುತ್ತಾರೆ. ಆಗ ಡ್ರೋನ್​ ಪ್ರತಾಪ್​​, ನೋಡುವುದಕ್ಕೆ ಕಪ್ಪಾಗಿದ್ರು ಪರವಾಗಿಲ್ಲ. ನೋಡಿದ ತಕ್ಷಣ ಒಳ್ಳೆಯ ಹುಡುಗಿ ಅಂತಾ ಅನಿಸಬೇಕು. ಜಡೆಯನ್ನು ಹೆಣೆದುಕೊಂಡು ಇರಬೇಕು ಅಂದರೆ ಉದ್ದ ಕೂದಲಿನ ಹುಡುಗಿ ಬೇಕು ಅಂತಾ ಹೇಳಿದ್ದಾರೆ. ಜತೆಗೆ ನಮ್ಮ ಅಪ್ಪ ಯಾವ ಹುಡುಗಿಯನ್ನು ತೋರಿಸುತ್ತಾರೋ ಅವರನ್ನೇ ನಾನು ಮದುವೆ ಆಗುತ್ತೇನೆ ಅಂತಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನು ಮದುವೆ ಆಗೋ ಹುಡುಗಿ ಹೀಗಿರಬೇಕು’.. ಬಾಳ ಸಂಗಾತಿ ಬಗ್ಗೆ ಹೇಳಿಕೊಂಡ ಡ್ರೋನ್​ ಪ್ರತಾಪ್​

https://newsfirstlive.com/wp-content/uploads/2024/02/drone-prathap-9.jpg

Load More