/newsfirstlive-kannada/media/post_attachments/wp-content/uploads/2025/06/drone-prathap14.jpg)
​ವಾರದಿಂದ ವಾರಕ್ಕೆ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಭಿನ್ನ ವಿಭಿನ್ನವಾದ ಕಾನ್ಸೆಪ್ಟ್ ರೆಡಿ ಮಾಡಿ ವೀಕ್ಷಕರ ಮುಂದೆ ಪಪರ್ಫಾರ್ಮೆನ್ಸ್ ಕೊಡುತ್ತಾರೆ.
/newsfirstlive-kannada/media/post_attachments/wp-content/uploads/2025/06/drone-prathap16.jpg)
ಆದ್ರೆ ಈ ವಾರ ವೀಕ್ಷಕರಿಗೆ ಭರ್ಜರಿ ಮನೆರಂಜನೆ ಸಿಗಲಿದೆ. ಪ್ರತೀ ವಾರದಂತೆ ಈ ವಾರ ಬ್ಯಾಚುಲರ್ಸ್‌ಗೆ ಒಂದು ವಿಭಿನ್ನ ಟಾಸ್ಕ್ ಕೊಡಲಾಗಿದೆ. ಈ ವೀಕೆಂಡ್ ಬ್ಯಾಚುಲರ್ಸ್‌ಗೆ ʻಡ್ರೀಮ್ ಗರ್ಲ್ ರೌಂಡ್ʼ ನೀಡಲಾಗಿದೆ. ಈ ರೌಂಡ್‌ನಲ್ಲಿ ಬ್ಯಾಚುಲರ್ಸ್‌ಗಳ ಕನಸಿನ ಹುಡುಗಿಯರಂತೆ ಏಂಜಲ್ಸ್ ಕಂಗೊಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/06/drone-prathap17.jpg)
ಹೌದು, ತಮ್ಮ ತಮ್ಮ ಕನಸಿನ ಹುಡುಗಿಯರಂತೆ ಬ್ಯಾಚುಲರ್ಸ್ ಅವರ ಮೆಂಟರ್‌ಗಳನ್ನು ರೆಡಿ ಮಾಡಿ ವೇದಿಕೆಗೆ ಕರೆದುಕೊಂಡು ಬಂದಿದ್ದಾರೆ. ವಿಶೇಷ ಎಂದರೆ ವೇದಿಕೆ ಮೇಲೆ ಡ್ರೋನ್ ಪ್ರತಾಪ್ ಡ್ರೀಮ್ ಗರ್ಲ್ ಹೇಗಿರಬೇಕು ಅಂತ ಹೇಳಿದ್ದಾರೆ. ಪ್ರತಿಯೊಬ್ಬ ಹುಡುಗನಿಗೂ ತಮ್ಮ ಡ್ರೀಮ್ ಗರ್ಲ್ ಹೀಗೆ ಇರಬೇಕು ಅಂತ ಕೆಲವೊಂದು ಗುಣಗಳು ಇರುತ್ತವೆ. ಅಂತೆಯೇ ಭರ್ಜರಿ ಬ್ಯಾಚುಲರ್ಸ್ ತಮ್ಮ ಮೆಂಟರ್‌ಗಳನ್ನು ಥೇಟ್ ತಮ್ಮ ಡ್ರೀಮ್ ಗರ್ಲ್‌ನಂತೆಯೇ ಮೇಕ್ ಓವರ್ ಮಾಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/06/drone-prathap15.jpg)
View this post on Instagram
ಇದೇ ವೇಳೆ ಡ್ರೋನ್​ ಪ್ರತಾಪ್​ ನನ್ನ ಡ್ರೀಮ್ ಗರ್ಲ್ ಟ್ರೆಡಿಷನಲ್ ಆಗಿದ್ರೆ ಚೆಂದ ಎಂದಿದ್ದಾರೆ. ಜೀ ಕನ್ನಡ ಶೇರ್ ಮಾಡಿಕೊಂಡ ಪ್ರೋಮೋದಲ್ಲಿ ಡ್ರೋನ್ ಪ್ರತಾಪ್​ ಗಗನಾ ಅವರನ್ನು ಡ್ರೀಮ್ ಗರ್ಲ್​ನಂತೆ ರೆಡಿ ಮಾಡಿಕೊಂಡು ಬರೆದುಕೊಂಡು ಬಂದಿದ್ದಾರೆ. ಅಲ್ಲದೇ ತಾವು ಥೇಟ್​ ಮಧುಮಗನ ಹಾಗೇ ಪಂಚೆ ಶರ್ಟ್ ಧರಿಸಿ ವೇದಿಕೆಗೆ ಡ್ರೋನ್ ಪ್ರತಾಪ್ ಬಂದಿದ್ದಾರೆ. ಹೇ ಗಗನಾ ಅಂತ ಹೇಳುತ್ತಿದ್ದಂತೆ ʻಪುಟ್ನಂಜʼ ಸಿನಿಮಾ ಸ್ಟೈಲ್‌ನಲ್ಲಿ ಡ್ರೋನ್​ ಪ್ರತಾಪ್​ ಡ್ರೀಮ್ ಗರ್ಲ್‌ನಂತೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ಬಳಿಕ ಪುಟ್ಟಮಲ್ಲಿ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us