newsfirstkannada.com

×

RCB vs PBKS; ಪಂಜಾಬ್​ ಸೋಲಿಗೆ ವಿರಾಟ್​ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್​ -Video

Share :

Published March 26, 2024 at 3:38pm

    ವಿರಾಟ್​ ಕೊಹ್ಲಿ ಬಗ್ಗೆ ಪಂಜಾಬ್ ಕ್ಯಾಪ್ಟನ್​ ಶಿಖರ್ ಧವನ್ ಹೇಳಿದ್ದೇನು?

    ಫಸ್ಟ್​ ಬೌಲ್​, ಫಸ್ಟ್​ ಬೌಂಡರಿ ಬಾರಿಸಿದ್ದ ಆರ್​ಸಿಬಿಯ ವಿರಾಟ್ ಕೊಹ್ಲಿ

    ಪಂಜಾಬ್ ಸೋಲಿಗೆ ಕಾರಣವಾಯಿತಾ ವಿದೇಶಿ ಪ್ಲೇಯರ್ ಬಿಟ್ಟ ಕ್ಯಾಚ್?

ತವರಿನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ರಾಯಲ್ ಚಾಲೆಂಜರ್ಸ್​​ ಬೆಂಗಳೂರು​ ಗೆಲುವು ಪಡೆದಿದೆ. ಮೊದಲ ಪಂದ್ಯ ಸೋತಿದ್ದ ಆರ್​ಸಿಬಿ, ಬೆಂಗಳೂರಲ್ಲಿ ರೋಚಕವಾಗಿ ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ಖಾತೆ ತೆರೆದಿದೆ. ಈ ಗೆಲುವಿಗೆ ಮುಖ್ಯ ಕಾರಣ ಕಿಂಗ್​ ಕೊಹ್ಲಿ. ಆದರೆ ಪಂದ್ಯದ ಆರಂಭದಲ್ಲೇ ವಿರಾಟ್​ ಕೊಹ್ಲಿಯ ಕ್ಯಾಚ್ ಮಿಸ್ ಮಾಡಿದ್ದಕ್ಕೆ ನಾವು ಭಾರೀ ದಂಡ ತೆರಬೇಕಾಯಿತು ಎಂದು ಪಂಜಾಬ್​ ಕ್ಯಾಪ್ಟನ್​ ಶಿಖರ್ ಧವನ್ ಹೇಳಿದ್ದಾರೆ.

ಚಿನ್ನಸ್ವಾಮಿ ಅಂಗಳದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಸೋತ ಬಳಿಕ ಕ್ಯಾಪ್ಟನ್​ ಶಿಖರ್​ ಧವನ್ ಮಿಸ್ ಆಗಿದ್ದ ಕ್ಯಾಚ್​ ಬಗ್ಗೆ ಮಾತನಾಡಿದ್ದಾರೆ. ಪಂಜಾಬ್ ಫಸ್ಟ್ ಬ್ಯಾಟಿಂಗ್ ಮುಗಿದ ಮೇಲೆ ಆರ್​ಸಿಬಿ ಪರ ಬ್ಯಾಟಿಂಗ್ ಮಾಡಲು ಓಪನರ್ ಆಗಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಕ್ರೀಸ್​ಗೆ ಆಗಮಿಸಿದರು. ಈ ವೇಳೆ ಪಂಜಾಬ್​ನ ಆಲ್​ ರೌಂಡರ್​ ಸ್ಯಾಮ್ ಕರನ್ ಮೊದಲ ಓವರ್​ನ ಫಸ್ಟ್​ ಬೌಲ್ ವಿರಾಟ್​ ಕೊಹ್ಲಿ ಬ್ಯಾಟ್​ಗೆ ತಾಗಿ ಸ್ಲಿಪ್​ನಲ್ಲಿ ನಿಂತಿದ್ದ ಜಾನ್​ ಬೈರ್ಸ್ಟೋವ್ ಕಡೆ ಹೋಯಿತು. ಆದರೆ ಈ ವೇಳೆ ಬೈರ್ಸ್ಟೋವ್ ಕ್ಯಾಚ್ ಮಿಸ್ ಮಾಡಿದರು. ಇದೇ ಪಂಜಾಬ್​ ಟೀಮ್​ಗೆ ಭಾರೀ ಹೊಡೆತ ಕೊಟ್ಟಿತು ಎಂದು ಗಬ್ಬರ್ ಧವನ್ ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಕ್ರಿಕೆಟ್​ನಲ್ಲಿ ತುಂಬಾ ಪಳಗಿದ್ದಾರೆ. ಹೀಗಾಗಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಿಸಿಕೊಂಡು ಮ್ಯಾಚ್ ಗೆಲ್ಲಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರಂಭದಲ್ಲೇ ಕ್ರೀಸ್​ಗೆ ಬಂದ ಕೊಹ್ಲಿ ಒಟ್ಟು 49 ಎಸೆತಗಳಲ್ಲಿ 77 ರನ್​ ಗಳಿಸುವ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಶಿಖರ್ ಧವನ್ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB vs PBKS; ಪಂಜಾಬ್​ ಸೋಲಿಗೆ ವಿರಾಟ್​ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್​ -Video

https://newsfirstlive.com/wp-content/uploads/2024/03/KOHLI-6.jpg

Load More