/newsfirstlive-kannada/media/post_attachments/wp-content/uploads/2025/07/Purna-Ram-Sharma.jpg)
ಮೂರು ವರ್ಷಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಡ್ರಗ್ಸ್ ಸಪ್ಲೈಯರ್ ಪೂರ್ಣ ರಾಮ್ ಶರ್ಮಾ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.
ರಾಜಸ್ಥಾನದ ಹನುಮಾನ್‌ಗಢದಲ್ಲಿ ಡ್ರಗ್ಸ್ ಸಪ್ಲೈಯರ್ ಆರೋಪಿ ಪೂರ್ಣ ರಾಮ್, ಸ್ವಾಮೀಜಿ ವೇಷ ಧರಿಸಿ ಮೂರು ವರ್ಷ ಯಾವ ಪೊಲೀಸ್ ಕೈಗೂ ಸಿಗದೆ ಎಸ್ಕೇಪ್ ಆಗಿದ್ದ. ಮಾರ್ಚ್ 2023 ರಲ್ಲಿ ಪೊಲೀಸರು ಹೆರಾಯಿನ್ ಜಾಲವನ್ನ ಭೇದಿಸಿದಾಗ ಮೂವರು ವ್ಯಕ್ತಿಗಳು 46 ಲಕ್ಷ ರೂಪಾಯಿ ಮೌಲ್ಯದ 115 ಗ್ರಾಂ ಹೆರಾಯಿನ್‌ನೊಂದಿಗೆ ಸಿಕ್ಕಿತ್ತು.
ಇದನ್ನೂ ಓದಿ: ಡಿಕೆಶಿ ಹೊರಗಿಟ್ಟು CM ಸಭೆ; ಸಿದ್ದು ಎದುರಲ್ಲೇ ರಾಜಣ್ಣ- ಗುಬ್ಬಿ ಶಾಸಕ ಶ್ರೀನಿವಾಸ್ ಜಟಾಪಟಿ..!
ಈ ಕೇಸ್ನಲ್ಲಿ ಪೂರ್ಣ ರಾಮ್ ಹೆಸರು ಕೇಳಿ ಬಂದಿತ್ತು. ಆಗಿನಿಂದ ಮಂತ್ರವಾದಿ ವೇಷದಲ್ಲಿ ತಲೆ ಮರೆಸಿಕೊಂಡಿದ್ದ ಪೂರ್ಣ ರಾಮ್ನನ್ನ ಹನುಮಾನ್‌ಗಢ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ