/newsfirstlive-kannada/media/post_attachments/wp-content/uploads/2024/08/Duniya-Vijay.jpg)
ಸ್ಯಾಂಡಲ್​ವುಡ್​​ ನಟ ದುನಿಯಾ ವಿಜಯ್​ ಅವರ ನಟನೆಯ ಭೀಮಾ ರಿಲೀಸ್​ ಆಗಿದೆ. ಇಂದು 400ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆ ಟಾಕ್​ ಇದೆ. ಇಷ್ಟೇ ಅಲ್ಲ ಕೆಆರ್‌ಜಿ ಸಂಸ್ಥೆ ಹೊರ ದೇಶದಲ್ಲಿ ಕನ್ನಡದ ಭೀಮ ಚಿತ್ರವನ್ನ ರಿಲೀಸ್ ಮಾಡಲು ಹೊರಟಿದೆ. ಈಗ ಭೀಮಾ ಬಗ್ಗೆ ಒಳ್ಳೆ ಟಾಕ್​​ ಬರುತ್ತಿರೋ ಹೊತ್ತಲ್ಲೇ ದುನಿಯಾ ವಿಜಯ್​​ ಸ್ಫೋಟಕ ವಿಚಾರವೊಂದು ಬಹಿರಂಗಪಡಿಸಿದ್ದಾರೆ.
ನಾವು ಸಿನಿಮಾದಲ್ಲಿ ಯುವಕರು ಡ್ರಗ್ಸ್​ಗೆ ಹೇಗೆ ಅಡಿಕ್ಟ್​ ಆಗಿದ್ದಾರೆ ಅನ್ನೋ ಬಗ್ಗೆ ಸಂದೇಶ ನೀಡಿದ್ದೇನೆ. ನಾನು ನಿಜ ಜೀವನದಲ್ಲಿ ಡ್ರಗ್ಸ್​​ ತೆಗೆದುಕೊಳ್ಳುವವರನ್ನು ನೋಡಿದ್ದೇನೆ. ಹುಡುಗರು ಒಬ್ಬೊಬ್ಬರು ಇಷ್ಟುದ್ದ ಡ್ರ್ಯಾಗರ್​ ಇಟ್ಟುಕೊಂಡು ಇರ್ತಾರೆ. ನೀವು ನೋಡುತ್ತಿದ್ದಂತೆ ಡ್ರ್ಯಾಗರ್​ ಓಪನ್​ ಮಾಡ್ತಾರೆ. ನಾವು ಯಾರು ಅಂತಾನೆ ಗೊತ್ತಿರಲ್ಲ. ನಾನು ಯಾರೋ ಪೊಲೀಸ್​ ಇರಬಹುದು, ದುಷ್ಮನ್​​ ಇರಬಹದು ಎಂದು ಚುಚ್ಚೇ ಬಿಡ್ತಾರೆ ಎಂದರು.
ಹಿಂಗೇ ನಾನು ಒಬ್ಬರನ್ನ ಮೀಟ್​ ಮಾಡೋಕೆ ಹೋದಾಗ ಡ್ರ್ಯಾಗರ್​ ಓಪನ್​ ಮಾಡೇಬಿಟ್ಟ. ಚೂರು ಲೇಟ್​ ಮಾಡಿದ್ರೂ ಚುಚ್ಚಿ ಕೊಂದೇ ಬಿಡ್ತಿದ್ದ. ಅವಾಗ ಏಯ್​ ಏಯ್​ ಎಂದು ಸಮಾಧಾನ ಮಾಡಿ, ಅವನನ್ನು ಅಲ್ಲಿಂದ ಕಳಿಸಿ. ಅದನ್ನು ಪತ್ರಕರ್ತರನ್ನು ಕರ್ಕೊಂಡು ಹೋಗಿ ಸಾಕ್ಷಿಗಾಗಿ ಶೂಟ್​ ಕೂಡ ಮಾಡಿದ್ದೆ ಎಂದರು.
ಇದನ್ನೂ ಓದಿ:ಇಂದು ರಾಜ್ಯಾದ್ಯಂತ ‘ಭೀಮ’ ಸಂಭ್ರಮ; ದುನಿಯಾ ವಿಜಯ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ