Advertisment

ಕೈಯಲ್ಲಿ ಎಣ್ಣೆ ಬಾಟ್ಲು, ಅರೆಬೆತ್ತಲೆ ನೃತ್ಯ.. ದೇವಭೂಮಿಯಲ್ಲಿ ಅಸಹ್ಯ ನೋಡಿ ಬೆಚ್ಚಿ ಬಿದ್ದ ಜನ; ಆಗಿದ್ದೇನು?

author-image
Gopal Kulkarni
Updated On
ಕೈಯಲ್ಲಿ ಎಣ್ಣೆ ಬಾಟ್ಲು, ಅರೆಬೆತ್ತಲೆ ನೃತ್ಯ.. ದೇವಭೂಮಿಯಲ್ಲಿ ಅಸಹ್ಯ ನೋಡಿ ಬೆಚ್ಚಿ ಬಿದ್ದ ಜನ; ಆಗಿದ್ದೇನು?
Advertisment
  • ದೇವಭೂಮಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅರೆಬೆತ್ತಲೆಯ ಕುಣಿತ
  • ಪ್ರವಾಸಕ್ಕೆಂದು ಬರುವ ವಿದೇಶಿಗರ ಖುಲ್ಲಂ ಖುಲ್ಲಾ ಕುಣಿತ, ನಶೆ
  • ಅರೆಬೆತ್ತಲೆ ಕುಣಿತಕ್ಕಿಲ್ಲ ಕಡಿವಾಣ ಹಾಕುವವರ ಜಾಣ ಕುರುಡು?

ಶಿಮ್ಲಾ: ಹಿಮಾಚಲ ಪ್ರದೇಶ ಅಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಬರೋದು ದೇವಭೂಮಿ ಅನ್ನೋ ಅನ್ವರ್ಥಕ ನಾಮ. ಮಹಾಭಾರತ ರಾಮಯಣದ ಕಾಲದೊಂದಿಗೂ ತನ್ನನ್ನು ತಾನು ಗುರುತಿಸಿಕೊಂಡು, ತನ್ನದೇ ವಿಶಿಷ್ಟತೆಯಿಂದ ಈ ದೇಶದಲ್ಲಿರುವ ರಾಜ್ಯ ಹಿಮಾಚಲಪ್ರದೇಶ, ಹಿಂಡಂಬಿಯ ತವರೂರು ಎಂದೇ ಈ ನಾಡನ್ನು ನಾವು ಗುರುತಿಸುತ್ತೇವೆ. ಆದ್ರೆ ಈಗ ಹಿಮಾಚಲ ಪ್ರದೇಶದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಎಗ್ಗಿಲ್ಲದೇ ನಡು ಬೀದಿಯಲ್ಲಿಯೇ ಬೆತ್ತಲೆ ಕುಣಿಯುತ್ತಿದೆ. ಹಿಡಂಬಿಯ ಊರಲ್ಲಿ ಹೆಂಡ ಸಾರಾಯಿ, ಸಿಗರೇಟ್ ಖುಲ್ಲಂ ಖುಲ್ಲಾ ಡಾನ್ಸ್ ಅನ್ನೋದು ಬೀದಿ ಬೀದಿಯಲ್ಲಿ ಕಾಣುತ್ತಿದೆ. ಅಸಲಿಗೆ ಸದ್ಯ ದೇವಭೂಮಿಯಲ್ಲಿ ಆಗುತ್ತಿರೋದೇನು?

Advertisment

ಇದನ್ನೂ ಓದಿ: ಅಮೆರಿಕದಲ್ಲಿ ಒಳ್ಳೆ ಜಾಬ್, ಡಿಸೆಂಬರ್​ನಲ್ಲಿ ಮದುವೆ.. ಆದ್ರೆ ದುರಂತ ಅಂತ್ಯಕಂಡ ಯುವಕ; ಕಾರಣವೇನು?

ದೇವಭೂಮಿಯಲ್ಲೀಗ ಡ್ರಗ್ಸ್​, ಹೆಂಡದ ಹುಚ್ಚು ‘ಕುಣಿತ’ 


">July 27, 2024

‘ಹಿಮಾಚಲ ಪ್ರದೇಶ ಸಾಂಸ್ಕೃತಿಕವಾಗಿ ಎಷ್ಟು ಶ್ರೀಮಂತಿಕೆಯನ್ನು ಪಡೆದಿದೆಯೋ ಅಷ್ಟೇ ಭೌಗೋಳಿಕವಾಗಿಯೂ ಕೂಡ ಪಡೆದಿದೆ. ಅಲ್ಲಿನ ಹಿಮಚ್ಛಾದಿತ ಬೆಟ್ಟಗುಡ್ಡಗಳು ಕಡಿದಾದ ದಾರಿಗಳು. ಪ್ರಖ್ಯಾತ ದೇವಸ್ಥಾನಗಳು ಪ್ರವಾಸಿಗನ್ನು ಕೈ ಬೀಸಿ ಕರೆಯುತ್ತವೆ. ದೇಶದ ಪ್ರವಾಸಿ ತಾಣಗಳ ಟಾಪ್ 10 ಪಟ್ಟಿಯಲ್ಲಿ ಹಿಮಾಚಲ ಪ್ರದೇಶವೂ ಒಂದು. ಹೀಗಾಗಿ ಇಲ್ಲಿ ಪ್ರವಾಸಿಗರು ಹರಿದು ಬರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಒಂದು ರೀತಿಯ ಅನುಕೂಲವೇ, ಆದ್ರೆ ಇಲ್ಲಿಗೆ ಬರೋ ವಿದೇಶಿ ಪ್ರವಾಸಿಗರು ಸಭ್ಯತೆಯ ಸೀಮೆಯನ್ನು ದಾಟಿ ಮೋಜು ಮಸ್ತಿಗೆ ಬೀಳುತ್ತಾರೆ. ಹಾಡಹಗಲೇ ನಡುಬೀದಿಯಲ್ಲಿಯೇ ಗುಂಡು ಹಾಕಿ, ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಬೇಕಾ ಬಿಟ್ಟಿ ಕುಣಿದಾಡುತ್ತಾ ಕೊಟ್ಟ ಸ್ವಾತಂತ್ರ್ಯವನ್ನು ಸ್ವೇಚ್ಛೆಯಂತೆ ಬಳಸುತ್ತಿದ್ದಾರೆ. ಅರೆಬೆತ್ತಲಾಗಿ ಕುಣಿಯುವುದು ಡ್ರಗ್ಸ್ ಪಾರ್ಟಿಗಳನ್ನು ಮಾಡೋದು, ಇವೆಲ್ಲವೂ ಇಲ್ಲಿ ಸಾಮಾನ್ಯ ಎನ್ನುವಂತಾಗಿ ಹೋಗಿವೆ ಇತ್ತೀಚಿನ ದಿನಗಳಲ್ಲಿ. ಇವೆಲ್ಲವನ್ನು ನೋಡಿ ಸಹಿಸಿಕೊಂಡು ಬಂದಿರುವ ಸ್ಥಳೀಯರು ಈಗ ರೊಚ್ಚಿಗೆದ್ದಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು, ಕೂಡಲೇ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಅಂತ ಆಗ್ರಹಿಸುತ್ತಿದ್ದಾರೆ.

Advertisment


">July 27, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment