ರಸ್ತೆಯಲ್ಲಿ ತಿರುಗಾಡ್ತಿದ್ದ ಜನರ ಮೇಲೆ ಹಲ್ಲೆ ಮಾಡಿದ ವಿದೇಶಿಗ
ಬೈಕ್ನಲ್ಲಿ ಹೋಗುತ್ತಿದ್ದವನ ಮೇಲೆ ಮುಗಿಬಿದ್ದು ಕಚ್ಚಿಯೇ ಬಿಟ್ಟರು
ವಿದೇಶಿಗರ ವರ್ತನೆಯಿಂದ ಭಯ ಬಿದ್ದ ಜನ, ಪೊಲೀಸರಿಗೆ ಕರೆ
ಚೆನ್ನೈ: ವಿದೇಶಿ ಪ್ರಜೆಯೊಬ್ಬ ಮದ್ಯಪಾನ ಮಾಡಿ ರಸ್ತೆಯಲ್ಲಿ ಹುಚ್ಚಾಟ ಮಾಡಿದ್ದಲ್ಲದೇ ಸಿಕ್ಕ, ಸಿಕ್ಕ ಜನರಿಗೆ ಹೊಡೆದು, ಬಾಯಿಯಿಂದ ಕಚ್ಚಿರುವ ಘಟನೆ ನಗರದ ರಾಯಪೆಟ್ಟಾ ಜಂಕ್ಷನ್ನಲ್ಲಿ ನಡೆದಿದೆ.
ವಿದೇಶದ ಇಬ್ಬರು ವ್ಯಕ್ತಿಗಳು ಬಾರ್ವೊಂದರಲ್ಲಿ ಮದ್ಯಪಾನ ಮಾಡಿ ರಾಯಪೆಟ್ಟಾ ಜಂಕ್ಷನ್ ರಸ್ತೆಗೆ ಬಂದಿದ್ದಾರೆ. ಅಲ್ಲಿ ಹುಚ್ಚಾಟ ಮಾಡಲು ಪ್ರಾರಂಭಿಸಿದ ಕಿಡಿಗೇಡಿಗಳು ಮೈಮೇಲಿನ ಟೀ ಶರ್ಟ್ ಅನ್ನು ಹರಿದುಕೊಂಡು ಕಿರುಚಾಡಿದ್ದಾರೆ. ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ಜನರಿಗೆ ಹೇಗೆಂದರೆ ಹಾಗೇ ಹೊಡೆದು ಕಿರುಕುಳ ನೀಡಿದ್ದಾರೆ. ಹೊಡೆದಿದ್ದಲ್ಲದೇ ಜನರಿಗೆ ಬಾಯಿಂದ ಕಚ್ಚಿ ವಿಚಿತ್ರವಾಗಿ ವರ್ತನೆ ಮಾಡಿದ್ದಾರೆ. ಇವರ ವರ್ತನೆ ನೋಡಲಾಗದೇ ತಕ್ಷಣ ಜನರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
This happened in Chennai..
A foreign National reportedly in an inebriated state, running around trying to bite commuters.. pic.twitter.com/wT2Y5B0HIy— Pramod Madhav (@PramodMadhav6) April 2, 2024
ತಕ್ಷಣ ಸ್ಥಳಕ್ಕೆ ಬಂದ ಮೂವರು ಪೊಲೀಸರು ಆರೋಪಿಗಳನ್ನು ಹಿಡಿಸು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ಆದರೂ ಪೊಲೀಸರಿಂದ ಬಿಡಿಸಿಕೊಂಡು ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಚ್ಚಿದ್ದಾನೆ. ಮತ್ತೆ ಪೊಲೀಸರು ಹೋಗಿ ವಿದೇಶಿ ಪ್ರಜೆಯನ್ನು ಹಿಡಿದುಕೊಂಡು ಬಂದು ನಿಲ್ಲಿಸಿದ್ದಾರೆ. ಸದ್ಯ ಹೀಗೆ ವರ್ತನೆ ಮಾಡಿರುವ ವಿದೇಶಿ ಪ್ರಜೆಗಳ ಹೆಸರು ತಿಳಿದು ಬಂದಿಲ್ಲ, ಇವರು ಯಾವ ದೇಶದಿಂದ ಭಾರತಕ್ಕೆ ಬಂದಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಇದಕ್ಕಾಗಿ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದು ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ