ಶೃಂಗೇರಿಯಲ್ಲಿ ಒಬ್ಬ ಕುಡುಕ.. ಫೋನ್ ಮಾಡಿ 40 KM ದೂರದಿಂದ ಆ್ಯಂಬುಲೆನ್ಸ್ ಕರೆಸಿದ.. ಕಾರಣ ಏನು..?

author-image
Veena Gangani
Updated On
ಶೃಂಗೇರಿಯಲ್ಲಿ ಒಬ್ಬ ಕುಡುಕ.. ಫೋನ್ ಮಾಡಿ 40 KM ದೂರದಿಂದ ಆ್ಯಂಬುಲೆನ್ಸ್ ಕರೆಸಿದ.. ಕಾರಣ ಏನು..?
Advertisment
  • ಆಕಾಶದ ಕೆಳಗೆ ಭೂಮಿ ಮೇಲೆ ಇದ್ದೀನಿ ಎಂದು ಕರೆ
  • ಸ್ಥಳಕ್ಕೆ ಆ್ಯಂಬುಲೆನ್ಸ್ ಬರ್ತಿದ್ದಂತೆಯೇ ಕುಡುಕ ಏನು ಮಾಡಿದ?
  • ನಿಮ್ಗೆ ತಾಕತ್ತಿದ್ರೆ ನನ್ನ ಹಿಡೀರಿ ಎಂದು ಪೊಲೀಸರಿಗೇ ಸವಾಲ್

ಚಿಕ್ಕಮಗಳೂರು: ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ ಎಂದು ಕುಡುಕನೊಬ್ಬ ಆ್ಯಂಬುಲೆನ್ಸ್​ಗೆ ಕಾಲ್ ಮಾಡಿ ಅವರ ಸಮಯವನ್ನು ಹಾಳು ಮಾಡಿರೋ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.

ಇದನ್ನೂ ಓದಿ:65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!

publive-image

40 KM ದೂರದಿಂದ ಬಂದ ಆ್ಯಂಬುಲೆನ್ಸ್

ಹೌದು, ಕುಡಿದ ಮತ್ತಿನಲ್ಲಿ ಕುಡುಕನೊಬ್ಬ ಶೃಂಗೇರಿಯಲ್ಲಿ ಗಲಾಟೆಯಾಗಿ ತುಂಬಾ ಪೆಟ್ಟಾಗಿದೆ, ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ ಎಂದು ಆಂಬ್ಯುಲೆನ್ಸ್​ಗೆ ಕರೆ ಮಾಡಿ ತಲೆ ತಿಂದಿದ್ದಾನೆ. ಇನ್ನೂ ಫೋನ್​ ಬರುತ್ತಿದ್ದಂತೆ ಬಾಳೆಹೊನ್ನೂರಿನಿಂದ 40 ಕಿ.ಮೀ.‌ದೂರದ ಶೃಂಗೇರಿಗೆ 108 ಆಂಬ್ಯುಲೆನ್ಸ್ ಬಂದಿದೆ. ಆಗ ಆಂಬ್ಯುಲೆನ್ಸ್ ಬರ್ತಿದ್ದಂತೆ ನಂಗೆ ಬೇಡ ಎಂದ ಕೂಗಾಡಿದ್ದಾನೆ. ಮತ್ತೆ ನಿಮಗೆ ತಾಕತ್ತಿದ್ರೆ ನನ್ನ ಹಿಡೀರಿ ನೋಡೋಣ ಎಂದು ಪೊಲೀಸರಿಗೆ ಕುಡುಕ ಚಾಲೆಂಜ್​ ಮಾಡಿದ್ದಾನೆ.

ಕೆಲ ಹೊತ್ತು ಕುಡುಕನನ್ನ ಹಿಡಿಯಲು ಪೊಲೀಸರ ಹರಸಾಹಸ ಪಡುವಂತ ಸ್ಥಿತಿ ನಿರ್ಮಾಣಗೊಂಡಿತ್ತು. ಇದಾದ ಬಳಿಕ ಶೃಂಗೇರಿ ಪಟ್ಟಣದ ವೈನ್ ಶಾಪ್​ನಲ್ಲಿ ಅಡಗಿ ಕುಳಿತುಕೊಂಡಿದ್ದ ಆತನನ್ನು ಸ್ಥಳೀಯರು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಆಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಬಳಿಕ ಸರ್ ತಪ್ಪಾಯ್ತು ಬಿಡಿ ಸರ್ ಎಂದು ಕೈಮುಗಿದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment