ಮಧ್ಯರಾತ್ರಿ ಕುಡುಕನ ಅವಾಂತರ.. ಬೆಂಚ್​ ಸೆರೆಗೆ ಕುತ್ತಿಗೆ ಸಿಲುಕಿಕೊಂಡು ಒದ್ದಾಟ.. ಆತನನ್ನು ಕಾಪಾಡಿದ್ದು ಯಾರು ಗೊತ್ತಾ?

author-image
AS Harshith
Updated On
ಮಧ್ಯರಾತ್ರಿ ಕುಡುಕನ ಅವಾಂತರ.. ಬೆಂಚ್​ ಸೆರೆಗೆ ಕುತ್ತಿಗೆ ಸಿಲುಕಿಕೊಂಡು ಒದ್ದಾಟ.. ಆತನನ್ನು ಕಾಪಾಡಿದ್ದು ಯಾರು ಗೊತ್ತಾ?
Advertisment
  • ಕುಡಿದ ಅಮಲಿನಲ್ಲಿ ಪಾರ್ಕ್​ ಬೆಂಚ್​ ಮೇಲೆ ಮಲಗಿದ್ದ ವ್ಯಕ್ತಿ
  • ನಶೆಯಲ್ಲಿ ಮಲಗಿದ್ದ ವೇಳೆ ಬೆಂಚ್ ಸೆರೆಯಲ್ಲಿ ಕುತ್ತಿಗೆ ಸಿಲುಕಿ ಒದ್ದಾಟ
  • ಮಧ್ಯರಾತ್ರಿ ಪಾರ್ಕ್​ನಿಂದ ಕೇಳಿಬಂದ ಶಬ್ಧ ಕೇಳಿ ಅಚ್ಚರಿಗೊಂಡ ಸ್ತಳೀಯರು

ಕಾನ್ಪುರದ ರಾಮಲೀಲಾ ಪಾರ್ಕ್​ನಲ್ಲಿ ನಡೆದ ಘಟನೆ ಇದಾಗಿದೆ. ಕುಡುಕನೋರ್ವ ಅಮಲಿನಲ್ಲಿ ಪಾರ್ಕ್​ನಲ್ಲಿದ್ದ ಬೆಂಚ್​ನಲ್ಲಿ ಮಲಗುತ್ತಾನೆ. ಆದರೆ ಈ ವೇಳೆ ಆತನ ಕುತ್ತಿಗೆ ಸಿಕ್ಕಿ ಹಾಕಿಕೊಂಡಿದೆ. ಕೊನೆಗೆ ಆತನಿಗೆ ನೋವು ತಾಳಲಾರದೆ ಕೂಗಲು ಪ್ರಾರಂಭಿಸಿದ್ದಾನೆ.

ಮಧ್ಯರಾತ್ರಿ ಆತನ ಕೂಗು ಕೇಳಿ ಸ್ಥಳೀಯರು ಪೊಲೀಸರ ಸಹಾಯದಿಂದ ಆತನ ಬಳಿ ಬಂದಿದ್ದಾರೆ. ಈ ವೇಳೆ ವ್ಯಕ್ತಿ ಕುಡಿದು ಅಮಲಿನಲ್ಲಿ ಬೆಂಚ್​ ಮೇಲೆ ಮಲಗಿದ್ದನು. ಈ ವೇಳೆ ನಶೆಯಲ್ಲಿ ಬೆಂಚ್​ನಿಂದ ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಆತನ ಕುತ್ತಿಗೆ ಸಿಕ್ಕಿಹಾಕಿಕೊಂಡಿದೆ.


">April 8, 2024

ಇದನ್ನೂ ಓದಿ: 49 ಲಕ್ಷದ ಸೀರೆ, ಲಕ್ಷಾಂತರ ರೂಪಾಯಿ ಹಣ, ಲೀಟರ್​ಗಟ್ಟಲೆ ಮದ್ಯ.. ಚುನಾವಣೆ ಸಮಯದಲ್ಲಿ ಎಲ್ಲೆಲ್ಲಿ ಏನೇನು ಸಿಕ್ಕಿದೆ ಗೊತ್ತಾ?

ಪೊಲೀಸರ ಸಹಾಯದಿಂದ ಕುಡುಕನನ್ನು ರಕ್ಷಿಸಿದ್ದಾರೆ. ನಿಧಾನವಾಗಿ ಬೆಂಚ್​ನ ಸೆರೆಯಲ್ಲಿ ಸಿಲುಕಿಕೊಂಡ ಕುಡುಕನನ್ನು ನಿಧಾನವಾಗಿ ಮೇಲೆತ್ತುವ ಮೂಲಕ ಬಚಾವ್​ ಮಾಡಲಾಗಿದೆ. ಇನ್ನು ಪೊಲೀಸರ ರಕ್ಷಣಾ ಕಾರ್ಯಚರಣೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment