/newsfirstlive-kannada/media/post_attachments/wp-content/uploads/2024/05/Ganesh.jpg)
ಕುಡಿದ ಮತ್ತಿನಲ್ಲಿ ಸ್ಯಾಂಡಲ್​ವುಡ್​ ನಿರ್ಮಾಪಕರು ಬಡಿದಾಡಿಕೊಂಡ ಪ್ರಕರಣವೊಂದು ಗೋವಾದಲ್ಲಿ ನಡೆದಿದೆ. ಫೋರ್ಕ್ ಸ್ಫೂನ್​ನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ನಿರ್ಮಾಪಕ ಎ.ಗಣೇಶ್ ಮತ್ತು ರಥಾವರ ಮಂಜುನಾಥ್ ಮೇಲೆ ಸತೀಶ್ ಆರ್ಯ ಎಂಬವರಿಂದ ಹಲ್ಲೆ ನಡೆದಿದೆ. ಗಲಾಟೆ ವೇಳೆ ಗಣೇಶ್​ ಮೂಗು ಹರಿದಿದ್ದು, 15 ಸ್ಟಿಚ್ ಹಾಕಲಾಗಿದೆ. ಅತ್ತ ಕಣ್ಣಿನ ಮೇಲೂ ಚುಚ್ಚಿದ್ದಾರೆ ಎಂದು ಗಣೇಶ್​ ಆರೋಪಿಸಿದ್ದಾರೆ. ಅತ್ತ ನಿರ್ಮಾಪಕ ಸತೀಶ್ ಆರ್ಯರವರು ರಥಾವರ ಮಂಜುನಾಥ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಹಣೆಗೂ, ತಲೆಗೂ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ನಿರ್ಮಾಪಕ ಎ.ಗಣೇಶ್ ಏನಂದ್ರು?
ಹಲ್ಲೆಗೊಳಗಾದ ನಿರ್ಮಾಪಕ ಎ.ಗಣೇಶ್ ಘಟನೆಯ ಸಂಕ್ಷಿಪ್ತ ಮಾಹಿತಿ ಬಿಚ್ಚಿಟ್ಟಿದ್ದಾರೆ. ‘‘ಸಿನಿ 90 ಕಾರ್ಯಕ್ರಮ ರೂಪುರೇಷೆ ನಿಮಿತ್ತ ಫಿಲ್ಮ್ ಚೇಂಬರ್ ಸದಸ್ಯರು ಗೋವಾಗೆ ಟ್ರಿಪ್ ಹೋಗಿದ್ದರು. ಸುಮಾರು 54 ಮಂದಿ ಗೋವಾಗೆ ತೆರಳಿದ್ದರು. ಕುಡಿದ ಮತ್ತಿನಲ್ಲಿ ಸತೀಶ್ ಗಲಾಟೆ ನಡೆಸಿದ್ದಾರೆ. ಈ ವೇಳೆ ನಿರ್ಮಾಪಕ ಎ.ಗಣೇಶ್ ಮತ್ತು ರಥಾವರ ಮಂಜುನಾಥ್ ಮೇಲೆ ಹಲ್ಲೆ ನಡೆದಿದೆ. ಪಾರ್ಟಿ ಮಧ್ಯೆ ಏಕಾಏಕಿ ಪ್ಲೇಟ್ ಮತ್ತು ಫೋರ್ಕ್ ಸ್ಪೂನ್​ನಿಂದ ನಿರ್ಮಾಪಕ ಸತೀಶ್ ಆರ್ಯ ಗಾಯ ಮಾಡಿದ್ದಾರೆ’’ ಎಂದು ಹೇಳಿದ್ದಾರೆ.
ನಾಳೆ ಫಿಲ್ಮ್ ಚೇಂಬರ್​ನಲ್ಲಿ ಮೀಟಿಂಗ್ ಕರೆಯಲಾಗಿದೆ. ಇನ್ನು ಘಟನೆ ಸಂಬಂಧ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಿದ್ದೇನೆ ಎಂದು ನಿರ್ಮಾಪಕ ಎ ಗಣೇಶ್​ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us