/newsfirstlive-kannada/media/post_attachments/wp-content/uploads/2024/07/Teacher.jpg)
ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಶಿಕ್ಷಕನ ಜವಾಬ್ದಾರಿ. ಆದರೆ ಶಿಕ್ಷಣ ನೀಡುವ ಶಿಕ್ಷಕನೇ ಮದ್ಯದ ಅಮಲಿನಲ್ಲಿ ತೂರಾಡುತ್ತಾ, ನಿದ್ರಿಸುತ್ತಾ, ಶಾಲಾ ಕೊಠಡಿಯಲ್ಲಿ ಕಳೆದರೆ ಹೇಗೆ?. ಇಂತಹದೊಂದು ಅಚ್ಚರಿಯ ಘಟನೆ ಮಧ್ಯಪ್ರದೇಶದ ಶಾಹ್ದೋಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಶಿಕ್ಷಕ ಉದಯ್ಬಾನ್ ಸಿಂಗ್ ನಾಥ್ ಎಣ್ಣೆ ಏಟಲ್ಲಿ ತೂರಾಡುತ್ತಿದ್ದಾನೆ, ನಿದ್ರಿಸುತ್ತಾನೆ. ಅತ್ತ ಮಕ್ಕಳು ಮಾತ್ರ ಶಿಕ್ಷಕನನ್ನು ಕಂಡು ದಿನೇ ಇದೇ ಗೋಳು ಎಂದು ಸುಮ್ಮನಾಗಿಬಿಟ್ಟಿದ್ದಾರೆ. ಅಂದಹಾಗೆಯೇ ಬಿಯೋಹರಿ ಬ್ಲಾಕ್ನಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಸಮೇತ ವೈರಲ್ ಆಗಿದೆ.
ಇದನ್ನೂ ಓದಿ: ಶಿರೂರು: 14 ದಿನವಾದರೂ ಅರ್ಜುನ್ ಸುಳಿವಿಲ್ಲ.. ಜಿಲ್ಲಾಡಳಿತದ ಮುಂದಿನ ನಡೆಯೇನು?
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದರೆ ಈ ಶಿಕ್ಷಕನನ್ನು ಕಂಡಾಗ ಏನು ಹೇಳಬೇಕು?. ಜ್ಞಾನದೇಗುಲಕ್ಕೆ ಕುಡಿದು ಬರುವ ಶಿಕ್ಷಕನ ವರ್ತನೆ ಕಂಡಾಗ ಇದು ಸಾಧ್ಯವೇ ಎಂದೆನಿಸಿ ಬಿಡುತ್ತದೆ. ಆದರೀಗ ನಶೆಯಲ್ಲಿರುವ ಶಿಕ್ಷಕ ಚಿತ್ರಣವೇ ಬಯಲಾಗಿದೆ.
ಕುಡುಕ ಶಿಕ್ಷಕನ ವಿಡಿಯೋ ವೈರಲ್ ಆಗಿದ್ದೇ ತಡ ಶಿಕ್ಷಣ ಇಲಾಖೆ ಆತನಿಗೆ ಎಚ್ಚರಿಸಿದೆ. ತಕ್ಷಣವೇ ಶಿಕ್ಷಕ ಉದಯ್ಬಾನ್ ಸಿಂಗ್ ನಾಥ್ನನ್ನು ಅಮಾನತು ಮಾಡಲಾಗಿದೆ.
‘नशे में मैं नहीं हूँ ,नशे में जमाना है’ - गुरु जी (शराब विश्लेषक)#Shahdol#teacherhttps://t.co/5iHZJ7iPQL
— ?? ऋतुराज पाठक (@Rituraj3082000)
‘नशे में मैं नहीं हूँ ,नशे में जमाना है’ - गुरु जी (शराब विश्लेषक)#Shahdol#teacherhttps://t.co/5iHZJ7iPQL
— 🇮🇳 ऋतुराज पाठक (@Rituraj3082000) July 28, 2024
">July 28, 2024
ಇದನ್ನೂ ಓದಿ: ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. BBMP ಲಾರಿ ಡಿಕ್ಕಿ ಹೊಡೆದು ಯುವಕ, ಯುವತಿ ಸಾವು
ಶಿಕ್ಷಕ ಉದಯ್ಬಾನ್ ಸಿಂಗ್ ನಾಥ್ ವರ್ತನೆ ಕಂಡು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಕ ಹಲವು ಬಾರಿ ಕುಡಿದು ಶಾಲೆಗೆ ಬಂದ ಉದಾಹರಣೆಗಳಿವೆಯಂತೆ. ಅನೇಕ ಬಾರಿ ದೂರ ನೀಡಲಾಗಿದೆಯಂತೆ. ಆದರೀಗ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ