ಬೆಳ್ ಬೆಳಗ್ಗೆ ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಲೇಡಿ ಕಿರಿಕ್.. ಹೆಂಡವೋ ಹೆಂಡ..! Video

author-image
Ganesh
Updated On
ಬೆಳ್ ಬೆಳಗ್ಗೆ ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಲೇಡಿ ಕಿರಿಕ್.. ಹೆಂಡವೋ ಹೆಂಡ..! Video
Advertisment
  • ಹಿರಿಯ ನಾಗರಿಕರ ಜೊತೆ ಕಿಲಾಡಿ ಲೇಡಿ ಅಸಭ್ಯ ವರ್ತನೆ
  • ಬಿಯರ್ ಬಾಟಲಿ ತೋರಿಸಿ ಹೇಳಿದ್ದೇನು ‘ದ ಲೇಡಿ’
  • ಎಣ್ಣೆ ಮತ್ತಿನ ಗಮ್ಮತ್ತಿನಲ್ಲಿ ಬೇಕಾಬಿಟ್ಟಿ ಮಾತಾಡಿದ ಹುಡುಗಿ

ಬೆಳ್ಳಂಬೆಳಗ್ಗೆ ಲೇಡಿಯೊಬ್ಬಳು ಕಂಠಪೂರ್ತಿ ಕುಡಿದು ಸಾರ್ವಜನಿಕರಿಗೆ ಕಿರಿಕ್ ಮಾಡಿದ ಘಟನೆ ತೆಲಂಗಾಣದ ನಗೋಲೆಯಲ್ಲಿ ನಡೆದಿದೆ.

ಆಗಿದ್ದೇನು..?
ತೆಲಂಗಾಣ ರಾಜ್ಯದಲ್ಲಿ ನೋಂದಣಿ ಆಗಿರುವ ಕಾರು ಒಂದು ನಗೋಲೆಯಲ್ಲಿ ನಿಂತಿತ್ತು. ಕಾರಿನಿಂದ ಇಳಿದಿದ್ದ ಜೋಡಿ.. ಮದ್ಯ ಮತ್ತು ಸಿಗರೇಟ್​ ಸೇದುತ್ತ ನಿಂತಿತ್ತು. ಕಂಠಪೂರ್ತಿ ಕುಡಿದಿದ್ದ ಹುಡುಗ, ಹುಡಗಿ ತೂರಾಡುತ್ತಿದ್ದರು. ಮಾತ್ರವಲ್ಲ, ಕಾರಿನಲ್ಲಿ ಡಿಜೆ ಸೌಂಡ್ ಜೋರಾಗಿ ಹಾಕಿಕೊಂಡಿದ್ದರು. ಮಾತುಗಳು ತೊದಲುತ್ತಿದ್ದವು.

ಇದನ್ನೂ ಓದಿ:ಫಾಫ್​ಗೆ ಸೆಂಡ್​ ಆಫ್​​ ನೀಡಲು ಕೌಂಟ್​​ಡೌನ್.. ತೆರೆಮರೆಯಲ್ಲಿ RCB ಭಾರೀ ತಯಾರಿ..!

ಮುಂಜಾನೆ ಎದ್ದು ವಾಕಿಂಗ್​ಗೆ ಬಂದ ಸಾರ್ವಜನಿಕರು ಇವರ ಹುಚ್ಚಾಟವನ್ನು ನೋಡಿದ್ದಾರೆ. ಸ್ವಲ್ಪ ಸಮಯ ಸುಮ್ಮನಿದ್ದ ಜನ, ಪ್ರಶ್ನೆ ಮಾಡಿದ್ದಾರೆ. ರಸ್ತೆಯಲ್ಲಿ ನಿಂತು ಯಾಕೆ ಹೀಗೆ ಮಾಡ್ತಿದ್ದೀರಿ. ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅಷ್ಟಕ್ಕೆ ರೊಚ್ಚಿಗೆದ್ದ ಈ ಜೋಡಿ.. ಪ್ರಶ್ನೆ ಮಾಡಿದವರಿಗೆ ಟಾಂಟ್ ನೀಡಲು ಮುಂದಾಗಿದೆ. ಬಿಯರ್ ಬಾಟಲಿ ತೋರಿಸುತ್ತ, ತಾವು ಮಾಡುತ್ತಿರೋದು ಸರಿ ಇದೆ. ಏನ್ ಮಾಡ್ತೀರಾ ಅನ್ನೋ ರೇಂಜ್​​ಗೆ ವಾದ ಮಾಡಿದ್ದಾರೆ. ಇದೇ ವೇಳೆ ಸ್ನೇಹಿತನ ಜೊತೆಗಿದ್ದ ಲೇಡಿ.. ಸಾರ್ವಜನಿಕರ ಜೊತೆ ವಾಗ್ವಾದಕ್ಕೆ ಬಂದಿದೆ. ಆಕೆಯ ಸ್ನೇಹಿತ ಕರೆದುಕೊಂಡು ಹೋಗಲು ಪ್ರಯತ್ನಿಸಿದರೂ ಸುಮ್ಮನಾಗಲಿಲ್ಲ. ಕುಡಿದು ತೂರಾಡುತ್ತ ಹಿರಿಯ ನಾಗರಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಅವಳ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:ಕಪ್ ಗೆಲ್ಲಬೇಕು ಅಂದರೆ ಕೊಹ್ಲಿ RCB ತೊರೆಯಬೇಕು -ಕಿಡಿ ಹೊತ್ತಿಸಿದ ಮಾಜಿ ಆಟಗಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment