/newsfirstlive-kannada/media/post_attachments/wp-content/uploads/2024/07/Aravindh.jpg)
ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿಗೆ ಚಾಕು ಇರಿದ ಪ್ರಸಂಗ ಚನ್ನಪಟ್ಟಣ ನಗರದ ತುಳಸಿತೋಟದ ಬೀದಿಯಲ್ಲಿ ನಡೆದಿದೆ. ಶ್ವೇತಾ (32) ಚಾಕು ಇರಿತಕ್ಕೊಳಗಾದ ಪತ್ನಿ.
ಇದನ್ನೂ ಓದಿ: VIDEO: ಕಣ್ಣೆದುರೇ ವಿಮಾನ ಪತನ.. 18 ಮಂದಿ ಭಸ್ಮ.. ಬದುಕಿ ಬಂದ ಪೈಲಟ್
ಅರವಿಂದ್ ಪತ್ನಿಗೆ ಚಾಕು ಇರಿದಿರೋ ವ್ಯಕ್ತಿ. ಕೌಟುಂಬಿಕ ಕಲಹ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ಅರವಿಂದ್ ಮತ್ತು ಶ್ವೇತಾ ಬೇರೆ ಬೇರೆ ಇದ್ದರು. ಆದರೆ ಇಂದು ಕುಡಿದು ಹೆಂಡತಿ ಜೊತೆ ಅರವಿಂದ್ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯ ಕುತ್ತಿಗೆ ಭಾಗಕ್ಕೆ ಚಾಕು ಇರಿದಿದ್ದಾನೆ. ಪತ್ನಿಯನ್ನ ಕೊಲೆ ಮಾಡಲು ಯತ್ನಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರಿಗರೇ.. ನಿಮ್ಮ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸಬಹುದು! ಬಹಳ ಸುಲಭ!
ಚಾಕು ಇರಿತದಿಂದ ಗಾಯಗೊಂಡ ಶ್ವೇತಾಗೆ ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಅತ್ತ ಕೊಲೆ ಮಾಡಲು ಯತ್ನಿಸಿದ ಪತಿ ಅರವಿಂದನನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಚನ್ನಪಟ್ಟಣ ಪೂರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ