ಕನ್ಫ್ಯೂಸ್ ಆಗಬೇಡಿ.. ದೃಷ್ಟಿಬೊಟ್ಟು ನಟಿ ಅರ್ಪಿತಾ ಸೌಂದರ್ಯಕ್ಕೆ ದಂಗಾದ ಫ್ಯಾನ್ಸ್​..!

author-image
Veena Gangani
Updated On
ಕನ್ಫ್ಯೂಸ್ ಆಗಬೇಡಿ.. ದೃಷ್ಟಿಬೊಟ್ಟು ನಟಿ ಅರ್ಪಿತಾ ಸೌಂದರ್ಯಕ್ಕೆ ದಂಗಾದ ಫ್ಯಾನ್ಸ್​..!
Advertisment
  • ಹಾಲು ಬಿಳುಪಿನ ದೃಷ್ಟಿ ಪಾತ್ರಕ್ಕೆ ಜೀವ ತುಂಬಿರೋ ನಟಿ ಅರ್ಪಿತಾ
  • ಮೊದಲ ಬಾರಿಗೆ ನಾಯಕಿಯಾಗಿ ಸೀರಿಯಲ್​ ಲೋಕಕ್ಕೆ ನಟಿ ಎಂಟ್ರಿ
  • ನಟಿ ಅರ್ಪಿತಾ ಮೋಹಿತೆ ಬ್ಯೂಟಿಗೆ ಫಿದಾ ಆದ್ರೂ ಅಭಿಮಾನಿಗಳು

ಕಲರ್ಸ್​ ಕನ್ನಡದಲ್ಲಿ ವಿಭಿನ್ನ ಕಾನ್ಸೆಪ್ಟ್​ನೊಂದಿಗೆ ಬಂದಿರೋ ದೃಷ್ಟಿಬೊಟ್ಟು ವೀಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿದೆ.  ಸಖತ್​ ಇಂಟ್ರಸ್ಟಿಂಗ್​ ಆಗಿದೆ ಸಂಚಿಕೆಗಳು ಮೂಡಿ ಬರುತ್ತಿವೆ.

ಇದನ್ನೂ ಓದಿ: ‘ರಾಮಾಯಣ’ದಲ್ಲಿ ನಟನೆಗಾಗಿ ರಣಬೀರ್ ಕಪೂರ್​, ಸಾಯಿ ಪಲ್ಲವಿಗೆ ಕೋಟಿ ಕೋಟಿ ದುಡ್ಡು..!

ದತ್ತಾ ಭಾಯ್ ಪಾತ್ರದಲ್ಲಿ ನಟ ವಿಜಯ್​ ಸೂರ್ಯ ರಗಡ್​ ಆಗಿ ಕಾಣಿಸಿಕೊಂಡಿದ್ದಾರೆ. ವಿಜಯ್​ಗೆ ಜೋಡಿಯಾಗಿ ಅರ್ಪಿತಾ ಮೋಹಿತೆ ಬಣ್ಣ ಹಚ್ಚಿದ್ದಾರೆ. ಇನ್ನೂ, ದೃಷ್ಟಿಬೊಟ್ಟು ಸೀರಿಯಲ್​ ಮೂಲಕ ಫೇಮಸ್​ ಆಗಿರೋ ನಟಿ ಅರ್ಪಿತಾ ಮೋಹಿತೆ ಉದಯೋನ್ಮಖ ಪ್ರತಿಭೆ. ಇದೇ ಮೊದಲ ಬಾರಿಗೆ ನಾಯಕಿಯಾಗಿ ದೃಷ್ಟಿಬೊಟ್ಟು ಮೂಲಕ ಲಾಂಚ್​ ಆಗಿದ್ದಾರೆ.

publive-image

ಹಾಲು ಬಿಳುಪಿನ ನಟಿ ಅರ್ಪಿತಾ ದೃಷ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ದಂತದ ಗೊಂಬೆಯಂತಿರೋ ಅರ್ಪಿತಾ ದೃಷ್ಟಿ ಆಗೋಕೆ ಮೈ-ಕೈಯೆಲ್ಲಾ ಕಪ್ಪಾಗಿ ಕಾಣಿಸಲು ಗಂಟೆಗಟ್ಟಲೇ ಮೇಕಪ್ ಮಾಡ್ಕೋತಾರೆ. ಯಾವಾಗ ದೃಷ್ಟಿ ನಿಜ ರೂಪ ಯಾವಾಗ ರಿವೀಲ್​ ಆಗೋತ್ತೋ ಅಂತ ಫ್ಯಾನ್ಸ್ ಕಾಯ್ತಾ ಇದ್ದಾರೆ. ಇದರ ಮಧ್ಯೆ ನಟಿ ಸೋಷಿಯಲ್​ ಮೀಡಿಯಾದಲ್ಲಿ ನಟಿ ಹೊಸ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಶೇರ್ ಮಾಡಿಕೊಂಡ ಹೊಸ ವಿಡಿಯೋದಲ್ಲಿ ನಟಿ ಅರ್ಪಿತಾ ಕೆಂಪು ಬಣ್ಣದ ಸೀರೆಯನ್ನು ತೊಟ್ಟುಕೊಂಡು ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಯಜಮಾಂತಿ ನೀವೇ ಚಂದಾ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment