newsfirstkannada.com

ಚಳ್ಳೆ ಹಣ್ಣು ತಿನ್ನಿಸಿದ ಗಂಡನ ಸೊಕ್ಕು ಮುರಿದ ಲೇಡಿ ಸಿಂಗಮ್‌; ಪೊಲೀಸ್ ಆಫೀಸರ್‌ ಮಾಡಿದ್ದೇನು?

Share :

Published February 12, 2024 at 8:20pm

    ಲೇಡಿ ಸಿಂಗಮ್​ಗೆ ಮೋಸ ಮಾಡಿ ತಾಳಿ ಕಟ್ಟಿದ ಪತಿಯೇ ಆಗ್ಬಿಟ್ಟ ವಿಲನ್

    ಶಿಕ್ಷೆ ಕೊಡಿಸಿರುವ ಅಧಿಕಾರಿಯೇ ವಂಚಕನಿಂದ ಬಲಿಪಶು ಆಗಿದ್ದೇಗೆ

    ಒಳ್ಳೆ ಇಮೇಜ್ ಕಾಪಾಡಿಕೊಂಡಿದ್ದ ಮಹಿಳಾ ಆಫೀಸರ್​​ಗೆ ವಂಚನೆ

ಆಕೆ ಖಡಕ್ ಪೊಲೀಸ್ ಅಧಿಕಾರಿ. ಆಕೆನ ಲೇಡಿ ಸಿಂಗಂ ಅಂತಾನೇ ಕರೀತಿದ್ರು. ಅಪರಾಧಿ ಯಾರೇ ಇರಲಿ, ಯಾರ ಕಡೆಯವರೇ ಇರಲಿ. ತನ್ನದೇ ಸ್ಟೈಲ್​ನಲ್ಲಿ ಚಳಿ ಬಿಡಿಸ್ತಿದ್ದರು. ಈಕೆಯ ದಕ್ಷ, ಪ್ರಾಮಾಣಿಕ ಕೆಲಸಕ್ಕೆ ಸಾಕಷ್ಟು ಅವಾರ್ಡ್, ರಿವಾರ್ಡ್ ಎಲ್ಲವೂ ಸಿಕ್ಕಿದೆ. ಬಟ್, ದುರಂತ ಏನಪ್ಪಾ ಅಂದ್ರೆ ಇಂಥ ಖಡಕ್​ ಆಫೀಸರ್​ಗೆ ಕಟ್ಕೊಂಡು ಗಂಡಾನೇ ಮೋಸ ಮಾಡಿದ್ದಾನೆ. ಗಂಡನ ಈ ಮೋಸ ಗೊತ್ತಾಗ್ತಿದ್ದಂತೆ ಆ ಅಧಿಕಾರಿ ಡಿವೋರ್ಸ್ ತಗೊಂಡಿದ್ದಾಳೆ.

ಶ್ರೇಷ್ಠಾ ಠಾಕೂರ್ ಅಂದ್ರೆ ಯುಪಿಯಲ್ಲಿ ಬಹಳಷ್ಟು ಜನಕ್ಕೇ ಗೊತ್ತಾಗಲ್ಲ. ಅದೇ ಲೇಡಿ ಸಿಂಗಂ ಅಂದ್ರೆ ಓಹ್ ಅವ್ರಾ ಅಂತಾರೆ. ಅಷ್ಟರ ಮಟ್ಟಿಗೆ ಲೇಡಿ ಸಿಂಗಂ ಫೇಮಸ್. ಇನ್ನು ಯುಪಿಯಲ್ಲಿ ಶ್ರೇಷ್ಠ ಠಾಕೂರ್ ಹೆಸರು ಕೇಳಿದ್ರೆ ಕ್ರಿಮಿನಲ್​ಗಳ ಎದೆಯಲ್ಲಿ ಭಯ ಹುಟ್ಟುತ್ತೆ. ಅಪರಾಧಿಗಳು ಅಪರಾಧ ಮಾಡೋಕು ಹೆದರಿಕೊಳ್ತಾರೆ. ಯಾಕಂದ್ರೆ ಅವ್ರ ಟ್ರ್ಯಾಕ್​ ರೆಕಾರ್ಡ್ ಹಾಗಿದೆ. ಇನ್ನು ಶ್ರೇಷ್ಠ ಠಾಕೂರ್​ ಸಾಕಷ್ಟು ಜನಪರ ಕೆಲಸಗಳನ್ನ ಮಾಡಿದ್ದು, ಜನ ಸಾಮಾನ್ಯರ ಪಾಲಿಗೆ ಹೀರೋ ಅಂತಾನೂ ಅನಿಸಿಕೊಂಡಿದ್ದಾರೆ. ಆದ್ರೀಗ ಇಂಥ ಅಧಿಕಾರಿಯೇ ಮೊಸ ಹೋಗಿದ್ದಾರೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ತಮ್ಮ ಕೆರಿಯರ್​ನಲ್ಲಿ ಅದೇಷ್ಟೋ ಮೋಸಗಾರರನ್ನ ಹಿಡಿದು ಶಿಕ್ಷೆ ಕೊಡಿಸಿರುವ ಅಧಿಕಾರಿಯೇ ಒಬ್ಬ ವಂಚಕನಿಂದ ಬಲಿಪಶು ಆಗಿದ್ದಾರೆ ಅನ್ನೋದು ಬಯಲಾಗಿದೆ.

ಹೌದು, ಲೇಡಿ ಸಿಂಗಂ ಶ್ರೇಷ್ಠ ಠಾಕೂರ್ ಮೋಸ ಹೋಗಿದ್ದಾರೆ. ಸಮಾಜದಲ್ಲಿ ಒಳ್ಳೆ ಹೆಸರು ಅದೇ ಥರಾ ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿಕ ಹಾಗೂ ದಕ್ಷ ಅಧಿಕಾರಿ ಅಂತ ಒಳ್ಳೆ ಇಮೇಜ್ ಕಾಪಾಡಿಕೊಂಡು ಬಂದಿದ್ದ ಮಹಿಳಾ ಆಫೀಸರ್​​ಗೆ ಮೋಸ ಆಗಿದೆ.

ಶ್ರೇಷ್ಠ ಠಾಕೂರ್​ ಕಾನ್ಪುರದ ನಿವಾಸಿ. ಬಡತನದ ಜೊತೆಗೆ ಸಾಕಷ್ಟು ಕಷ್ಟ ಅನುಭವಿಸಿ ಬೆಳೆದ ಮಹಿಳೆ. ಹೀಗೆ ಕಾನ್ಪುರದಲ್ಲಿ ಕಾಲೇಜಿಗೆ ಹೋಗ್ತಿರುವಾಗ ಯುವತಿಯರನ್ನ ಯುವಕರು ಚುಡಾಯಿಸ್ತಿದ್ದರಂತೆ. ಇದರಿಂದ ಬೇಸತ್ತು ಶ್ರೇಷ್ಠ ಠಾಕೂರ್ ಪೊಲೀಸ್​ ಕಂಪ್ಲೆಂಟ್​ ಕೊಟ್ಟಿದ್ದಾಳೆ. ಆದರೆ ಆಗ ಯಾರೂ ಅದನ್ನ ಗಂಭೀರವಾಗಿ ಪರಿಗಣಿಸಿಲ್ಲವಂತೆ. ಇದರಿಂದ ತೀವ್ರವಾಗಿ ಬೇಸರಗೊಂಡ ಶ್ರೇಷ್ಠ, ತಾನೊಬ್ಬ ಪೊಲೀಸ್ ಆಫೀಸರ್ ಆಗ್ಬೇಕು ಅಂತ ನಿರ್ಧರಿಸಿದಳಂತೆ. ತಾನು ಪೊಲೀಸ್ ಆಗಿ ಇಂಥ ಅಪರಾಧಗಳನ್ನ ತಡಿಬೇಕು ಎನ್ನುವ ಹಠಕ್ಕೆ ಬಿದ್ದು, ಅಲ್ಲಿಂದಲೇ ಯುಪಿಎಸ್​ಸಿ ಪರೀಕ್ಷೆಗೆ ಸಿದ್ದವಾದರಂತೆ. ಆಮೇಲೆ 2012ರಲ್ಲಿ ಯುಪಿಎಸ್​ಸಿ ಪರೀಕ್ಷೆ ಪಾಸ್ ಆಗಿ ಡಿಎಸ್​ಪಿ ಆಗಿ ಇಲಾಖೆನೂ ಸೇರಿದ್ರು. ಡಿಪಾರ್ಟ್​ಮೆಂಟ್​ ಸೇರಿದ ನಂತರ ತಮ್ಮ ದಕ್ಷ ಹಾಗು ಪ್ರಮಾಣಿಕತೆ ಕೆಲಸದಿಂದ ಲೇಡಿ ಸಿಂಗಂ ಆಗಿ ಬೆಳೆದು ನಿಂತರು.

ಲೇಡಿ ಸಿಂಗಮ್​ಗೆ ಮೋಸ.. ತಾಳಿ ಕಟ್ಟಿದ ಪತಿಯೇ ವಿಲನ್!

ವೃತ್ತಿಯಲ್ಲಿ ಸ್ಟ್ರಿಟ್​ ಆಫೀಸರ್, ಖಡಕ್ ಆಫೀಸರ್​, ಲೇಡಿ ಸಿಂಗಮ್ ಅಂತೆಲ್ಲಾ ಕರೆಸಿಕೊಳ್ಳುವ ಶ್ರೇಷ್ಠ ಠಾಕೂರ್, ಅದ್ಯಾಕೋ ಪರ್ಸನಲ್ ಲೈಫ್​ನಲ್ಲಿ ಎಡವಿದ್ದಾರೆ. ಎಷ್ಟೋ ಪ್ರಕರಣಗಳಲ್ಲಿ, ಎಷ್ಟೋ ಅಪರಾಧಿಗಳನ್ನ ಹಿಡಿದು ಅವರ ವಂಚನೆಯನ್ನ ಬಯಲು ಮಾಡಿದ ಅಧಿಕಾರಿಯೇ ವಂಚಕನೊಬ್ಬನಿಗೆ ಪತ್ನಿ ಆಗಿ ಮೋಸ ಹೋಗಿದ್ದಾರೆ. ಹೌದು, ಶ್ರೇಷ್ಠ ಠಾಕೂರ್​ಗೆ ತಾಳಿ ಕಟ್ಟಿದ ಪತಿಯೇ ವಂಚಿಸಿದ್ದಾನೆ. ಬರೀ ವಂಚನೆ ಮಾತ್ರ ಪತ್ನಿಯ ಇಮೇಜ್​ ಬಳಸಿಕೊಂಡು ಪರರಿಗೂ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮ್ಯಾಟ್ರಿಮೋನಿಯದಲ್ಲಿ ಪರಿಚಯ.. IRS​ ಅಧಿಕಾರಿ ಅಂತ ಮೋಸ!

ಶ್ರೇಷ್ಠ ಠಾಕೂರ್ 2018ರಲ್ಲಿ ರೋಹಿತ್ ರಾಜ್ ಎಂಬಾತನ ಜೊತೆ ವಿವಾಹವಾಗಿದ್ದರು. 2008ನೇ ಬ್ಯಾಚ್​ನ​ ಓರ್ವ ಐಆರ್‌ಎಸ್ ಅಧಿಕಾರಿ ಅಂತ ಹೇಳಿಕೊಂಡಿದ್ದ ರೋಹಿತ್ ರಾಜ್ ರಾಂಚಿಯಲ್ಲಿ ಕಮಿಷನರ್ ಆಗಿ ನೇಮಕಗೊಂಡಿದ್ದೇನೆ ಅಂತ ಹೇಳಿದ್ದ. ಆ ಕಡೆ ಶ್ರೇಷ್ಠ ಠಾಕೂರ್​ ವಿಚಾರಿಸದಾಗಲೂ ಅದೇ ಹೆಸರಿನಲ್ಲಿ ಕಮಿಷನರ್ ಇದ್ದ ಎನ್ನಲಾಗಿದೆ. ಹಾಗಾಗಿ ರೋಹಿತ್​ ರಾಜ್​ನ ಸುಲಭವಾಗಿ ನಂಬಿದ ಶ್ರೇಷ್ಠ ಠಾಕೂರ್​ ಅವನನ್ನ ಮದುವೆ ಆಗಿದ್ದಾರೆ. ದುರಂತ ಏನಪ್ಪ ಅಂದ್ರೆ ಮದುವೆಯಾದ ಎರಡು ವರ್ಷದ ನಂತರ ತನ್ನ ಪತಿ ರೋಹಿತ್ ರಾಜ್ ಐಆರ್​ಎಸ್​ ಅಧಿಕಾರಿ ಅಲ್ಲ ಅನ್ನೋದು ಗೊತ್ತಾಗಿದೆ. ತಾನೊಬ್ಬ ಡಿಆರ್​ಎಸ್​ ಆಫೀಸರ್​ ಅಂತೇಳಿ ನಂಬಿಸಿ ಮದುವೆಯಾಗಿದ್ದಾನೆ ಅನ್ನೊದು ತಮ್ಮ ಗಮನಕ್ಕೆ ಬಂದಿದೆ. ಆದರೆ ಮರ್ಯಾದೆಗೆ ಅಂಜಿದ ಮಹಿಳಾ ಅಧಿಕಾರಿ ತನ್ನ ಸಂಸಾರದ ಗುಟ್ಟನ್ನ ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡು ಬಿಟ್ಟರು. ಆದರೆ ಗಂಡನಿಗೆ ವಂಚನೆ ಅನ್ನೋದು ಚಟವಾಗಿತ್ತು ಅಲ್ವಾ! ಹೆಂಡತಿ ಸುಮ್ಮನಾದಳು ಅನ್ನೋದನ್ನೆ ಅಸ್ತ್ರವನ್ನಾಗಿಸಿಕೊಂಡ ಶ್ರೇಷ್ಠ ಠಾಕೂರ್ ಪತಿ, ಪತ್ನಿ ಹೆಸರೇಳಿಕೊಂಡು ಇನ್ನಷ್ಟು ವಂಚನೆ ಮಾಡೋಕೆ ಶುರು ಮಾಡಿದ್ದ. ಆಮೇಲೆ ಬೇರೆ ಬೇರೆಯವರ ಬಳಿಯೂ ಹಣ ಪಡೆದು ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಅದ್ಯಾವಾಗ ಗಂಡನ ವಂಚನೆ ಜಾಸ್ತಿ ಆಯ್ತೋ, ಆಗ ಶ್ರೇಷ್ಠ ಠಾಕೂರ್ ತಾಳ್ಮೆಯ ಕಟ್ಟೆ ಹೊಡೆದಿದೆ. ಫ್ಯಾಮಿಲಿ ಕೋರ್ಟ್​ನಲ್ಲಿ ಡಿವೋರ್ಸ್​ಗೆ ಅರ್ಜಿ ಹಾಕಿ ಕಾನೂನಿನ ಮೊರೆ ಹೋಗಿದ್ದಾರೆ. ತದ ನಂತರ ಕೋರ್ಟ್​ ಕೂಡ ಶ್ರೇಷ್ಠ ಠಾಕೂರ್ ಮತ್ತು ರೋಹಿತ್ ರಾಜ್ ದಾಂಪತ್ಯಕ್ಕೆ ವಿರಾಮ ಹಾಕಿತ್ತು. ಕಾನೂನಾತ್ಮಕವಾಗಿ ಗಂಡನಿಂದ ದೂರವಾದ ಲೇಡಿ ಸಿಂಗಮ್ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆದರೆ ಅಷ್ಟೊತ್ತಿಗಾಗಲೇ ತನ್ನ ಮಾಜಿ ಪತಿ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರೋಕೆ ಶುರುವಾಯ್ತು. ಖುದ್ದು ಶ್ರೇಷ್ಠ ಠಾಕೂರ್ ಬಳಿಯೇ ಬಹಳ ದೂರು ಬಂದವು. ಈ ನಡುವೆ ಮಹಿಳೆಯೊಬ್ಬರಿಗೆ ತನ್ನ ಹೆಸರೇಳೀಕೊಂಡು 15 ಲಕ್ಷ ವಂಚಿಸಿರುವುದು ಬೆಳಕಿಗೆ ಬಂತು. ಕೊನೆಗೆ ಎಚ್ಚೆತ್ತುಕೊಂಡ ಡಿಎಸ್​ಪಿ ಶ್ರೇಷ್ಠ ಠಾಕೂರ್, ಮಾಜಿ ಪತಿಯ ವಿರುದ್ಧ ಗಾಜಿಯಾಬಾದ್‌ನ ಕೌಶಂಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಮ್ಮ ದೂರಿನ ಹಿನ್ನೆಲೆ ವಿಚಾರಣೆ ಕೈಗೆತ್ತಿಕೊಂಡು ಪೊಲೀಸರು ಈಗ ರೋಹಿತ್​ ರಾಜ್​ನ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಲೇಡಿ ಸಿಂಗಂಗೆ ಮೋಸ ಮಾಡಿರೋದು ಒಂದ್ಕಂಡೆಯಾದ್ರೆ, ಎರಡ್ಮೂರು ವರ್ಷ ಸಂಸಾರನೇ ಮಾಡೋ ಧೈರ್ಯ ಮಾಡಿ ಸಕ್ಸಸ್ ಆಗಿದ್ದಾನೆ ಆ ಭಂಡ. ಈ ಕೇಸ್‌ನಿಂದ ತಿಳಿಯೋದು ಏನಂದ್ರೆ, ಪೊಲೀಸರಾಗಲಿ, ಸಾಮಾನ್ಯರಾಗಲಿ, ಯಾಮಾರಿದ್ರೆ, ಯಾಮಾರೋದು ಗ್ಯಾರಂಟಿ ಅನ್ನೋದು. ಏನಂತೀರಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಳ್ಳೆ ಹಣ್ಣು ತಿನ್ನಿಸಿದ ಗಂಡನ ಸೊಕ್ಕು ಮುರಿದ ಲೇಡಿ ಸಿಂಗಮ್‌; ಪೊಲೀಸ್ ಆಫೀಸರ್‌ ಮಾಡಿದ್ದೇನು?

https://newsfirstlive.com/wp-content/uploads/2024/02/up-6.jpg

Load More