newsfirstkannada.com

’ರೂಲ್ಸ್​ ಪ್ರಕಾರ ಕೊಹ್ಲಿ ಔಟ್​​..’- ವಿರಾಟ್​​ ವಿರುದ್ಧವೇ ಹೇಳಿಕೆ ಕೊಟ್ಟ ಆರ್​​ಸಿಬಿ ಕ್ಯಾಪ್ಟನ್​ ಫಾಫ್​

Share :

Published April 22, 2024 at 6:05pm

Update April 22, 2024 at 5:52pm

    ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ನಡೆದ ರೋಚಕ ಪಂದ್ಯ

    ವಿವಾದಾತ್ಮಕ ತೀರ್ಪಿಗೆ ಬಲಿಯಾದ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ

    ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​ ಸಿಡಿಮಿಡಿ

ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ರೋಚಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್​ ವಿರಾಟ್‌ ಕೊಹ್ಲಿ ಔಟ್‌ ಆದ ರೀತಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್‌, ಆನ್‌ಫೀಲ್ಡ್‌ ಅಂಪೈರ್‌ಗಳ ಪರ ಬ್ಯಾಟ್‌ ಬೀಸಿದ್ದಾರೆ.

ರೂಲ್ಸ್​ ಪ್ರಕಾರ ಕೊಹ್ಲಿ ಔಟ್‌ ಆಗಿದ್ದಾರೆ. ಅಂಪೈರ್‌ ತೆಗೆದುಕೊಂಡ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ನಾವು ಈ ಪಂದ್ಯ ಗೆಲ್ಲಲೇಬೇಕಿತ್ತು. ಪ್ಲೇ ಆಫ್ಸ್‌ ರೇಸ್‌ನಲ್ಲಿ ಉಳಿಯಲು ಈ ಗೆಲುವು ಅಗತ್ಯವಿತ್ತು. ಇಂದು ಕೂಡ ಸೋತು ಫ್ಯಾನ್ಸ್​ಗೆ ನಿರಾಸೆ ಮೂಡಿಸಿದ್ದೇವೆ ಎಂದರು.

ಏನಿದು ವಿವಾದ?

ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಮಾಡಿದ ಕೆಕೆಆರ್​ 20 ಓವರ್​ಗೆ 222 ರನ್‌ ಗಳಿಸಿ ಆರ್​​​ಸಿಬಿಗೆ ಸವಾಲಿನ ಮೊತ್ತ ಟಾರ್ಗೆಟ್​ ನೀಡಿತ್ತು. ಈ ಬೃಹತ್​ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಆರ್​​ಸಿಬಿ ತಂಡ ನಿಗದಿತ 20 ಓವರ್​ಗೆ 10 ವಿಕೆಟ್ ನಷ್ಟಕ್ಕೆ 221 ರನ್​ ಗಳಿಸಿ 1 ರನ್​​ನಿಂದ ರೋಚಕ ಸೋಲು ಕಂಡಿದೆ. ಕೆಕೆಆರ್​ ನೀಡಿದ ಟಾರ್ಗೆಟ್​​ ಚೇಸ್​ ಮಾಡುವಾಗ ಕೊಹ್ಲಿ ಉತ್ತಮ ಬ್ಯಾಟಿಂಗ್​ ಮಾಡುತ್ತಿದ್ರು. RCB ಇನಿಂಗ್ಸ್‌ 3ನೇ ಓವರ್​​ನ ಮೊದಲ ಬಾಲ್​ನಲ್ಲಿ ವೇಗಿ ಹರ್ಷಿತ್ ರಾಣಾಗೆ ಕ್ಯಾಚ್ ನೀಡಿದರು. ಇದು ನೋಬಾಲ್​ ಆಗಿತ್ತು. ಕೊಹ್ಲಿ ಅಪೀಲ್​ ಮಾಡಿದ್ರೂ ಬೇಕಂತಲೇ ಫೀಲ್ಡ್ ಅಂಪೈರ್ ಔಟ್​ ಕೊಟ್ಟರು. ಡಿಆರ್‌ಎಸ್ ಕೂಡ ಕೊಹ್ಲಿ ವಿರುದ್ಧ ಬಂದಿತ್ತು. ಈಗ ಕೊಹ್ಲಿ ವಿವಾದಾತ್ಮಕ ಔಟ್​​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: VIDEO: KKR ​​ವಿರುದ್ಧ ಪಂದ್ಯದಲ್ಲಿ ಆರ್​​​ಸಿಬಿಗೆ ಮತ್ತೊಂದು ಮಹಾಮೋಸ; ಅದು ಸಿಕ್ಸಾ? ಫೋರಾ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

’ರೂಲ್ಸ್​ ಪ್ರಕಾರ ಕೊಹ್ಲಿ ಔಟ್​​..’- ವಿರಾಟ್​​ ವಿರುದ್ಧವೇ ಹೇಳಿಕೆ ಕೊಟ್ಟ ಆರ್​​ಸಿಬಿ ಕ್ಯಾಪ್ಟನ್​ ಫಾಫ್​

https://newsfirstlive.com/wp-content/uploads/2024/04/Kohli_Fight_Faf.jpg

Load More