ದುಬೈ ರಾಜಕುಮಾರನ ಮಗಳಿಗೆ ಹಿಂದ್ ಎಂದು ನಾಮಕರಣ.. ಈ ಹೆಸರಿನ ಮಹತ್ವವೇನು ಗೊತ್ತಾ?

author-image
Gopal Kulkarni
Updated On
ದುಬೈ ರಾಜಕುಮಾರನ ಮಗಳಿಗೆ ಹಿಂದ್ ಎಂದು ನಾಮಕರಣ.. ಈ ಹೆಸರಿನ ಮಹತ್ವವೇನು ಗೊತ್ತಾ?
Advertisment
  • ದುಬೈ ರಾಜಕುಮಾರನ ಮನೆಗೆ ಬಂದ ಮುದ್ದು ಮಗಳು
  • ನಾಲ್ಕನೇ ಸಂತಾನಕ್ಕೆ ಜನ್ಮ ನೀಡಿದ ಶೇಖ್ ಹಮ್ದಾನ್ ಪತ್ನಿ
  • ಪ್ರೀತಿಯ ಪುತ್ರಿಗೆ ಹಿಂದ್ ಎಂದು ನಾಮಕರಣ ಮಾಡಿದ ಹಮ್ದಾನ್

ದುಬೈನ ರಾಜಕುಮಾರ ಶೇಖ್​ ಹಮ್ದಾನ್​ ಮತ್ತು ಅವರ ಪತ್ನಿ ಶೀಖಾ ಶೀಖಾ ಬಿಂತ್ ಸಯೀದ್​ ಬಿನ್​ ಥಾನಿ ಅಲ್ ಮುಕ್ತೌಮ್​ ತಮ್ಮ ದಾಂಪತ್ಯದ ಗುರುತಾಗಿ ನಾಲ್ಕನೇ ಮಗುವನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಅದು ಮಾತ್ರವಲ್ಲ ರಾಜಕುಮಾರ್ ಶೇಖ್​ ಹಮ್ದಾನ್​ ತಮ್ಮ ಪುತ್ರಿಗೆ ಇಟ್ಟಿರುವ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶೇಖ್​ ಹಮ್ದಾನ್ ಹಾಗೂ ಅವರ ಕುಟುಂಬದವರೆಲ್ಲರೂ ಸೇರಿ ಮಗುವಿಗೆ ಹಿಂದ್ ಎಂದು ನಾಮಕರಣ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶೇಖ್ ಹಮ್ದಾನ್ ನಮ್ಮ ಪ್ರಾರ್ಥನೆಯನ್ನು ಪೂರ್ಣಗೊಳಿಸಿ ನಮಗೆ ಸಂಪೂರ್ಣ ಕೃಪೆ ತೋರಿದ ದೇವರಿಗೆ ನಾನು ಧನ್ಯವಾದ ಹೇಳುತ್ತೇನೆ. ದೇವರು ನಮಗೆ ಹೆಣ್ಣು ಮಗುವನ್ನು ಕರುಣಿಸಿದ್ದಾನೆ. ಹಿಂದ್​ ಇವಳು ಹಮ್ದಾನ್​ ಬಿನ್ ಮೊಹಮ್ಮೆದ್ ಅಲ್ ಮಕ್ತೌಮ್​ನ ಮಗಳು ಎಂದು ಹೇಳಿದ್ದಾರೆ.ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಿಂದ್ ಹೆಸರಿನ ಅರ್ಥವೇನು ಎಂದು ಎಲ್ಲರೂ ಹುಡುಕುತ್ತಿದ್ದಾರೆ. ಹಿಂದ್ ಎಂದರೆ ಸಮೃದ್ಧಿ ಎಂದು ಅರ್ಥ. ರಾಜಕುಮಾರ ಹಮ್ದಾನ್​ ಪುತ್ರಿಗೆ ಅವಳ ಅಜ್ಜಿಯ ಹೆಸರನ್ನೇ ಇಡಲಾಗಿದೆ. ಶೇಖ್ ಹಿಂದ್ ಬಿಂತ್​ ಮಕ್ತೌಮ್​ ಬಿನ್ ಜುಮಾ ಅಲ್ ಮಕ್ತೌಮ್​ ಎಂದು

ಇದನ್ನೂ ಓದಿ:ಏಪ್ರಿಲ್ 2ರಿಂದ ಟ್ರಂಪ್ ತೆರಿಗೆ ಯುದ್ಧ.. ವಿದೇಶಿ ಕಾರುಗಳಿಗೆ ಭಾರೀ ಪ್ರಮಾಣದ ಸುಂಕ; ಭಾರತಕ್ಕೂ ಶಾಕ್‌!

ಶೇಖ್ ಹಮ್ದಾನ್​ 2008ರಲ್ಲಿ ದುಬೈನ ರಾಜಕುಮಾರರಾದರು. ಇವರು ಯುಎಇ ದೇಶದ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವಾಲಯವನ್ನು ಕೂಡ ನಿಭಾಯಿಸುತ್ತಾರೆ, ಇವರು ದುಬೈನ್ನು ಆಳುತ್ತಿರುವ ಶೇಖ್ ಮೊಹಮ್ಮದ್​ ಬಿನ್ ರಶೀದ್ ಅಲ್ನ ಮಕ್ತೌಮ್​ ಮತ್ತು ಶೇಖ್ ಹಿಂದ್​ ಬಿಂತ್​ ಮಕ್ತೌಮ್​ ಬಿನ್ ಜುಮಾ ಅಲ್ ಮಕ್ತೌಮ್ ಅವರ ಎರಡನೇ ಪುತ್ರ.
ದುಬೈನ ರಾಜಕುಮಾರ ಹಮ್ದಾನ್​ಗೆ ಆಟ, ಅಡ್ವೆಂಚರ್​ಗಳೆಂದರೆ ಹೆಚ್ಚು ಉತ್ಸಾಹ. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟಿವ್ ಇರುತ್ತಾರೆ. ಈ ಮೂಲಕವೇ ಜನರ ಮನಸ್ಸುಗಳಿಗೆ ಹತ್ತಿರವಾಗಿದ್ದಾರೆ ಮತ್ತು ನೆಟ್ಟಿಗರ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment