ಆದಾಯ ತೆರಿಗೆಯನ್ನೇ ಪಡೆಯದ ದುಬೈ ಅಷ್ಟೊಂದು ಶ್ರೀಮಂತ ರಾಷ್ಟ್ರವಾಗಿದ್ದು ಹೇಗೆ? ಇಲ್ಲಿವೆ ಕಾರಣಗಳು

author-image
Gopal Kulkarni
Updated On
ಆದಾಯ ತೆರಿಗೆಯನ್ನೇ ಪಡೆಯದ ದುಬೈ ಅಷ್ಟೊಂದು ಶ್ರೀಮಂತ ರಾಷ್ಟ್ರವಾಗಿದ್ದು ಹೇಗೆ? ಇಲ್ಲಿವೆ ಕಾರಣಗಳು
Advertisment
  • ದುಬೈನಲ್ಲಿ ಇಂದಿಗೂ ಕೂಡ ಯಾವ ಪ್ರಜೆಯೂ ಆದಾಯ ತೆರಿಗೆ ಕಟ್ಟಲ್ಲ
  • ದೇಶಿ-ವಿದೇಶಿ ,ಉದ್ಯೋಗಿಯಾಗಿರಲಿ, ವ್ಯಾಪಾರಸ್ಥನಾಗಿರಲಿ ಟ್ಯಾಕ್ಸ್ ಇಲ್ಲ
  • ಹಾಗಿದ್ರೆ ದುಬೈಗೆ ಹರಿದು ಬರುವ ಹಣದ ಮೂಲ ಯಾವುದು ಅಂತ ಗೊತ್ತಾ?

ದುಬೈ ಜಾಗತಿಕವಾಗಿ ತೆರಿಗೆ ಸ್ನೇಹಿ ರಾಷ್ಟ್ರವೆಂದೇ ಗುರುತಿಸಿಕೊಂಡಿದೆ. ಹೀಗಾಗಿಯೇ ಈ ದೇಶ ಉದ್ಯಮ ಹಾಗೂ ವಲಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ನೀವು ವ್ಯಾಪಾರದ ಮಾಲೀಕರೇ ಆಗಿರಿ ಇಲ್ಲವೇ ಉದ್ಯೋಗಿಗಳೇ ಆಗಿರಿ ನಿಮ್ಮಿಂದ ದುಬೈ ಆದಾಯ ತೆರಿಗೆಯನ್ನು ತೆಗೆದುಕೊಳ್ಳುವುದಿಲ್ಲ. ನೀವು ದುಬೈನ ತೆರಿಗೆ ನೀತಿಯನ್ನು ತಿಳಿದುಕೊಂಡಲ್ಲಿ ಅಲ್ಲಿರುವ ಆದಾಯದ ಅವಕಾಶಗಳು ಹೇಗಿವೆ ಎಂಬುದನ್ನು ತಿಳಿಯಬಹುದು.

ದುಬೈನಲ್ಲಿ ವೈಯಕ್ತಿಕವಾದ ತೆರಿಗೆಯೇ ಇಲ್ಲ. ದುಬೈ ವೈಯಕ್ತಿಕವಾಗಿ ಯಾರಿಂದಲೂ ಆದಾಯ ತೆರಿಗೆಯನ್ನು ಸ್ವೀಕರಿಸುವುದಿಲ್ಲ ಅದು ಸ್ಥಳೀಯರೇ ಇರಲಿ ಇಲ್ಲವೇ ವಲಸಿಗರೇ ಇರಲಿ ಅವರಿಂದ ಒಂದೇ ಒಂದು ದಿರಹಾಮ್​ ತೆರಿಗೆಯನ್ನು ತೆಗೆದುಕೊಳ್ಳುವುದಿಲ್ಲ. ಸೊನ್ನೆ ಆದಾಯ ತೆರಿಗೆ ನೀತಿಯಿಂದಾಗಿ ದುಬೈಗೆ ಅನೇಕ ರೀತಿಯ ಪ್ರಯೋಜನಗಳು ಇವೆ.

ಇದನ್ನೂ ಓದಿ:ಜೈಲೇ ನನಗೆ ತವರುಮನೆ.. ಪದೇ ಪದೇ ಬಂಧಿಖಾನೆ ಸೇರಲು ಈ ಮಹಿಳೆ ಮಾಡಿದ್ದೇನು ಗೊತ್ತಾ?

ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳು ತಮ್ಮ ಸಂಪೂರ್ಣ ಆದಾಯವನ್ನ ತಮ್ಮ ಬಳಿಯೇ ಇಟ್ಟುಕೊಳ್ಳಬಹುದು. ಇದರಿಂದಾಗಿ ಜನರು ಹಣವನ್ನು ಉಳಿಸಲು ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಾರೆ. ಟ್ಯಾಕ್ಸ್ ಫ್ರೀ ವ್ಯವಸ್ಥೆಯಿಂದಾಗಿ ಜಾಗತಿಕ ಪ್ರತಿಭೆಗಳು ಈ ದೇಶಕ್ಕೆ ಹರಿದು ಬರುತ್ತಾರೆ ಮತ್ತು ದುಬೈಯನ್ನು ಪ್ರೋಫೆಷನಲ್ ಹಬ್​ ಆಗಿ ಪರಿವರ್ತಿಸುತ್ತಾರೆ.

ಆದಾಯ ತೆರಿಗೆ ಇಲ್ಲದೇ ದುಬೈ ಹಣ ಹೇಗೆ ಗಳಿಸುತ್ತದೆ?
ದುಬೈನಲ್ಲಿ ವೈಯಕ್ತಿಕ ಆದಾಯ ತೆರಿಗೆ ಇಲ್ಲ ಆದ್ರೆ ಕಾರ್ಪೋರೇಟ್ ಟ್ಯಾಕ್ಸ್ ಅಸ್ತಿತ್ವದಲ್ಲಿ. ಹೇಗೆ ವೈಯಕ್ತಿಕವಾಗಿ ಜನರು ತಮ್ಮ ಆದಾಯ ಹಾಗೂ ಬ್ಯುಸಿನೆಸ್​ನಿಂದ ತೆರಿಗೆ ರಹಿತ ಜೀವನ ಸಾಗಿಸಿದರೆ. ಉದ್ಯಮಿಗಳು ಅದರಲ್ಲೂ 3 ಲಕ್ಷ 75 ಸಾವಿರ ಅರಬ್​ ಎರಿಮೇಟ್ಸ್ ದಿರಹಾಮ್ ಗಳಿಸುವ ಕಾರ್ಪೋರೇಟ್ ಕಂಪನಿಗಳು ಶೇಕಡಾ 9 ರಷ್ಟು ಟ್ಯಾಕ್ಸ್ ಕಟ್ಟಬೇಕು. ಈ ಒಂದು ತೆರಿಗೆ ನೀತಿ 2023ರಿಂದ ಆರಂಭವಾಗಿದೆ. ಅಂದ್ರೆ ಯಾವ ಕಂಪನಿ ಭಾರತೀಯ ರೂಪಾಯಿಯಲ್ಲಿ 88 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸುತ್ತದೆಯೋ ಅದು ಕೇವಲ 9 ಪರ್ಸೆಂಟ್ ಟ್ಯಾಕ್ಸ್ ನೀಡಬೇಕು.

ಇದನ್ನೂ ಓದಿ:ಮರಕ್ಕೆ ಡಿಕ್ಕಿ ಹೊಡೆದ ಕಾರು.. ಭಾರತದ ಇಬ್ಬರು ವಿದ್ಯಾರ್ಥಿಗಳ ದುರಂತ ಅಂತ್ಯ

ಇನ್ನು ಆಯಿಲ್ ಕಂಪನಿಗಳಿಗೆ ಶೇಕಡಾ 55 ರಿಂದ 85 ರಷ್ಟು ತೆರಿಗೆ ಇದೆ. ವಿದೇಶಿ ಬ್ಯಾಂಕುಗಳಿಗೆ ಶೇಕಡಾ 20 ರಷ್ಟು ಕಾರ್ಪೋರೇಟ್ ಟ್ಯಾಕ್ಸ್ ನಿಗದಿ ಮಾಡಲಾಗಿದೆ. ಪರ್ಸನಲ್ ಟ್ಯಾಕ್ಸ್ ಬಿಟ್ಟು ದುಬೈ ಇನ್ನು ಹಲವು ಟ್ಯಾಕ್ಸ್​ಗಳನ್ನು ಪಡೆಯುತ್ತದೆ

ವ್ಯಾಟ್: 2018ರಲ್ಲಿ ದುಬೈ ಮೌಲ್ಯವರ್ಧಿತ ತೆರಿಗೆ ಅಂದ್ರೆ ವ್ಯಾಟ್ ತೆರಿಗೆ ನೀತಿಯನ್ನು ತಂದಿತ್ತು. ಇದು ಈ ಹಿಂದೆ ಭಾರತದಲ್ಲಿಯೂ ಇತ್ತು. ಈ ವ್ಯಾಟ್ ಪ್ರಕಾರ ಸರಕು ಮತ್ತು ಸೇವೆಗಳ ಮೇಲೆ ಸುಮಾರು 5 ಪರ್ಸೆಂಟ್ ತೆರಿಗೆ ಪಡೆಯಲಾಗುತ್ತದೆ.

ಮುನ್ಸಿಪಲ್ ಟ್ಯಾಕ್ಸ್: ಯುಟಿಲಿಟಿ ಬಿಲ್ಸ್ ಮತ್ತು ಆಸ್ತಿಗಳ ಮೇಲೆ ಸಣ್ಣ ಪ್ರಮಾಣದ ತೆರಿಗೆ ವಿಧಿಸಲಾಗುತ್ತದೆ

ಟೂರಿಸಂ ಟ್ಯಾಕ್ಸ್: ಹೋಟೆಲ್, ರೆಸ್ಟೋರೆಂಟ್​ಗಳು ಮತ್ತು ಉಳಿದ ಪ್ರವಾಸೋದ್ಯಕ್ಕೆ ಸಂಬಂಧಿಸಿದ ಸೇವೆಗಳಿಂದ ಟ್ಯಾಕ್ಸ್ ಸಂಗ್ರಹಿಸಲಾಗುತ್ತದೆ.

ಇನ್ನು ದುಬೈ ಡಬಲ್ ಟ್ಯಾಕ್ಸೆಷನ್ ಒಪ್ಪಂದವನ್ನು ಹಲವು ದೇಶಗಳೊಂದಿಗೆ ಮಾಡಿಕೊಂಡಿದೆ. ಅಂದ್ರೆ ಈ ದೇಶಗಳ ಪ್ರಜೆಗಳು ಹಾಗೂ ವ್ಯಾಪಾರಿಗಳು ಒಂದೇ ಆದಾಯಕ್ಕೆ ಎರಡೆರಡು ಬಾರಿ ತೆರಿಗೆ ಕಟ್ಟುವ ಹಾಗಿಲ್ಲ. ಅಂತಹ ಒಪ್ಪಂದ ಮಾಡಿಕೊಂಡ ದೇಶಗಳು ಅಂದ್ರೆ ಭಾರತ, ಯುಕೆ ಮತ್ತು ಯುಎಸ್​

ಇನ್ನು ದುಬೈಗೆ ಅತಿಹೆಚ್ಚು ಆದಾಯ ಹರಿದು ಬರುವುದೇ ಆಯಿಲ್ ಮತ್ತು ಗ್ಯಾಸ್ ಆದಾಯದಿಂದ. 2018ರಲ್ಲಿ ಪರಿಚಯಿಸಲಾದ ವ್ಯಾಟ್​ ಕೂಡ ದುಬೈನ ರೆವೆನ್ಯೂ ಕಲೆಕ್ಷನ್​​ಗೆ ಪ್ರಮುಖ ಕೊಡುಗೆ ನೀಡಿದೆ. ಇನ್ನು ಟೂರಿಸಂ ಹಾಗೂ ರಿಯಲ್ ಎಸ್ಟೇಟ್​ ಉದ್ಯಮಗಳಿಂದಲೂ ಆದಾಯಗಳು ಬರುತ್ತವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment