ಪತ್ನಿ ಬಿಕನಿ ಹಾಕಿಕೊಳ್ಳಬೇಕು ಅಂತ ಈ ಕೋಟ್ಯಾಧಿಪತಿ ಮಾಡಿದ್ದೇನು?
ಬಿಕನಿ ಹಾಕೊಂಡು ಬೀಚ್ನಲ್ಲಿ ಬಿಂದಾಸಾಗಿ ಓಡಾಡುವ ಆಸೆ ಪಟ್ಟಿದ್ದ ಪತ್ನಿ
ಬ್ರಿಟನ್ ಪತ್ನಿಯ ಆಸೆ ಪೂರೈಸಲು ದುಬೈ ಶ್ರೀಮಂತ ಖರೀದಿ ಮಾಡಿದ್ದೇನು?
ದಾಂಪತ್ಯದಲ್ಲಿ ಪ್ರೇಮವೆಂಬ ದೀಪವೊಂದು ಪ್ರಾಂಜಲವಾಗಿ ಬೆಳಗುತ್ತಿದ್ದರೆ ಅದರ ಖುಷಿಯೇ ಬೇರೆ. ಪತಿ ಪತ್ನಿಗಾಗಿ, ಪತ್ನಿ ಪತಿಗಾಗಿ ಮಾಡುವ ತ್ಯಾಗಗಳು, ನಿರ್ವಹಿಸುವ ಕರ್ತವ್ಯಗಳು ಬೇರೆಯದ್ದೇ ಎತ್ತರಕ್ಕೆ ಹೋಗುತ್ತವೆ. ಹಲವರು ಪತ್ನಿಗಾಗಿ ನಮ್ಮ ಶಕ್ತಿ ಮೀರಿ ಅವಳು ಇಷ್ಟ ಪಡುವ ಎಲ್ಲವನ್ನೂ ಮಾಡುತ್ತಾರೆ. ಸಾಲ ಮಾಡಿಯಾದ್ರೂ ಆಕೆಯ ಇತಿಮಿತಿ ಬಯಕೆಗಳನ್ನು ಈಡೇರಿಸಿ ಅವಳ ಮುಖದಲ್ಲೊಂದು ಮಂದಹಾಸ ಮೂಡುವುದನ್ನು ಕಂಡು ಸಂತೋಷ ಪಡುತ್ತಾರೆ. ಆದ್ರೆ ದುಬೈನ ಶ್ರೀಮಂತನೊಬ್ಬ ತನ್ನ ಪತ್ನಿಯ ಬಯಕೆಯನ್ನು ಈಡೇರಿಸಲು ಏನು ಮಾಡಿದ ಅಂತ ನಿಮಗೆ ಗೊತ್ತಾದ್ರೆ ನಿಜಕ್ಕೂ ಅಚ್ಚರಿಪಡ್ತಿರಾ. ಪತ್ನಿ ಬಿಕನಿಯಲ್ಲಿ ಬಿಂದಾಸ್ ಆಗಿ ಓಡಾಡಲಿ, ಸಮುದ್ರದ ತೀರದಲ್ಲಿ ನಲಿದಾಡಲಿ ಅಂತ ಒಂದು ಖಾಸಗಿ ದ್ವೀಪವನ್ನು (Island) ಖರೀದಿ ಮಾಡಿದ್ದಾನೆ.
ಇದನ್ನೂ ಓದಿ: Russia-Ukraine ಯುದ್ಧಕ್ಕೆ ಭಯಾನಕ ತಿರುವು; ಉಕ್ರೇನ್ ಬೆನ್ನಿಗೆ ನಿಂತವಾ ಪಾಶ್ಚಾತ್ಯ ರಾಷ್ಟ್ರಗಳು? ಮುಂದೇನು..
View this post on Instagram
ಇಂತಹದೊಂದು ಅಪರೂಪದ ಘಟನೆಯನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು ಹೆಮ್ಮೆ ಪಡುತ್ತಿದ್ದಾರೆ 26 ವರ್ಷದ ಸೌದಿ ಅಲ್ ನಡಕ್. ಈ ಮಹಿಳೆ ಕಳೆದ ನಾಲ್ಕು ವರ್ಷದಿಂದ ದುಬೈನಲ್ಲಿದ್ದಾರೆ. ದುಬೈನ ಕೋಟ್ಯಾಧಿಪತಿಗಳಲ್ಲಿ ಒಬ್ಬನಾದ ಜಮಾಲ್ ಅಲ್ ನಡಕ್ರನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದಾರೆ. ಸೌದಿಗೆ ಒಂದು ಆಸೆಯಿತ್ತು. ಬಿಕನಿ ಧರಿಸಿ ಬೀಚ್ನಲ್ಲಿ ಬಿಂದಾಸ್ ಆಗಿ ಓಡಾಡಬೇಕು ಅನ್ನೋದು. ಆದ್ರೆ ದುಬೈನಲ್ಲಿ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆಯ ಪತಿ ಜಮಾಲ್ ಸೌದಿಗಾಗಿ ಒಂದು ಖಾಸಗಿ ದ್ವೀಪವನ್ನೇ ಖರೀದಿಸಿಬಿಟ್ಟಿದ್ದಾರೆ. 418 ಕೋಟಿ ರೂಪಾಯಿ ಕೊಟ್ಟು ಈ ದ್ವೀಪವನ್ನು ಖರೀದಿಸಲಾಗಿದೆ ಈ ವಿಷಯವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರದ್ದಾರೆ ಸೌದಿ. ವಿಡಿಯೋದಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟಿರುವ ಸೌದಿ. ವಿಮಾನದಲ್ಲಿ ಪ್ರಯಾಣ ಮಾಡುತ್ತಾ ಆ ಖಾಸಗಿ ದ್ವೀಪಕ್ಕೆ ಬಂದಿಳಿಯುವ ದೃಶ್ಯಗಳಿವೆ. ಇನ್ನು ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿರುವ ಸೌದಿ, ನೀವು ಬಿಕನಿ ಧರಿಸಲು ಇಷ್ಟ ಪಟ್ಟಿದ್ದೀರಿ, ನಿಮ್ಮ ಕೋಟ್ಯಾಧೀಶ್ವರ ಪತಿ ನಿಮಗಾಗಿ ಒಂದು ದ್ವೀಪವನ್ನೇ ಖರೀದಿ ಮಾಡಿ ಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ.. ಲಕ್ಕಿ ಡ್ರಾ ವಿಜೇತರಿಗೆ ಸಿಗಲಿದೆ ಕುರಿ, ಮೇಕೆ, ಜಾನಿ ವಾಕರ್ ಸ್ಕ್ಯಾಚ್ ವಿಸ್ಕಿ.. ನೀವು ಅದೃಷ್ಟ ಪರೀಕ್ಷಿಸಿ!
ಹಾಗಂತ ಜಮಾಲ ಇದೇ ಮೊದಲ ಬಾರಿ ಏನು ತಮ್ಮ ಪತ್ನಿಗಾಗಿ ಈ ರೀತಿಯ ದುಬಾರಿ ಗಿಫ್ಟ್ ಕೊಟ್ಟಿಲ್ಲ. ಈ ಹಿಂದೆ ಅವರು ಒಂದು ದಿನಕ್ಕೆ, ವಾರಕ್ಕೆ, ತಿಂಗಳಿಗೆ ತನಗಾಗಿ ಎಷ್ಟು ಖರ್ಚು ಮಾಡುತ್ತಾರೆ ಅನ್ನೋದನ್ನ ಸೌದಿ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ ಫೆರಾರಿ ಕಾರ್ ಹಾಗೂ ಡೈಮಂಡ್ ರಿಂಗ್ ತಂದುಕೊಟ್ಟಿದ್ದನ್ನು ಕೂಡ ಸೌದಿ ಹೇಳಿಕೊಂಡಿದ್ದರು. ಅವು ಎರಡೂ ತಲಾ 8.22 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದವು. ಅದು ಮಾತ್ರವಲ್ಲ.ಈ ಜೋಡಿ ಒಂದು ಕಾಲದಲ್ಲಿ ಡಿನ್ನರ್ ಡೇಟಿಂಗ್ಗಾಗಿಯೇ ನಿತ್ಯ 1 ಲಕ್ಷ ರೂಪಾಯಿ ಖರ್ಚು ಮಾಡುತ್ತಿತ್ತು. ಈಗ ದ್ವೀಪವನ್ನು ಖರೀದಿ ಮಾಡಿದ್ದನ್ನು ಕಂಡ ಸೌದಿ. ಇದು ಅವರ ಜೀವನದಲ್ಲಿ ಮಾಡಿರುವ ಅದ್ಭುತ ಹೂಡಿಕೆ ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ