newsfirstkannada.com

ಭೀಕರ ಚಂಡಮಾರುತಕ್ಕೆ ಮಕ್ಕಳು ಸೇರಿ 19 ಸಾವು.. ಧಾರಾಕಾರ ಮಳೆಗೆ ಜನ, ಜಾನುವಾರಗಳು ಸುಸ್ತೋ, ಸುಸ್ತು!

Share :

Published April 18, 2024 at 3:33pm

Update April 18, 2024 at 3:38pm

    ನಿತ್ಯದ ಕೆಲಸಗಳಿಗೆ ಹರಸಾಹಸ ಪಡುತ್ತಿರುವ ಸ್ಥಳೀಯ ಜನರು

    ಗುಡುಗು, ಮಿಂಚಿನ ಸಮೇತ ಇನ್ನು ಮಳೆಯಾಗೋ ಸಾಧ್ಯತೆ ಇದೆ

    75 ವರ್ಷಗಳಲ್ಲೇ ಅತಿ ಹೆಚ್ಚಿನ ಮಳೆ, ಗಾಬರಿಯಲ್ಲಿರುವ ಜನರು

ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ದುಬೈ ನಗರವೆಲ್ಲ ನದಿಯಂತೆ ಕಾಣುತ್ತಿದ್ದು ಜನರ ಬದುಕು ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ಓಡಾಡುವುದು ಇರಲಿ, ವಾಹನಗಳು ರಸ್ತೆಗೆ ಇಳಿದರೆ ಸಾಕು ಮುಳುಗಿ ಹೋಗುತ್ತಿದ್ದರಿಂದ ದಿನನಿತ್ಯದ ಕೆಲಸ ಕಾರ್ಯಗಳಿಗೂ ಜನ ಹರಸಾಹಸ ಪಡುತ್ತಿದ್ದಾರೆ.

ಯುಎಇ ಮತ್ತು ಬಹ್ರೇನ್‌ಗೆ ಚಂಡಮಾರುತಗಳು ಅಪ್ಪಳಿಸಿದ್ದರಿಂದ ಮಳೆ ಪ್ರಭಾವ ಇನ್ನಷ್ಟು ಹೆಚ್ಚಾಗಿದೆ. ಇದೇ ಚಂಡಮಾರುತ ಒಮಾನ್​ಗೆ ಅಪ್ಪಳಿಸಿದ್ದರಿಂದ ಮಕ್ಕಳು ಸೇರಿ ಸುಮಾರು 19 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ದುಬೈ ಏರ್​ಪೋರ್ಟ್​ನಲ್ಲಿನ ಕಟ್ಟಡದ ಮೇಲ್ಛಾವಣಿ ಕುಸಿದಿದ್ದರಿಂದ ಮಳೆ ನೀರು ಒಳಗೆ ಬೀಳುತ್ತಿದ್ದು ಜನರೆಲ್ಲ ಹೊರಗೆ ಬಂದಿದ್ದಾರೆ. ಗುಡುಗು, ಮಿಂಚಿನ ಸಮೇತ ಇನ್ನು ಮಳೆಯಾಗುವ ಸಾಧ್ಯತೆ ಇರುವುದರಿಂದ ನಗರದಲ್ಲೆಲ್ಲ ಅಲರ್ಟ್ ಘೋಷಿಸಿ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಲಾಗಿದೆ.

ದುಬೈನಲ್ಲಿ ಈಗ ಸುರಿಯುತ್ತಿರುವ ಮಳೆ ಕಳೆದ 75 ವರ್ಷಗಳಲ್ಲೇ ಅತಿ ಹೆಚ್ಚಿನ ಮಳೆಯಾಗಿದೆ. ರಸ್ತೆಗಳಲ್ಲಿ ಮಳೆ ನೀರಿನಲ್ಲಿ ಸಿಲುಕಿದ್ದವರ ರಕ್ಷಣೆ ಕಾರ್ಯ ನಡೆಯುತ್ತಿದೆ. ದುಬೈನ ಪ್ರಮುಖ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ತನ್ನೆಲ್ಲ ವಿಮಾನ ಪ್ರಯಾಣವನ್ನು ರದ್ದು ಮಾಡಿದೆ. ಮಳೆ ನಿಲ್ಲುವವರೆಗೆ ದುಬೈಗೆ ಯಾವುದೇ ವಿಮಾನಯಾನ ಸಂಚಾರ ಬೇಡ ಎಂದು ತಿಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ನದಿಯಂತಾದ ಏರ್​ಪೋರ್ಟ್​.. ಶಾಪಿಂಗ್ ಮಾಲ್,​ ಮೆಟ್ರೋ ನಿಲ್ದಾಣದಲ್ಲೆಲ್ಲ ನೀರೋ ನೀರು!

ಇನ್ನು ಬೆಕ್ಕೊಂದು ಮಳೆ ನೀರಿನಲ್ಲಿ ಯಾವ ಕಡೆ ಹೋಗಬೇಕು ಎನ್ನುವುದು ಗೊತ್ತಾಗದೇ ಕಾರಿನ ಬಾಗಿಲು ಹಿಡಿದುಕೊಂಡೇ ನೀರಿನಲ್ಲಿ ತೇಲಾಡಿಕೊಂಡು ನಿಂತಿತ್ತು. ಈ ವೇಳೆ ಅದನ್ನು ನೋಡಿದ ರಕ್ಷಣಾ ಸಿಬ್ಬಂದಿ ಬೆಕ್ಕನ್ನು ಕಾಪಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ

ಟೆಸ್ಲಾ ಮಾಡೆಲ್-Y ಹೆಸರಿನ ಕಾರು ಮಳೆ ನೀರಿನಲ್ಲೇ ಚಾಲನೆ ಮಾಡಲಾಗಿದ್ದು ಸೊಗಸಾಗಿ ಮುಂದೆ ಸಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೀಕರ ಮಳೆ ಜೊತೆಗೆ ಗಾಳಿಯು ವೇಗವಾಗಿ ಬೀಸುತ್ತಿದ್ದರಿಂದ ಕೆಲವೊಂದು ವಸ್ತುಗಳು ಮೇಲಕ್ಕೆ ಹಾರಿ ಹೋಗುತ್ತಿವೆ. ಜನರಂತೂ ಜೀವ ಉಳಿದರೆ ಸಾಕು ಎಂದು ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಚಂಡಮಾರುತಕ್ಕೆ ಮಕ್ಕಳು ಸೇರಿ 19 ಸಾವು.. ಧಾರಾಕಾರ ಮಳೆಗೆ ಜನ, ಜಾನುವಾರಗಳು ಸುಸ್ತೋ, ಸುಸ್ತು!

https://newsfirstlive.com/wp-content/uploads/2024/04/DUBAI_RAIN.jpg

Load More