newsfirstkannada.com

ದುಬೈನಲ್ಲಿ ಬರೋಬ್ಬರಿ 2.9 ಲಕ್ಷ ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ, ಅದ್ಭುತ ಫೋಟೋಗಳು..!

Share :

Published April 29, 2024 at 8:27am

    ಅಲ್ ಮಕ್ತೌಮ್ ಎಂಬ ಹೆಸರಿನ ಅಂತಾರಾಷ್ಟ್ರೀಯ ಏರ್​ಪೋರ್ಟ್..!

    ವಾರ್ಷಿಕವಾಗಿ 26 ಕೋಟಿ ಪ್ರಯಾಣಿಕರನ್ನ ನಿಭಾಯಿಸುವ ಸಾಮರ್ಥ್ಯ..!

    400 ವಿಮಾನ ಗೇಟ್‌ ಮತ್ತು 5 ಸಮಾನಾಂತರ ರನ್‌ವೇ ಹೊಂದಿದೆ..!

ಭೂಲೋಕದ ಸ್ವರ್ಗದಂತಿರೋ ಮರುಭೂಮಿ ನಾಡು ದುಬೈನಲ್ಲಿ ಮತ್ತೊಂದು ಅದ್ಭುತ ಲೋಕದ ಅನಾವರಣವಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 2.9 ಲಕ್ಷ ಕೋಟಿ ವೆಚ್ಚದಲ್ಲಿ ತಲೆ ಎತ್ತಿರೋ ವಿಶ್ವದ ಅತಿ ದೊಡ್ಡ ವಿಮಾನ ನಿಲ್ದಾಣ ದುಬೈನತ್ತ ಪ್ರವಾಸಿಗರನ್ನ ಕೈಬೀಸಿ ಕರೆದಿದೆ. ಹಾಗಿದ್ರೆ ಈ ದುಬಾರಿ ಏರ್​ಪೋರ್ಟ್​ನ ವಿಶೇಷತೆ ಏನು?

ದುಬೈ ಅಂದ್ರೆ ಎಲ್ಲರ ಮನಸಲ್ಲೂ ಒಂದು ಅದ್ಭುತ ಲೋಕ ಅನಾವರಣ ಆಗುತ್ತದೆ.. ದುಬೈ ಅಂದಾಕ್ಷಣ ದೊಡ್ಡ ದೊಡ್ಡ ಗಗನ ಚುಂಬಿ ಕಟ್ಟಡಗಳು ಕಣ್ಮುಂದೆ ಬರುತ್ತವೆ. ದುಬೈ ಅಂದ್ರೆ ಸ್ವರ್ಗ, ದುಬೈ ಅಂದ್ರೆ ಸೌಂದರ್ಯ ಹೀಗೆ ಹಲವು ಬಗೆಗಳಲ್ಲಿ ದುಬೈ ನಾಡನ್ನ ಬಣ್ಣಿಸಲಾಗುತ್ತೆ. ಇಂತಹ ಹಲವು ವಿಶೇಷತೆಗಳನ್ನು ಹೊಂದಿರೋ ದುಬೈಗೆ ಸದ್ಯ ಮತ್ತೊಂದು ಹೆಗ್ಗಳಿಕೆಯ ಕಿರೀಟ ಮುಡಿಯೇರಿದೆ.

ಇದನ್ನೂ ಓದಿ:ಅಬ್ಬಾಬ್ಬ..! ಡೇರಿಲ್ ಮಿಚೆಲ್ ನಿನ್ನೆ ಹಿಡಿದ ಕ್ಯಾಚ್​ಗಳು ಎಷ್ಟು ಗೊತ್ತಾ? Catches Win Matches ಅನ್ನೋದು ಪ್ರೂವ್..!

ದುಬೈನಲ್ಲಿ ತಲೆ ಎತ್ತಲಿದೆ ವಿಶ್ವದ ಅತಿದೊಡ್ಡ ಏರ್​ಪೋರ್ಟ್
ಮರುಭೂಮಿ ನಾಡು ಎಂದೇ ಖ್ಯಾತಿ ಹೊಂದಿರೋ ದುಬೈನಲ್ಲಿ ಶೀಘ್ರದಲ್ಲೇ ವಿಶ್ವದ ಅತಿ ದೊಡ್ಡ ವಿಮಾನ ನಿಲ್ದಾಣವೊಂದು ತಲೆ ಎತ್ತಲಿದೆ. ಈ ಬಗ್ಗೆ ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಮಾಹಿತಿ ಹಂಚಿಕೊಂಡಿದ್ದಾರೆ

ಅಲ್ ಮಕ್ತೌಮ್ ಏರ್​ಪೋರ್ಟ್..!​
ಅಲ್ ಮಕ್ತೌಮ್ ಎಂಬ ಹೆಸರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರದಲ್ಲೇ ದುಬೈನಲ್ಲಿ ಸೇವೆ ಆರಂಭಿಸಲಿದೆ. ಸುಮಾರು ರೂ. 2.9 ಲಕ್ಷ ಕೋಟಿ ವೆಚ್ಚದಲ್ಲಿ ಈ ವಿಮಾನ ನಿಲ್ದಾಣವನ್ನ ನಿರ್ಮಾಣ ಮಾಡಲು ಅಂದಾಜಿಸಲಾಗಿದೆ. ಅಂದ್ರೆ ಕರ್ನಾಟಕ ರಾಜ್ಯ ಬಟೆಜ್​ನ ಮುಕ್ಕಾಲು ಭಾಗ.. ಈ ವಿಮಾನ ನಿಲ್ದಾಣವು ವಾರ್ಷಿಕವಾಗಿ 26 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.. ವಿಮಾನ ನಿಲ್ದಾಣವು 400 ವಿಮಾನ ಗೇಟ್‌ಗಳು ಮತ್ತು 5 ಸಮಾನಾಂತರ ರನ್‌ವೇಗಳನ್ನು ಒಳಗೊಂಡಿರಲಿದೆ. ಈ ವಿಮಾನ ನಿಲ್ದಾಣವು ಲಾಜಿಸ್ಟಿಕ್ಸ್ ಮತ್ತು ವಾಯು ಸಾರಿಗೆ ವಲಯದಲ್ಲಿ ವಿಶ್ವದ ಪ್ರಮುಖ ಕಂಪನಿಗಳಿಗೆ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ:Breaking: ಬಿಜೆಪಿ ಹಿರಿಯ ನಾಯಕ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನಿಧನ

ಒಟ್ನಲ್ಲಿ ಗಗನ ಚುಂಬಿ ಕಟ್ಟಡಗಳು, ಕಣ್ಣು ಕೋರೈಸುವ ಸೊಬಗು, ಸ್ವಚ್ಛತೆ ಮತ್ತು ಶಿಸ್ತಿಗೆ ಹೆಸರಾಗಿರುವ ದುಬೈಗೆ ಸದ್ಯ ಅಲ್ ಮಕ್ತೌಮ್ ಏರ್​ಪೋರ್ಟ್​ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಶೀಘ್ರದಲ್ಲೇ ಪಾತ್ರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಬೈನಲ್ಲಿ ಬರೋಬ್ಬರಿ 2.9 ಲಕ್ಷ ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ, ಅದ್ಭುತ ಫೋಟೋಗಳು..!

https://newsfirstlive.com/wp-content/uploads/2024/04/Dubai-Airport-2.jpg

Load More