/newsfirstlive-kannada/media/post_attachments/wp-content/uploads/2024/08/kohli-3.jpg)
ಕಿಂಗ್​ ಕೊಹ್ಲಿಯ ಆಟಕ್ಕೆ ಕ್ಲೀನ್​ಬೋಲ್ಡ್​ ಆದ ಎಲ್ಲರಿಗೂ ಒಮ್ಮೆ ಕೊಹ್ಲಿಯನ್ನ ಭೇಟಿಯಾಗಬೇಕು, ಮಾತನಾಡಿಸಬೇಕು ಅನ್ನೋ ಆಸೆಯಿರುತ್ತೆ. ಒಂದೇ ಒಂದು ಫೋಟೋ ತೆಗೆದುಕೊಳ್ಳಬೇಕು ಅನ್ನೋ ಕನಸಿರುತ್ತೆ. ಆ ಕನಸನ್ನ ನನಸು ಮಾಡಿಕೊಳ್ಳಲು ಹೋಗಿ ಕೆಲವ್ರು ಮಕ್ಕರ್​ ಆಗಿದ್ದಾರೆ. ಆ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ ನೋಡಿ.
ವಿರಾಟ್​ ಕೊಹ್ಲಿ.. ತನ್ನ ಮಾಂತ್ರಿಕ ಬ್ಯಾಟಿಂಗ್​ನಿಂದ ವಿಶ್ವವನ್ನೇ ಗೆದ್ದ ವೀರ. ನೀರು ಕುಡಿದಷ್ಟು ಸುಲಭಕ್ಕೆ ಶತಕ ಸಿಡಿಸಿ, ಟನ್​ಗಟ್ಟಲೇ ರನ್​ಗಳಿಸಿ, ದಾಖಲೆಗಳನ್ನೆಲ್ಲಾ ದೂಳಿಪಟ ಮಾಡಿ ಕ್ರಿಕೆಟ್​ ಲೋಕದಲ್ಲಿ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿರೋ ಸುಲ್ತಾನ!. ವಿಶ್ವದೆಲ್ಲೆಡೆ ಈ ಮಾಂತ್ರಿಕನ ಆಟಕ್ಕೆ ಕ್ಲೀನ್​ಬೋಲ್ಡ್​ ಆದ ಫ್ಯಾನ್ಸ್​ ಇದ್ದಾರೆ. ಅವರೆಲ್ಲರಿಗೂ ಕೊಹ್ಲಿಯನ್ನ ಭೇಟಿಯಾಗಿ, ಫೋಟೋ ತೆಗೆದುಕೊಳ್ಳೋ ಆಸೆ ಇರುತ್ತೆ. ಆ ಆಸೆ ಈಡೇರಿಸಿಕೊಳ್ಳಲು ಹೋಗಿ ಕೆಲವ್ರು ಮಕ್ಕರ್​ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/Dublicate-Kohli.jpg)
ರೆಸ್ಟೋರೆಂಟ್​ಗೆ ‘ಕೊಹ್ಲಿ’ ಸರ್​​​ಪ್ರೈಸ್​​ ಎಂಟ್ರಿ..!
ಕ್ರಿಕೆಟರ್​ ವಿರಾಟ್​ ಕೊಹ್ಲಿ ದೇಶದ ಹಲವು ನಗರಗಳಲ್ಲಿ ಒನ್​ 8 ಕಮ್ಯೂನ್​ ರೆಸ್ಟೋರೆಂಟ್​ಗಳನ್ನ ತೆರೆದಿದ್ದಾರೆ. ಕೊಹ್ಲಿಯನ್ನ ಮೀಟ್​ ಮಾಡೋಕೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಅಟ್ಲೀಸ್ಟ್​ ಅವ್ರ ರೆಸ್ಟೊರೆಂಟ್​ಗಾದ್ರೂ ಹೋಗೋಣ ಅಂತಾ ಹೋಗೋ​ ಫ್ಯಾನ್ಸ್​ ಇದ್ದಾರೆ. ಹೀಗೆ ಕೊಹ್ಲಿ ರೆಸ್ಟೋರೆಂಟ್​ಗೆ CASUAL​ ಆಗಿ ಹೋದ ಫ್ಯಾನ್ಸ್​ಗೆ ಸರ್​​ಪ್ರೈಸ್​ ಶಾಕ್​ ಸಿಕ್ಕಿದೆ.
ಇದ್ದಕ್ಕಿಂದ್ದಂತೆ ನೆಚ್ಚಿನ ಆಟಗಾರ ಕಣ್ಣೆದುರು ಬಂದ್ರೆ ಏನಾಗಬೇಡ. ಖುಷಿ ಪಡಬೇಕೋ.. ನಗಬೇಕೋ.. ಫೋಟೋ ತೆಗೆದುಕೊಳ್ಳಬೇಕೋ.. ಮಾತನಾಡಿಸಬೇಕೋ.. ಒಂದೇ ಕ್ಷಣಕ್ಕೆ ತಲೆಯಲ್ಲಿ ಸಾವಿರಾರು ಪ್ರಶ್ನೆಗಳು ಹುಟ್ಟಿ ಕನ್ಫೂಶನ್​ ಶುರುವಾಗುತ್ತಲ್ಲಾ.. ಹಾಗೇ ಆಗಿತ್ತು ನೋಡಿ ಅಲ್ಲಿಗೆ ಬಂದವರ ಪರಿಸ್ಥಿತಿ.
ಕೊಹ್ಲಿ ಥರಾನೇ.. ಆದ್ರೆ ಕೊಹ್ಲಿ ಅಲ್ಲ..!
ಹೌದು. ಅಸಲಿಗೆ ಹೋಟೆಲ್​ಗೆ ಬಂದಿದ್ದು ಒರಿಜಿನಲ್​​ ಕೊಹ್ಲಿ ಅಲ್ಲವೇ ಅಲ್ಲ. ಕೊಹ್ಲಿಯ ತದ್ರೂಪಿ ಮಿಸ್ಟರ್​ ಡೂಪ್ಲಿಕೇಟ್​ ಇವ್ರು. ಈ ಸತ್ಯ ಗೊತ್ತಾದ ಮೇಲೆ ಫ್ಯಾನ್ಸ್​ ಫುಲ್​ ಮಕ್ಕರ್​​ ಆಗ್ಬಿಟ್ರು.
/newsfirstlive-kannada/media/post_attachments/wp-content/uploads/2024/08/kohli-3.jpg)
ಯಾರೀ ಕೊಹ್ಲಿ ತದ್ರೂಪಿ.? ಹಿನ್ನೆಲೆ ಏನು.?
ಅಂದ ಹಾಗೇ ಈ ಡೂಪ್ಲಿಕೇಟ್​​ ವಿರಾಟ್ ಕೊಹ್ಲಿ, ಚಂಡೀಗಢ ಮೂಲದ ಕಾರ್ತಿಕ್​ ಶರ್ಮಾ ಅಂತಾ. ವೃತ್ತಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರೋ ಇವ್ರು, ಕೊಹ್ಲಿ ಹಾರ್ಡ್​ ಕೋರ್​​ ಫ್ಯಾನ್​​. ಟೀಮ್​ ಇಂಡಿಯಾದ ಎಲ್ಲಾ ಪಂದ್ಯಗಳ ವೇಳೆ ಮೈದಾನಕ್ಕೆ ತೆರಳೋ ಈ ಮಿಸ್ಟರ್​ ಡೂಪ್ಲಿಕೇಟ್​, ಕೊಹ್ಲಿಗೆ ಚಿಯರ್​ ಮಾಡ್ತಿದ್ದಾರೆ. ಕಾರ್ತಿಕ್​ ಮಾತ್ರವಲ್ಲ. ಇದೇ ತರ ಇನ್ನೂ ಹಲವು ಡೂಪ್ಲಿಕೇಟ್​ ಕೊಹ್ಲಿಗಳಿದ್ದಾರೆ.
ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ BCCI: ಹಳೆಯ ನಿಯಮ ಮತ್ತೆ ಜಾರಿಗೆ, ಏನದು?
/newsfirstlive-kannada/media/post_attachments/wp-content/uploads/2024/08/Dublicate-Kohli-1.jpg)
ಬಾಂಗ್ಲಾದೇಶ ಪ್ರೊಟೆಸ್ಟ್​ನಲ್ಲೂ ‘ವಿರಾಟ್​ ಕೊಹ್ಲಿ’.!
ಒರಿಜಿನಲ್​ ಅಲ್ಲ.. ಡೂಪ್ಲಿಕೇಟ್​ ಕೊಹ್ಲಿ. ರಾಜಕೀಯ ಅರಾಜಕತೆ ಸೃಷ್ಟಿಯಾಗಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಜೋರಾಗಿ ನಡೆದಿತ್ತು. ಈ ಪ್ರತಿಭಟನೆಯಲ್ಲೂ ಡೂಪ್ಲಿಕೇಟ್​ ಕೊಹ್ಲಿಯ ದರ್ಶನವಾಗಿತ್ತು. ಪತ್ನಿ ಅನುಷ್ಕಾಗೂ ಕನ್ಫ್ಯೂಸ್​​ ಆಗ್ಬೇಕು​​. ಆ ಮಟ್ಟಿಗೆ ಡಿಟ್ಟೋ ಕೊಹ್ಲಿ ಥರಾ ಕಾಣ್ತಿದ್ದ ಆ ವ್ಯಕ್ತಿ.
ಬಾಲಿವುಡ್​​ನಲ್ಲಿ ಬಣ್ಣ ಹಚ್ಚಿದ್ದ ಡೂಪ್ಲಿಕೇಟ್​ ಕೊಹ್ಲಿ.!
2019ರಲ್ಲಿ ರಿಲೀಸ್​ ಆದ ಬಾಲಿವುಡ್​ನ ದಿ ಜೋಯಾ ಫ್ಯಾಕ್ಟರ್​ ಚಿತ್ರದ ಸೀನ್​ ಇದು. ಇಲ್ಲಿ ಕಾಣಿಸಿಕೊಂಡಿರೋದು ಕೊಹ್ಲಿ ಅಲ್ಲ.. ಗೌರವ್​ ಅರೋರಾ ಅಂತಾ ಕೊಹ್ಲಿಯ ಬಿಗ್ಗೆಸ್ಟ್​ ಫ್ಯಾನ್​​. ಥೇಟ್​​ ಕೊಹ್ಲಿಯಂತೆ ಕಾಣೋ ಈತನನ್ನ ನೋಡಲು ಫ್ಯಾನ್ಸ್​ ಮುಗಿಬೀಳ್ತಾರೆ. ಇದರಿಂದ ಸಿನೆಮಾಗಳಲ್ಲಿ ಅವಕಾಶ ಸಿಕ್ಕಿದ್ದಲ್ಲದೇ, ಯೂಟ್ಯೂಬ್​ ಚಾನೆಲ್​ ತೆರೆದಿದ್ದು 7.32 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ.
ತದ್ರೂಪಿಯನ್ನ ಕಂಡು ಸ್ಟನ್​ ಆಗಿದ್ರು ವಿರಾಟ್​.!
ನೋಡಿದ್ರಲ್ಲಾ. ಈ ಡೂಪ್ಲಿಕೇಟ್​ ಕೊಹ್ಲಿಗಿರೋ ಕ್ರೇಜ್​ ಕಂಡು ಕೊಹ್ಲಿಯೇ ಸ್ಟನ್​ ಆಗಿದ್ದನ್ನ.. ಈತನ ಹೆಸ್ರು ಪ್ರಿನ್ಸ್​ ಬಡೋನಿಯಾ ಅಂತಾ. ಆರ್​​ಸಿಬಿ ಹಾಗೂ ಕೊಹ್ಲಿಯ ಸೂಪರ್​ಫ್ಯಾನ್​.
/newsfirstlive-kannada/media/post_attachments/wp-content/uploads/2024/08/kohli-4.jpg)
ಪ್ರಾಂಕ್​​ಸ್ಟಾರ್​​ ಆಗಿ ಬದಲಾದ ಡೂಪ್ಲಿಕೇಟ್​​ ಕೊಹ್ಲಿ.!
ಎಲ್ಲಾ ಡೂಪ್ಲಿಕೇಟ್​​ ಕೊಹ್ಲಿಗಳದ್ದು ಒಂದು ಕಥೆಯಾದ್ರೆ, ಈತನದ್ದು ಇನ್ನೊಂದು ಕಥೆ. ಕೊಹ್ಲಿ ಥರ ಕಾಣೋದನ್ನೇ ಬಂಡವಾಳ ಮಾಡಿಕೊಂಡಿರೋ ಈತ, ಒಂದು ಟೀಮ್​​​ ರೆಡಿ ಮಾಡಿಕೊಂಡು ಪಬ್ಲಿಕ್​ ಅಲ್ಲಿ ಪ್ರಾಂಕ್ ಮಾಡ್ತಾನೆ. ಇದರಿಂದ ಮಜಾ ತಗೋದಲ್ಲದೇ, ಯೂಟ್ಯೂಬ್​ಗೆ ಅಪ್​ಲೋಡ್​ ಮಾಡಿ ಹಣವನ್ನೂ ಗಳಿಸ್ತಾನೆ.
ಇವರಿಷ್ಟೇ ಅಲ್ಲ. ಹೀಗೆ ಇನ್ನೂ ಹಲವು ಡೂಪ್ಲಿಕೇಟ್​ ಕೊಹ್ಲಿಗಳಿದ್ದಾರೆ. ವಿರಾಟ್​ ಜನಪ್ರೀಯತೆ ಇವ್ರಿಗೂ ಹೆಸರು ತಂದುಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us