/newsfirstlive-kannada/media/post_attachments/wp-content/uploads/2024/07/Arun-2.jpg)
ರೀಲ್ಸ್ ಶೋಕಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಅರುಣ್ ಕಟಾರೆ ಬಂಧನವಾಗಿದೆ. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್ವುಡ್ ಟೆಕ್ನಿಷನ್ಗೂ ಪೊಲೀಸರು ನೊಟೀಸ್ ನೀಡಿದ್ದಾರೆ.
ಕಬ್ಜ, ಮಫ್ತಿ ಸೇರಿದಂತೆ ಹಲವು ಸಿನಿಮಾಗಳ ಶೂಟಿಂಗ್ಗಾಗಿ ಡಮ್ಮಿ ವೆಪನ್ ಸಪ್ಲೆ ಮಾಡುತ್ತಿದ್ದ ಟೆಕ್ನಿಷನ್ಗೆ ಪೊಲೀಸರು ನೊಟೀಸ್ ನೀಡಿದ್ದಾರೆ. ಟೆಕ್ನಿಷನ್ ಸಾಹಿಲ್ ಡಮ್ಮಿ ವೆಪನ್ ಸಪ್ಲೆ ಮಾಡುತ್ತಿದ್ದು, ಆತನಿಗೆ ನೊಟೀಸ್ ಕಳುಹಿಸಿದ್ದಾರೆ.
ಇದನ್ನೂ ಓದಿ: ಇಂದು ಯುವ ಡಿವೋರ್ಸ್ ಅರ್ಜಿ ವಿಚಾರಣೆ.. ಕೋರ್ಟ್ಗೆ ತೆರಳುವ ಮುನ್ನ ಹೀಗೊಂದು ಪೋಸ್ಟ್ ಹಂಚಿಕೊಂಡ ಶ್ರೀದೇವಿ!
ಅರುಣ್ ಕಟಾರೆ ರೀಲ್ಸ್ಗಾಗಿ ಗನ್ ಮ್ಯಾನ್, ಐಷಾರಾಮಿ ಕಾರುಗಳು, ಬಾಡಿಗಾರ್ಡ್ಸ್ ಜೊತೆಗೆ ವೆಪನ್ ಇಟ್ಕೊಂಡು ಶೋಕಿ ಮಾಡುತ್ತಿದ್ದನು. ಈ ಹಿನ್ನಲೆ ಅರುಣ್ನನ್ನ ಕೊತ್ತನೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಬರಲಿ ಮಳೆ.. ಹರಿಯಲಿ ಹೊಳೆ.. KRS ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಇಳಿಕೆ.. ಇಂದು ಎಷ್ಟಿದೆ ನೀರಿನ ಮಟ್ಟ?
ಅರುಣ್ ಕಟಾರೆ AK47 ಮಾದರಿ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಕೊಟ್ಟಿದ್ದನು. ಈತ ಶೋಕಿಗೆ ಬೆದರಿದ್ದ ಸಾರ್ವಜನಿರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕೊತ್ತನೂರು ಪೊಲೀಸರು ಅರುಣ್ ಕಟಾರೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಕಲಿ ಗನ್ ಹಿಡಿದು ಏರಿಯಾದಲ್ಲಿ ಪೋಸ್ ಕೊಟ್ಟಿದ್ದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ: ವಿಶ್ವಕಪ್ ಹೊತ್ತು ಭಾರತಕ್ಕೆ ಬಂದ ರೋಹಿತ್ ಪಡೆ.. ತೆರೆದ ಬಸ್ನಲ್ಲಿ ಮೆರವಣಿಗೆ, ಟ್ರೋಫಿ ಜೊತೆಗೆ ಸಂಭ್ರಮಾಚರಣೆ
ಬಳಿಕ ಡಮ್ಮಿ ಗನ್ಗಳನ್ನ ಸ್ಯಾಂಡಲ್ ವುಲ್ನ ಟೆಕ್ನಿಷನ್ ಸಾಹಿಲ್ನಿಂದ ಪಡೆದುಕೊಂಡಿರುವುದಾಗಿ ಹೇಳಿದ್ದಾನೆ. ಈ ಹಿನ್ನಲೆ ಪೊಲೀಸರು ಸಾಹಿಲ್ ಗೆ ನೊಟೀಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ