ಟೆಸ್ಟ್​​ನಲ್ಲಿ ಒಂದೇ ಚೆಂಡಿನಿಂದ 80 ಓವರ್​ ಮಾಡಬೇಕಾ..? ಡ್ಯೂಕ್ ಬಾಲ್ ಬಗ್ಗೆ ಗಿಲ್, ಸ್ಟೋಕ್ಸ್ ಅಸಮಾಧಾನ!

author-image
Bheemappa
Updated On
ಟೆಸ್ಟ್​​ನಲ್ಲಿ ಒಂದೇ ಚೆಂಡಿನಿಂದ 80 ಓವರ್​ ಮಾಡಬೇಕಾ..? ಡ್ಯೂಕ್ ಬಾಲ್ ಬಗ್ಗೆ ಗಿಲ್, ಸ್ಟೋಕ್ಸ್ ಅಸಮಾಧಾನ!
Advertisment
  • ಟೆಸ್ಟ್​ನ 2 ದಿನದಲ್ಲಿ 7 ಬಾರಿ ಡ್ಯೂಕ್ ಬಾಲ್ ಬದಲಾವಣೆ
  • ಡ್ಯೂಕ್ ಬಾಲ್​ ಬಗ್ಗೆ ಇಂಗ್ಲೆಂಡ್ ತಂಡಕ್ಕೂ ಅಸಮಾಧಾನ!
  • ಮೈದಾನದಲ್ಲೇ ಕೋಪಗೊಂಡಿದ್ದ ರಿಷಭ್ ಪಂತ್, ಸಿರಾಜ್

ಇಂಡೋ -ಇಂಗ್ಲೆಂಡ್ ನಡುವಿನ ಲಾರ್ಡ್ಸ್​ ಟೆಸ್ಟ್​ ಭರದಿಂದ ಸಾಗ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಆಟಗಾರರ ಪ್ರದರ್ಶನಕ್ಕಿಂತ ಬಾಲ್​ನದ್ದೇ ಹೆಚ್ಚು ಚರ್ಚೆಯಾಗ್ತಿದೆ. ಗುಣಮಟಕ್ಕೆ ಕೇರ್ ಆಫ್ ಅಡ್ರೆಸ್ ಆಗಿದ್ದ ಡ್ಯೂಕ್​ ಬಾಲ್​, ವಿವಾದದ ಕೇಂದ್ರ ಬಿಂದುವಾಗಿದ್ದೇಕೆ?.

ಇಂಡೋ, ಇಂಗ್ಲೆಂಡ್ ನಡುವಿನ ಟೆಸ್ಟ್​ ಸರಣಿಯಲ್ಲಿ ಯಾರ ಪರ್ಫಾಮೆನ್ಸ್ ಹೇಗಿದಿಯೋ ಏನೋ ಆದ್ರೆ, ಡ್ಯೂಕ್​ ಬಾಲ್ ಮಾತ್ರ, ಸರಣಿಯ ಟಾಕ್ ಆಫ್​ ದಿ ಟೌನ್ ಆಗಿದೆ. ಗುಣಮಟ್ಟಕ್ಕೆ ಹೆಸರು ವಾಸಿಯಾಗಿರುವ ಇದೇ ಡ್ಯೂಕ್​ ಬಾಲ್, ಬಗ್ಗೆ ಅಪಸ್ವರಗಳು ಎದ್ದಿವೆ. ಭಾರತ, ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಬಾಲ್​​ ವಿವಾದದ ಕೇಂದ್ರ ಬಿಂದುವಾಗಿದೆ.

publive-image

10 ಓವರ್​​ಗಳಿಗೆ ಆಕಾರ ಕಳೆದುಕೊಳ್ತಿದೆ ಚೆಂಡು..!

ಡ್ಯೂಕ್​ ಬಾಲ್​​​​ ಅಂದ್ರೆ, ಗುಣಮಟ್ಟ. ಗುಣಮಟ್ಟವಂದ್ರೆ, ಡ್ಯೂಕ್ ಬಾಲ್ ಅಂತಾರೆ. ಆದ್ರೆ, ಡ್ಯೂಕ್​ ಬಾಲ್​, 70, 80 ಓವರ್ ಅಲ್ಲ, ಕೇವಲ 10 ಓವರ್​​ ಬೌಲಿಂಗ್​​ ಮಾಡುವಷ್ಟರಲ್ಲೇ ಶೇಪ್ ಕಳೆದುಕೊಳ್ತಿದೆ. ದಿನದಾಟ ಆರಂಭವಾದ ಬಳಿಕ ಕನಿಷ್ಠ 80 ಓವರ್​​ಗಳ ತನಕ ಹೊಸ ಬಾಲ್ ನೀಡಲ್ಲ. ಆದ್ರೆ, ಲಾರ್ಡ್ಸ್​ ಟೆಸ್ಟ್​ನ 2ನೇ ದಿನದಾಟದಲ್ಲಿ ಬಾಲ್​ ಜಸ್ಟ್​ 10.4 ಓವರ್ ಹಳೆಯದಾಗಿತ್ತು. ಆಗಲೇ ಬಾಲ್​ ಆಕಾರವನ್ನ ಕಳೆದುಕೊಂಡಿತ್ತು. ಆಗ ಶುಭ್​ಮನ್, ಬಾಲ್​​ ಬದಲಿಸುವಂತೆ ಅಂಪೈರ್‌ಗೆ ಮನವಿ ಮಾಡಿದ್ದರು. ನಾಯಕ ಮನವಿ ಸ್ವೀಕರಿಸಿದ ಅಂಪೈರ್​, ರಿಂಗ್‌ನಲ್ಲಿ ಚೆಂಡನಿಟ್ಟು ಪರೀಕ್ಷಿಸಿದರು.

ಬಾಲ್​​ ಶೇಪ್​ ಕಳೆದುಕೊಂಡಿದ್ದರಿಂದ ಟೀಮ್ ಇಂಡಿಯಾ ಬದಲಿ ಚೆಂಡು ಪಡೆಯಿತು. ಆದ್ರೆ, ಬಾಲ್ ನೋಡಿ ಕ್ಯಾಪ್ಟನ್​ ಗಿಲ್, ಅಂಪೈರ್​ ಜೊತೆ ವಾಗ್ವಾದಕ್ಕಿಳಿದರು. ಯಾಕಂದ್ರೆ, ಬದಲಿ ಬಾಲ್​ ಕೂಡ ರೂಪಕಳೆದುಕೊಂಡಿತ್ತು. ಆದ್ರೆ, ಗಿಲ್‌ ಮನವಿ ತಿರಸ್ಕರಿಸಿದ ಅಂಪೈರ್​, ಪಂದ್ಯ ಮುಂದುವರಿಸುವ ಸೂಚನೆ ನೀಡಿದರು. ಇದಕ್ಕೆ ಕುಪಿತಗೊಂಡ ಮೊಹ್ಮಮದ್‌ ಸಿರಾಜ್‌, ಇದು 10 ಓವರ್‌ಗಳಿಗೆ ಬಳಸಿರುವ ಚೆಂಡಾ ಎಂದು ಪ್ರಶ್ನಿಸಿದರು.

ಒಂದಲ್ಲ.. ಎರಡಲ್ಲ.. 2 ದಿನದಲ್ಲೇ 7 ಬಾರಿ ಬದಲಾವಣೆ..!

ಟೆಸ್ಟ್​​ ಕ್ರಿಕೆಟ್​ ಪ್ರತಿ 80 ಓವರ್​ಗಳಿಗೆ ಹೊಸ ಬಾಲ್​ ನೀಡಲಾಗುತ್ತೆ. ಇದರ ಮಧ್ಯೆ ಬಾಲ್​ ಶೇಪ್​ ಕಳೆದುಕೊಂಡರೇ ಅಷ್ಟೇ ಓವರ್​ ಹಳೆಯದಾದ ಬಾಲ್​ ನೀಡಲಾಗುತ್ತೆ. ಅಬ್ಬಬ್ಬಾ ಅಂದ್ರೆ, ಒಂದು ಅಥವಾ 2 ಬಾರಿ ಬದಲಿ ಬಾಲ್​ ನೀಡ್ತಾರೆ. ಆದ್ರೆ, ಲಾರ್ಡ್ಸ್​ ಟೆಸ್ಟ್​ನ ಮೊದಲ 2 ದಿನಗಳಲ್ಲೇ 7 ಬಾರಿ ಬಾಲ್​ ಬದಲಾಯಿಸಲಾಗಿದೆ. ಇದು ಡ್ಯೂಕ್​​ ಬಾಲ್ ಕ್ವಾಲಿಟಿಯ ಬಗ್ಗೆ ಪ್ರಶ್ನೆ ಉದ್ಬವಿಸಿವಂತೆ ಮಾಡಿದೆ. ಟೀಮ್ ಇಂಡಿಯಾ ಮಾತ್ರವಲ್ಲ. ಸ್ವತಃ ಇಂಗ್ಲೆಂಡ್ ಸಹ ಡ್ಯೂಕ್​ ಬಾಲ್ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತಿದೆ. ಈ ಕುರಿತು ಮಾಜಿ ಕ್ರಿಕೆಟರ್​ಗಳು ಕೂಡ ಕೆಂಡಕಾರಿದ್ದಾರೆ.

80 ಓವರ್​​​ ಇರಬೇಕು.. 10 ಅಲ್ಲ..!

ಕ್ರಿಕೆಟ್ ಬಾಲ್​​​, ಉತ್ತಮ ವಿಕೆಟ್ ಕೀಪರ್​ನಂತಿರಬೇಕು. ಚೆಂಡಿನ ಬಗ್ಗೆ ನಾವು ಹೆಚ್ಚು ಮಾತನಾಡಬೇಕಿದೆ. ಏಕೆಂದರೆ ಹೆಚ್ಚೆಚ್ಚು ಸಮಸ್ಯೆಯಾಗಿದೆ. ಪ್ರತಿ ಇನ್ನಿಂಗ್ಸ್​ನಲ್ಲಿ ಬಹುತೇಕ ಬದಲಾಯಿಸಲಾಗ್ತಿದೆ. ಇದು ಸ್ವೀಕಾರಾರ್ಹವಲ್ಲ. ಇದು 5 ವರ್ಷಗಳಿಂದ ಡ್ಯೂಕ್‌ ಬಾಲ್​​ಗಳಲ್ಲಿ ಸಮಸ್ಯೆ ಇದೆ. ಅದನ್ನ ಸರಿಪಡಿಸಬೇಕಾಗಿದೆ. ಒಂದು ಚೆಂಡು 80 ಓವರ್‌ಗಳ ತನಕ ಇರಬೇಕು. 10 ಓವರ್​ ಅಲ್ಲ.

ಸ್ಟುವರ್ಟ್ ಬ್ರಾಡ್, ಮಾಜಿ ಕ್ರಿಕೆಟರ್​

2ನೇ ಟೆಸ್ಟ್​ ಬಳಿಕ ಅಸಮಾಧಾನ ವ್ಯಕ್ತಪಡಿಸಿದ್ದ ಕ್ಯಾಪ್ಟನ್ ಗಿಲ್‌..!

ಡ್ಯೂಕ್​ ಬಾಲ್​ ಬಗ್ಗೆ ಟೀಮ್ ಇಂಡಿಯಾ ಆರಂಭದಲ್ಲೇ ಅಸಮಾಧಾನ ಹೊರಹಾಕಿತ್ತು. ಈ ವಿಚಾರವಾಗಿ ವೈಸ್ ಕ್ಯಾಪ್ಟನ್ ರಿಷಭ್ ಪಂತ್, ಅಂಪೈರ್ ಜೊತೆ ವಾಗ್ವಾದಕ್ಕಿಳಿದಿದ್ರು. ಬಾಲ್ ಎಸೆದು ಸಿಟ್ಟು ಹೊರಹಾಕಿದರು. ಎಡ್ಜ್​ಬಾಸ್ಟನ್‌ ಟೆಸ್ಟ್​ ಬಳಿಕ ಶುಭಮನ್‌ ಗಿಲ್‌, ಪ್ರೆಸ್ ಮೀಟ್​ನಲ್ಲೇ ಡ್ಯೂಕ್‌ ಬಾಲ್‌ ಬಗ್ಗೆ ಅಪಸ್ವರ ಹೊರ ಹಾಕಿದರು.

ಬೌಲರ್‌ಗಳಿಗೆ ಕಠಿಣವಾಗಿದೆ. ವಿಕೆಟ್‌ಗಿಂತ ಚೆಂಡು ತುಂಬಾ ಕಠಿಣವಾಗಿದೆ ಎಂದು ನಾನು ಬಾವಿಸುತ್ತೇನೆ. ಏಕೆಂದರೆ ಚೆಂಡು ಬಹುಬೇಗ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ. ಇಲ್ಲಿನ ಪಿಚ್‌ನಿಂದ ಈ ರೀತಿ ಆಗುತ್ತಿದೆಯಾ? ಅಥವಾ ಬೇರೆ ಯಾವ ಕಾರಣಕ್ಕೆ ಈ ರೀತಿ ಆಗುತ್ತಿದೆ ಎಂದು ಗೊತ್ತಿಲ್ಲ. ಇದು ನಿಜವಾಗಿಯೂ ಬೌಲರ್‌ಗಳಿಗೆ ಕಠಿಣವಾಗಿದೆ. ಇಂಥಾ ಕಂಡೀಷನ್ಸ್‌ನಲ್ಲಿ ಈ ಚೆಂಡಿನ ಮೂಲಕ ವಿಕೆಟ್‌ ಪಡೆಯುವುದು ಕಷ್ಟ.

ಶುಭ್​ಮನ್ ಗಿಲ್, ಕ್ಯಾಪ್ಟನ್

ಇದನ್ನೂ ಓದಿ:ವಿಶ್ವಕ್ಕೆ ದೊಡ್ಡ ಮೆಸೇಜ್​ ಕೊಡಲಿದೆ ಭಾರತ.. ಶೀಘ್ರದಲ್ಲೇ ಹೈಪರ್ಸಾನಿಕ್ ಮಿಸೈಲ್ ವಿಷ್ಣುವಿನ ಪರೀಕ್ಷೆ!

publive-image

ಇದ್ರ ನಡುವೆ ಈ ಮಾತನಾಡಿರೋ ಡ್ಯೂಕ್ ಬಾಲ್ ಕಂಪನಿಯ ಮಾಲೀಕ ದಿಲೀಪ್ ಜಜೋಡಿಯಾ, ಇದಕ್ಕೆ ಬ್ಯಾಟ್​ ಕಾರಣ ಎಂದು ದೂರಿದ್ದಾರೆ.

ಇದಕ್ಕೆ ಉತ್ತರಿಸುವವ ನಾನಲ್ಲ. ಅದಕ್ಕೆ ಬೇರೆ ಅಥಾರಿಟಿ ಇದೆ. ಪಿಚ್ ಹೆಚ್ಚು ಡ್ರೈ ಇದೆ. ಕಂಡೀಷನ್ಸ್​ ಬದಲಾಗಿದೆ. ಇದು ಚೆಂಡಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಅಲ್ಲದೇ ಬ್ಯಾಟ್‌ಗಳೂ ಈಗ ಹೆಚ್ಚು ಬಲಯುತವಾಗಿವೆ. ಇಂತಹದರಲ್ಲಿ ಚೆಂಡು ಬಾಳಿಕೆ ಬರುವುದು ಕಷ್ಟ. ಇದು ಅಧಿಕೃತವಲ್ಲ. ಹೀಗಾಗುವ ಸಾಧ್ಯತೆ ಇದೆ.

ದಿಲೀಪ್ ಜಜೋಡಿಯಾ, ಡ್ಯೂಕ್ ಬಾಲ್ ಕಂಪನಿ ಮಾಲೀಕ

ಇಂಗ್ಲೆಂಡ್​ ಪಿಚ್​ ಎಂದಾಕ್ಷಣ ಸ್ವಿಂಗ್, ಸೀಮ್ ಕಣ್ಣಿಗೆ ಹಬ್ಬವಾಗಬೇಕಿತ್ತು. ರಿಯಲ್ ಬ್ಯಾಟ್ & ಬಾಲ್ ಕಾಂಪಿಟೇಷನ್ ನಡೀಯಬೇಕಿತ್ತು. ಆದ್ರೆ, ಕಳಪೆ ಗುಣಮಟ್ಟದ ಡ್ಯೂಕ್​ ಬಾಲ್​ ಟೆಸ್ಟ್​ ಕ್ರಿಕೆಟ್​ನ ಮಜಾವನ್ನೆ ಕಿತ್ತುಕೊಂಡಂತಿದೆ. ಇನ್ನಾದ್ರೂ ಇಸಿಬಿ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳುತ್ತಾ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment