newsfirstkannada.com

ಈ ಬಾರಿ ಸ್ಪೆಷಲ್ ಹುಟ್ಟುಹಬ್ಬ ಆಚರಣೆ.. ದುನಿಯಾ ವಿಜಯ್ ಅಭಿಮಾನಿಗಳಿಗೆ ವಿಶೇಷ ಮನವಿ

Share :

Published January 15, 2024 at 8:27am

    ಅಭಿಮಾನಿಗಳು ಹೀಗೆಲ್ಲ ಮಾಡಬಾರದೆಂದ ದುನಿಯಾ ವಿಜಯ್

    ಹುಟ್ಟು ಹಬ್ಬದಂದೇ ಭೀಮ ಸಿನಿಮಾದ ಟೀಸರ್ ಕಾರ್ಯಕ್ರಮ.!

    ದುನಿಯಾ ವಿಜಯ್ ಅವರ ಎಷ್ಟನೇ ವರ್ಷದ ಬರ್ತ್​ಡೇ ಇದು.?

ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್, ದುನಿಯಾ ಸಿನಿಮಾ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ತಮ್ಮ ಗುರುತು ಮೂಡಿಸಿದವರು. ಸ್ಟಂಟ್​, ಪೈಟಿಂಗ್​, ಆಕರ್ಷಣೆಯಾದ ಮೈಕಟ್ಟು ಮೂಲಕ ಅಭಿಮಾನಿಗಳ ಸೆಳೆದ ನಟ. ದುನಿಯಾದಿಂದ ಒಂಟಿ ‘ಸಲಗ’ದಂತೆ ಮೈಕೊಡವಿ ಸದ್ಯ ‘ಭೀಮ’ನಾಗಿರುವ ವಿಜಯ್​ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಾರಿ ಹಾಫ್​ಸೆಂಚುರಿ ಬಾರಿಸುತ್ತಿದ್ದು ಇದೇ ಖುಷಿಯಲ್ಲಿ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆಯ ಮನವಿ ಮಾಡಿಕೊಂಡಿಂದ್ದಾರೆ.

ಇದೇ ಜನವರಿ 20ಕ್ಕೆ ನಟ ದುನಿಯಾ ವಿಜಯ್ ಅವರು 50ನೇ ವಸಂತಕ್ಕೆ ಕಾಲಿಡುತ್ತಿದ್ದು ಹುಟ್ಟೂರಾದ ಬೆಂಗಳೂರಿನ ಕುಂಬಾರನ ಹಳ್ಳಿಯಲ್ಲಿ ಬರ್ತ್​​ ಡೇಯನ್ನು ಸೆಲೆಬ್ರೆಷನ್ ಮಾಡಿಕೊಳ್ಳಲಿದ್ದಾರೆ. ಇದೇ ಸಂಬಂಧ ಮಾಧ್ಯಮಗೋಷ್ಠಿ ನಡೆಸಿದ ದುನಿಯಾ ವಿಜಯ್ ಅವರು, ಬರ್ತ್​​ಡೇಗೆ 5 ದಿನ ಮೊದಲೇ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ಯಾವ ಅಭಿಮಾನಿಗಳು ಸಹ ಈ ಬಾರಿ ನಡೆದುಕೊಂಡು ಬರಬೇಡಿ, ಸುರಕ್ಷಿತವಾಗಿ ವಾಹನಗಳಲ್ಲಿ ಬಂದು ಸುರಕ್ಷಿತವಾಗಿ ಹೋಗಿ. ಕೇಕ್, ಹಾರ ತರಬೇಡಿ, ನಿಮ್ಮೊಂದಿಗೆ ಕೂತು ಊಟ ಮಾಡುವ ಆಸೆ ಅಷ್ಟೇ ನನಗೆ. ನೀವು ಸುರಕ್ಷಿತವಾಗಿರುವುದೇ ನನಗೆ ಬೇಕಾಗಿರುವುದು ಅಂತ ಹೇಳಿದ್ದಾರೆ.

ಎಲ್ಲರು ಬಂದು ನನಗೆ ಹರಸಿ, ಆಶೀರ್ವದಿಸಿ

ಈ ಬಾರಿಯು ನನ್ನೂರಿನಲ್ಲಿ ಬರ್ತ್​​ಡೇ ಸೆಲೆಬ್ರೆಷನ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಬಂದು ನನಗೆ ಹರಸಿ, ಆಶೀರ್ವದಿಸಿ. ಯಾರೂ ಕೇಕ್, ಹೂವಿನ ಹಾರಗಳನ್ನು ತರಬೇಡಿ, ಪಾದಯಾತ್ರೆ ಮಾಡಬೇಡಿ. ಬ್ಯಾನರ್ ಹಾಕುವುದು, ಹಾಲಿನ ಅಭಿಷೇಕ ಮಾಡುವುದು ಇದೆಲ್ಲ ಬೇಡ. ಅಭಿಮಾನಿಗಳು ಅನಾಹುತ ಮಾಡಿಕೊಳ್ಳಬಾರದು. ನೀವು ನಮ್ಮ ಸಿನಿಮಾಗಳನ್ನ ನೋಡಿ ಹರಸಿದರೆ ಅಷ್ಟೇ ಸಾಕು, ಹಾಲು ಕುಡಿದಷ್ಟು ಸಂತಸವಾಗುತ್ತದೆ ಎಂದಿದ್ದಾರೆ.

ಇದೇ ಜನವರಿ 20 ರಂದು ಬೆಳಗ್ಗೆಯೇ ಅಭಿಮಾನಿಗಳು ಬರಬೇಕು. ಜ.19ರ ರಾತ್ರಿ ಬಂದು ಕಾಯುವುದು ಬೇಡ. ತುಂಬಾ ಚಳಿ ಇರುತ್ತದೆ. ಬರ್ತ್​ ಡೇ ದಿನನೇ ಭೀಮ ಸಿನಿಮಾದ ಟೀಸರ್ ಬಿಡುಗಡೆಯ ಕಾರ್ಯಕ್ರಮ ಇರುತ್ತದೆ. ಎಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ. ಈಗಾಗಲೇ ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ್ದು ನನ್ನ ಜೀವನ 50ನೇ ವಸಂತಕ್ಕೆ ಕಾಲಿಡುತ್ತಿದೆ. ಎಲ್ಲರೂ ಶುಭಹಾರೈಸಿ, ಆಶೀರ್ವಾದ ಮಾಡಿ ಎಂದು ಅಭಿಮಾನಿಗಳ ಬಳಿ ದುನಿಯಾ ವಿಜಯ್ ಮನವಿ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಬಾರಿ ಸ್ಪೆಷಲ್ ಹುಟ್ಟುಹಬ್ಬ ಆಚರಣೆ.. ದುನಿಯಾ ವಿಜಯ್ ಅಭಿಮಾನಿಗಳಿಗೆ ವಿಶೇಷ ಮನವಿ

https://newsfirstlive.com/wp-content/uploads/2024/01/DUNIYA_VIJAY-2.jpg

Load More