/newsfirstlive-kannada/media/post_attachments/wp-content/uploads/2024/08/Bhima-1.jpg)
ಸ್ಯಾಂಡಲ್​ವುಡ್​ ಸಲಗ ಎಂದೇ ಖ್ಯಾತಿ ಪಡೆದ ದುನಿಯಾ ವಿಜಯ್​ ಎರಡನೇ ಬಾರಿಗೆ ನಟನೆಯ ಜೊತೆಗೆ ಆ್ಯಕ್ಷನ್​ ಕಟ್​ ಹೇಳಿ ಸೈ ಎನಿಸಿಕೊಂಡಿದ್ದಾರೆ. ಈ ಬಾರಿ ‘ಭೀಮ’ ಅವತಾರದಲ್ಲಿ ಮುಂದೆ ಬಂದ ಬ್ಲಾಕ್​ ಕೋಬ್ರಾ ಅಭಿಮಾನಿಗಳನ್ನು ಮನಪೂರ್ಪಕವಾಗಿ ರಂಜಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ‘ಭೀಮ’ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಅಂದಹಾಗೆಯೇ ‘ಭೀಮ’ 3 ದಿನ ಕಲೆಕ್ಷನ್​ ಎಷ್ಟಿದೆ ನೋಡೋಣ.
ದುನಿಯಾ ವಿಜಯ್​ ‘ಸಲಗ’ ಸಿನಿಮಾಗೆ ಡೈರೆಕ್ಟರ್​ ಕ್ಯಾಪ್​ ಜೊತೆಗೆ ನಾಯಕ ನಟನಾಗಿ ಕಣಕ್ಕಿಳಿದರು. ಆ ಬಳಿಕ ‘ಭೀಮ’ ಮೂಲಕ ತೆರೆಗೆ ಬಂದಿದ್ದಾರೆ. ಅಂದಹಾಗೆಯೇ ವಿಜಯ್​​ ಡ್ರಗ್ಸ್​​ ವಿರುದ್ಧ ಹೋರಾಡುವ ನಾಯಕನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆಯೇ ಕನ್ನಡಿಗರ ಮನಗೆದ್ದ ಈ ಸಿನಿಮಾ ವಾರಾಂತ್ಯದಲ್ಲಿ 11.15 ಕೋಟಿ ರೂಪಾಯಿಯನ್ನು ಸಂಗ್ರಹಿಸಿ ಮುನ್ನುಗ್ಗುತ್ತಿದೆ.
ಶುಭ ಶುಕ್ರವಾರದಂದು ತೆರೆಕಂಡ ಸಿನಿಮಾ 3.95 ಕೋಟಿ ಕಲೆಕ್ಷನ್​ ಮಾಡಿತು. ಆ ಬಳಿಕ ಶನಿವಾರ 3.4 ಕೋಟಿ ಕಲೆಕ್ಷನ್​ ಮಾಡಿದೆ. ಭಾನುವಾರದಂದು 3.80 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಅಂದಹಾಗೆಯೇ ‘ಭೀಮ’ ಬಿಡುಗಡೆಗೊಂಡ 3 ದಿನಗಳಲ್ಲಿ 11.15 ಕೋಟಿ ಕಬಳಿಸಿ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ಲಾರಿಗೆ ಡಿಕ್ಕಿ ಹೊಡೆದ ಕಾರು.. ಐವರು ವಿದ್ಯಾರ್ಥಿಗಳು ಸಾವು, ಇಬ್ಬರು ಗಂಭೀರ
‘ಭೀಮ’ ಚಿತ್ರದಲ್ಲಿ ಅಶ್ವಿನಿ, ಕಲ್ಯಾಣಿ ರಾಜು, ಬ್ಲ್ಯಾಕ್ ಡ್ರ್ಯಾಗನ್ ಮಜ್ನು, ಕಾಕ್ರೋಚ್​ ಸುಧಿ ಮತ್ತು ಅಚ್ಯುತ್ ಕುಮಾರ್ ಸೇರಿದಂತೆ ಇತರರು ನಟಿಸಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ