/newsfirstlive-kannada/media/post_attachments/wp-content/uploads/2023/10/duniya-2.jpg)
ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್​ನನ್ನ ನಡುರಸ್ತೆಯಲ್ಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಭೀಮ ಶೂಟಿಂಗ್​ ಕ್ಲೈಮ್ಯಾಕ್ಸ್​ನಲ್ಲಿ ಬ್ಲ್ಯಾಕ್​ ಕೋಬ್ರಾನನ್ನು ಅರೆಸ್ಟ್​ ಮಾಡುವ ದೃಶ್ಯ ಸನ್ನಿವೇಶವಿದ್ದು, ಈ ಶೂಟಿಂಗ್​ ದೃಶ್ಯವನ್ನು ಕಂಡ ಅಭಿಮಾನಿಗಳು ಸಂತಸಗೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2023/12/Bhima.jpg)
ಬೆಂಗಳೂರಿನ ವಿನೋವಾ ನಗರದ ಗಲ್ಲಿಗಳಲ್ಲಿ ದುನಿಯಾ ವಿಜಯ್ ನಟನೆಯ ಭೀಮ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆದಿದ್ದು, ನಿನ್ನೆ ರಾತ್ರಿ ಕೊನೆ ದಿನದ ಶೂಟಿಂಗ್ ಮುಕ್ತಾಯವಾಗಿದೆ. ದುನಿಯಾ ವಿಜಿಯನ್ನ ಪೊಲೀಸರು ಅರೆಸ್ಟ್​ ಮಾಡುವ ದೃಶ್ಯದ ಚಿತ್ರೀಕರಣ ಮಾಡಲಾಗಿದ್ದು, ನೂರಾರು ಜನಗಳ ಮಧ್ಯೆನೇ ರಿಯಲ್ಲಾಗಿ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2023/12/Duniya-Vijay-2.jpg)
ಈಗಾಗಲೇ ಭೀಮ ಸಿನಿಮಾದ ಹಾಡುಗಳು ಯ್ಯೂಟೂಬ್​ನಲ್ಲಿ ರಾರಾಜಿಸುತ್ತಿದೆ. ಅದರಲ್ಲೂ ಬ್ಯಾಡ್​ ಬಾಯ್ಸ್​ ಪಡ್ಡೆ ಹುಡುಗರ ಮನಗೆದ್ದರೆ, ಲವ್​ ಯೂ ಕಣೆ ಹಾಡು ಪ್ರೇಮಿಗಳ ಮನಗೆದ್ದಿದೆ. ಇವೆರಡು ಹಾಡು ಯ್ಯೂಟೂಬ್​ನಲ್ಲಿ ಸಖತ್​ ಆಗಿ ಸೌಂಡ್​ ಮಾಡುತ್ತಿವೆ.
ಇನ್ನು ದುನಿಯಾ ವಿಜಯ್​ ನಿರ್ದೇಶನದಲ್ಲಿ ಭೀಮ ಸಿನಿಮಾ ಮೂಡಿಬರುತ್ತಿದೆ. 2ನೇ ಬಾರಿ ಈ ನಟ ಡೈರೆಕ್ಟರ್​ ಕ್ಯಾಪ್​ ತೊಟ್ಟಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us